ಶಿಕ್ಷಕರ ದಿನಾಚರಣೆ ನಿಮಿತ್ತ ಕಲ್ಯಾಣ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ: ಭಾರತವು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರನ್ನು ಸ್ಮರಿಸುವ ದಿನ. ದೇಶದ ಎಲ್ಲ ಪ್ರಜೆಗಳು ಸಹ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿ, ತಪ್ಪನ್ನು ತಿದ್ದಿ, ಪಾಠ ಹೇಳಿಕೊಟ್ಟ, ಅಕ್ಷರ ಕಲಿಸಿಕೊಟ್ಟ, ಜೀವನಕ್ಕೆ ಮಾರ್ಗದರ್ಶನ ನೀಡುವ ತಮ್ಮೆಲ್ಲ ಶಿಕ್ಷಕರನ್ನು ನೆನಪಿಸಿ ಅವರಿಗೆ ಧನ್ಯವಾದಗಳನ್ನು ಹೇಳುವ ದಿನ ಎಂದು ಕಸಾಪ ನಿಕಟ ಪೂರ್ವ ಅಧ್ಯಕ್ಷರಾದ‌ ಮಹಿಪಾಲರೆಡ್ಡಿ ಮುನ್ನೂರ್ ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಕಲಬುರ್ಗಿ ಜಿಲ್ಲಾ ಘಟಕ ವತಿಯಿಂದ ಸೆಪ್ಟೆಂಬರ್ 5ರಂದು ನಗರದ ಕಲಾಮಂಡಳದಲ್ಲಿ ಸಂಜೆ 5-30ಗಂಟೆಗೆ ಶಿಕ್ಷಕ ದಿನಾಚರಣೆ ಮತ್ತು ಕರ್ನಾಟಕ 50ರ ಸಂಭ್ರಮ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕಲ್ಯಾಣರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಕರು, ತಮ್ಮ ಜೀವಿತಾವಧಿಯಲ್ಲಿ ಎಲ್ಲರನ್ನು ಒಂದೊಂದು ಮಹತ್ತರ ಸಾಧನೆಗೆ ಪ್ರೇರೇಪಿಸಿ, ಅವರ ಯಶಸ್ಸಿಗೆ ಕಾರಣರಾಗಿ, ಆದರೆ ತಾವು ಮಾತ್ರ ಹಾಗೆಯೇ ಉಳಿಯುವ – ಅದೇ ಸೇವೆಯಲ್ಲಿಯೇ ಉಳಿಯುವವರೆಂದರೆ ಅದೇ ಶಿಕ್ಷಕರು ಎಂದರು.

ಕನ್ಮಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ದೇಶ ಕಂಡ ಶ್ರೇಷ್ಠ ಶಿಕ್ಷಕರಾದ ಇವರು ಖ್ಯಾತ ತತ್ವಶಾಸ್ತ್ರಜ್ಞರಾಗಿದ್ದು, ತಮ್ಮ ಜೀವನವನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಬಹುಪಾಲು ಮೀಸಲಿಟ್ಟವರು ಎಂದೇ ಹೇಳುತ್ತವೆ.

ಇಂದಿನ ಟೆಕ್‌ವರ್ಲ್ಡ್‌ನಲ್ಲಿ ಶಿಕ್ಷಕರ ದಿನವನ್ನು ನೆನೆಯದವರಿಲ್ಲ. ಹಾಗೆ ಮರೆಯುವವರಿಲ್ಲ. ಪ್ರತಿಯೊಬ್ಬ ಪ್ರಜೆಗೂ ಸಹ ಶಿಕ್ಷಕರ ದಿನದ ಮಹತ್ವ ಗೊತ್ತು. ಈ ದಿನದಂದು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಾಲಾ -ಕಾಲೇಜುಗಳಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುತ್ತಿರುವುದು. ಕರವೇ (ಕಾವಲು ಪಡೆ) ಅಂತಹ‌ ಸಂಘಟನೆಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಮಾರಂಭದಲ್ಲಿ ಮಕ್ಕಳ ಹರಿಯ ಸಾಹಿತಿ ಎ.ಕೆ. ರಾಮೇಶ್ವರ, ಸಂಡಿಕೇಟ್ ಮಾಜಿ ಸದಸ್ಯ ಸುನೀಲ್ ವಂಟಿ, ಕರವೇ
ಕಾವಲು ಪಡೆ ಜಿಲ್ಲಾಧ್ಯಕ್ಷರಾದ ಮಂಜುನಾಥ ನಾಲವಾರಕರ್ ವೇದಿಕೆ‌ ಮೇಲಿದ್ದರು.

