ಪುರಾಣ ಎಂಬುದೊಂದು ಹೊಳಿ, ಅದರೊಳಗೆ ಇಳಿ, ಆಧ್ಯಾತ್ಮ ತಿಳಿ

ಕಲಬುರಗಿ; ಮಹಾದಾಸೋಹಿ ಶರಣಬಸವೇಶ್ವರ ಕಾಯಕ ಮತ್ತು ದಾಸೋಹ ಪ್ರಭಾವಕ್ಕೊಳಗಾಗಿದ್ದ ಸಗರನಾಡಿನ ಮಹಾತ್ಮಾ ಚರಬಸವೇಶ್ವರ ಶರಣರ ಪುರಾಣ ಪ್ರವಚನ ಆಚರಣೆ ಪುಣ್ಯದ ಕೆಲಸ ಅಂತಹ ಕೆಲಸ ವಿದ್ಯಾನಗರದ ವಿದ್ಯಾವಂತರು ತಿಂಗಳ ಪರ್ಯಂತ ಆಚರಣೆ ಮಾಡಿದ್ದು, ಅರ್ಥಪೂರ್ಣವಾಗಿದೆ ಎಂದು ಯಡ್ರಾಮಿಯ ವೀರಕ್ತ ಮಠದ ಪೂಜ್ಯರಾದ ಶ್ರೀ ಮ.ನಿ.ಪ್ರ ಸಿದ್ಧಲಿಂಗ ಸ್ವಾಮಿಗಳು ಪುರಾಣ ಮಂಗಲೋತ್ಸವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಧರ್ಮೋ ರಕ್ಷತಿ ರಕ್ಷಿತಃ ಅಂದರೆ ನಾವು ಧರ್ಮವನ್ನು ಕಾಪಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಎಂಬುದು ಪ್ರಾಚೀನ ಉಕ್ತಿ, ಆದರೆ ಇಂದು ಧರ್ಮದ ಅಪವ್ಯಾಖ್ಯಾನದಿಂದ ಸಮಾಜ ಅವನತಿಯತ್ತ ಸಾಗುತ್ತಿದೆ. ಧರ್ಮ ಎಂಬುದು “ಮತ” ಎಂಬ ಸಂಕೂಚಿತ ಅರ್ಥದಲ್ಲಿ ಬಳಕೆಯಾಗುತ್ತಿರುವುದು ವಿಷಾಧನಿಯ ಎನ್ನುತ್ತ ಒಂದಂತು ನಿಜ ಈ ಭೂಮಿಯ ಋಣ ಮುಗಿದಿಲ್ಲ ಎಂದಾದರೆ ಎಂತಹ ರೋಗ ಬಂದರು ನಮಗೆ ಏನೂ ಆಗುವುದಿಲ್ಲ. ಋಣ ಮುಗಿಯಿತು ಅಂದರೆ ನಮ್ಮೆತ್ತರಕ್ಕೆ ಹಣದ ರಾಶಿ ಸೂರಿದರು ನಾವು ಉಳಿಯುವುದಿಲ್ಲ. ಎಂದು ಅನೇಕ ಧರ್ಮ ಹಾಗು ಆಧ್ಯಾತ್ಮಿಕ ಮಹತ್ವದ ಕುರಿತು ಚರಬಸವೇಶ್ವರ ಸಂಸ್ಥಾನದ ವಂಶಸ್ಥರು ಹಾಗು ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಡಾ. ಶರಣು ಬಿ. ಗದ್ದುಗೆ ಮಾತನಾಡಿದರು.