ಕರ್ನಾಟಕ 50ರ ಸಂಭ್ರಮದ ನಿಮಿತ್ಗ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಡಾ. ಸಂತೋಷ್ ಮಂಗಶೆಟ್ಟಿ, ಡಾ. ದೇವಿದಾಸ್ ಎಸ್ ಪಾಟೀಲ್, ಡಾ. ಎಸ್ ಎಸ್ ಗುಬ್ಬಿ, ಡಾ. ಪ್ರತಿಭಾ ಎಸ್ ಕಾಮರೆಡ್ಡಿ, ಡಾ. ರಾಜಶೇಖರ್ ಯಕ್ಕೆಳ್ಳಿ, ರವಿಚಂದ್ರ ಗುತ್ತೇದಾರ್ , ಶ್ರೀಮತಿ ಸುಮಂಗಲಾ, ಬಂದೇ ನವಾಜ್, ಎ.ಕೆ. ರಾಮೇಶ್ವರ್ ಮಹಿಪಾಲ್ ರೆಡ್ಡಿ ಮುನ್ನೂರ, ಡಾ. ಶಾಂತಾ ಪಸ್ತಾಪುರ್. ಡಾ. ಶರಣಬಸಪ್ಪ ವಡ್ಡನಕೇರಿ, ಪ್ರೊ. ಜಿ.ಎಸ್ ಮಾಲಿ ಪಾಟೀಲ್, ಶ್ರೀಮತಿ ಭಾಗಮ್ಮ ಆರ್. ಉದನೂರ್, ಬಾಬುರಾವ್ ಕೋಬಾಳ್, ಮೊಹಮ್ಮದ್ ಮುಕ್ತಾರೋದ್ದಿನ್, ಮನೋಹರ್ ಬಿರನೂರ್ , ಸಚಿನ್ ಪರಹತಬಾದ, ಅವಿನಾಶ್ ಭಾಸ್ಕರ್, ಜಿ ಸತೀಶ್, ಅಂಬಾದಾಸ್ ಸೂರ್ಯಚಂದ್ರ, ಬಸವರಾಜ್ ಎಂ. ರಾವೂರ್, ಅಂಬಾ ರಾಯ ಬೆಳಕೋಟಿ, ಅವರಿಗೆ ಕಲ್ಯಾಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು., ಅತ್ಯುತ್ತಮ ಶಿಕ್ಷಕರಾದ ಡಾ. ಗೋಳಪ್ಪ ಜಿ. ರಾಜಾಪುರ್, ಶ್ರೀಮತಿ ಸುರೇಖಾ ಜೆ ಡೆಂಗಿ, ಗುರುಲಿಂಗಪ್ಪ ದುಧನಿಕರ್, ಶ್ರೀಮತಿ ಚನ್ನಮ್ಮ ವಿ.ರೆಡ್ಡಿ, ಶ್ರೀಮತಿ ರೇಣುಕಾ ಜಮಾದಾರ್ ಇವರಿಗೆ ಡಾ. ಎಸ್ ರಾಧಾಕೃಷ್ಣ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸಮಾರಂಭದಲ್ಲಿ ಕರವೇ ಜಿಲ್ಲಾ ಕಾರ್ಯಾಧ್ಯಕ್ಷ ಪ್ರಹ್ಲಾದ್ ಹಡಗಿಲಕರ್, ಚರಣರಾಜ್ ರಾಠೋಡ, ವಿನೋದರಾಜ್ ರಾಠೋಡ್ ಸೇರಿದಂತೆ ಇನ್ನಿತರರಿದ್ದರು.