ಮಹಾನಗರ ಪಾಲಿಕೆ ಸದಸ್ಯರಾದ ಯಂಕಮ್ಮ ಗುತ್ತೇದಾರ, ಆರಕ್ಷಕ ನಿರೀಕ್ಷಕರಾದ ಶಿವಾನಂದ ವಾಲಿಕಾರ, ವಿದ್ಯಾನಗರ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಉಪಾಧ್ಯಕ್ಷ ಉಮೇಶ ಶೆಟ್ಟಿ, ಕಾರ್ಯದರ್ಶಿ ಶಿವರಾಜ ಅಂಡಗಿ, ವೇದಿಕೆ ಮೇಲೆ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಸಂಗೀತ ಕಲಾವಿದರಾದ ಶಿವಕುಮಾರ ಹಿರೇಮಠ, ಸಿದ್ಧಣ್ಣ ದೇಸಾಯಿ ಕಲ್ಲೂರ ಅವರಿಂದ ಪ್ರಾರ್ಥನೆ ಹಾಗು ವಚನ ಸಂಗೀತ ನಡೆಯಿತು. ಪುರಾಣ ಪ್ರವಚನಕಾರರಾದ ವೇ.ಮೂ. ಶಂಭುಲಿಂಗ ಶಾಸ್ತ್ರಿಗಳು, ಪುರಾಣ ಅಧ್ಯಯನ ಓದಿ ಮಂಗಳಗೊಳಿಸಿದ ನಂತರ ತೊಟ್ಟಿಲು ಹರಾಜಿನ ಪ್ರಕ್ರೀಯೆಯಲ್ಲಿ ರೇವಣಸಿದ್ದಪ್ಪ ಜೀವಣಗಿ, ರೇವಣಸಿದ್ದಪ್ಪ ಗೌನಳ್ಳಿ, ಮಲ್ಲಿಕಾರ್ಜುನ ಕಾಳೆ ಭಾಗವಹಿಸಿ ಕೊನೆಯಲ್ಲಿ ರೇವಣಸಿದ್ದಪ್ಪ ಜೀವಣಗಿ ಅವರು ಪೂಜ್ಯಶ್ರೀಗಳಿಂದ ತೊಟ್ಟಿಲು ಪಡೆದುಕೊಂಡರು.

ಪ್ರಸಾದ ಕಮಿಟಿಯ ಸದಸ್ಯರಾದ ಬಸವಂತರಾವ ಜಾಬಶೆಟ್ಟಿ, ಸುಭಾಷ ಮಂಠಾಳೆ, ವಿಶ್ವನಾಥ ರಟಕಲ್, ನಾಗರಾಜ ಹೆಬ್ಬಾಳ, ನಾಗಭೂಷಣ ಹಿಂದೊಡ್ಡಿ ಇವರ ನೇತ್ರತ್ವದಲ್ಲಿ ಮಲ್ಲಿಕಾರ್ಜುನ ತರುಣ ಸಂಘದ ಸದಸ್ಯರಾದ ತರುಣಶೇಖರ ಬಿರಾದಾರ, ಕರಣಕುಮಾರ ಆಂದೋಲಾ, ಶಶಿಧರ ಪ್ಯಾಟಿ, ಗುರುರಾಜ ಮುಗಳಿ, ಶ್ರೀವತ್ಸ ಸಂಗೋಳಗಿ, ಅಮಿತ ಸಿಕೇದ್, ಸಂಗಮೇಶ ಹೆಬ್ಬಾಳ ಹಾಗು ಇತರರು ಕಾರ್ಯಕ್ರಮಕ್ಕೆ ಬಂದ ಸಾವಿರಾರು ಭಕ್ತರಿಗೆ ಅಚ್ಚುಕಟ್ಟಾಗಿ ಪ್ರಸಾದ ವಿತರಣೆ ಮಾಡಿದರು ಎಂದು ಕಾರ್ಯಕ್ರಮ ಸಂಚಾಲಕತ್ವ ವಹಿಸಿದ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ಬಂದಾ ನವಾಜ್ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಚಿವ ಜಮೀರ್ ಅಹ್ಮದ್ ಖಾನ್

ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…

11 hours ago

ಕಣ್ಣುಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಲು ಜಿ. ಪಂ. ಮಾಜಿ ಸದಸ್ಯೆ ಅನಿತಾ ವಳಕೇರಿ ಕರೆ

ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…

12 hours ago

ಲಿಂಗರಾಜ ಶಾಸ್ತ್ರಿ ಪುಣ್ಯಸ್ಮರಣೋತ್ಸವ: ಬಹುಮುಖ ವ್ಯಕ್ತಿತ್ವದ ಶಾಸ್ತ್ರಿ

ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್‌ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…

12 hours ago

ಕಲಬುರಗಿ: ನಕಲಿ ವೈದ್ಯರ ಹಾವಳಿ ತಡೆಯಲು ಆರೋಗ್ಯಧಿಕಾರಿಗೆ‌ ಮನವಿ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…

12 hours ago

ವೀ.ಲಿಂ.ಸಂಘಟನಾ ವೇದಿಕೆ ವಿದ್ಯಾರ್ಥಿ ಘಟಕದ ಅಧ್ಯಕ್ಷ ಬಸವರಾಜ ಶೆಳ್ಳಗಿ

ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…

13 hours ago

ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ವಿಶ್ವ ಓಜೋನ್ ದಿನ

ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420