emedialine

Recent Posts

ಮಾಜಿ ಸಚಿವ ಎಸ್.ಕೆ ಕಾಂತ ಅವರ ಆರೋಗ್ಯ ವಿಚಾರಿಸಿದ ಸಿಎಂ

ಕಲಬುರಗಿ: 19ನೇ ಸಚಿವ ಸಂಪುಟದ ಹಿನ್ನೆಲೆಯಲ್ಲಿ ಕಲಬುರಗಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ…

16 mins ago

ಶಹಾಬಾದ ತಾಲ್ಲೂಕಿನದ್ಯಂತ ಸೆ. 17ಕ್ಕೆ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಿ

ಶಹಾಬಾದ: ಸಪ್ಟೆಂಬರ್ 17ರಂದು ತಾಲೂಕಿನ ಎಲ್ಲಾ ಸರ್ಕಾರಿ,ಅರೆ ಸರ್ಕಾರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಹಾಗೂ ವಿಶ್ವಕರ್ಮ…

18 mins ago

ಶಹಾಬಾದ ಕಾರ್ಖಾನೆಗಳನ್ನು ಪ್ರಾರಂಭಿಸಲು ಹಿರೇಮಠ ಒತ್ತಾಯ

ಶಹಾಬಾದ: ತಾಲೂಕಿನ ಜೆಪಿ ಕಾರ್ಖಾನೆ ಮತ್ತು ಜಿಇ ಕಾರ್ಖಾನೆ ಕಾರ್ಖಾನೆಗಳನ್ನು ಪುನಃ ಪ್ರಾರಂಭ ಮಾಡಲು ಮಂಗಳವಾರ ಕಲಬುರಗಿಯಲ್ಲಿ ನಡೆಯುವ ಸಚಿವ…

48 mins ago

MRW/VRW/URW ಕಾರ್ಯಕರ್ತರ ಅನಿರ್ಧಿಷ್ಟಾವಧಿ ಧರಣಿ ದಲಿತ ಸೇನೆ ಬೆಂಬಲ

ಕಲಬುರಗಿ: ನವ ಕರ್ನಾಟಕ MRW/VRW/URW ಗೌರವ ಧನ ಕಾರ್ಯಕರ್ತರ ಖಾಯಮಾತಿಗಾಗಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಗೆ ಅಖಿಲ ಕರ್ನಾಟಕ ದಲಿತ ಸೇನೆ…

52 mins ago

ಸಚಿವ ಸಂಪುಟದಲ್ಲಿ ಸಭೆಯಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಸುಪ್ರೀಂಕೋರ್ಟ್ ತೀರ್ಪಿನಂತೆ ಒಳಮೀಸಲಾತಿಯನ್ನು ರಾಜ್ಯ ಸರಕಾರ ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟ…

55 mins ago

20 ಕೋಟಿಗೂ ಮೀರಿ ಹಣ ದುರುಪಯೋಗ ಬ್ರಷ್ಟಾಚಾರದ ಬಗ್ಗೆ ಶೀಘ್ರದಲ್ಲಿ ಕ್ರಮ ವಹಿಸಬೇಕು

ಕಲಬುರಗಿ: ಪ್ರೀಯಾಂಕ ಖರ್ಗೆ ಚಿತ್ತಾಪೂರ ಮತಕ್ಷೇತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇವರ ಕ್ಷೇತ್ರದ ಬಿ.ಇ.ಓ ಕವೇರಿಯಲ್ಲಿ 20 ಕೋಟಿ…

56 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420