ಕಲಬುರಗಿ: “ವೆಲ್ಫೇರ್ ಯುವ ಕರ್ನಾಟಕ” ಉದ್ಘಾಟನೆ

ಕಲಬುರಗಿ: ನಗರದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯದ ಯುವ ಸಂಘಟನೆ “ವೆಲ್ಫೇರ್ ಯುವ ಕರ್ನಾಟಕ” ಇದರ ಉದ್ಘಾಟನೆ ಸಂಭ್ರಮದಿಂದ ನೆರವೇರಿದ್ದು, ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಯುವಕರು ಪಾಲಗೊಂಡಿದರು.

ಸಮ್ಮೇಳನ ಸಭಾಂಗಣಕ್ಕೆ ಜಾಥಾವನ್ನು ಸಂಘಟಿಸಲಾಗಿತ್ತು, ಯುವಕರು ಅತೀ ಉತ್ಸಾಹದಿಂದ ಘೋಷಣೆಗಳನ್ನು ಕೂಗುತ್ತ ಸಭಾಂಗಣಕ್ಕೆ ತಲುಪಿದರು, ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೆರ್ ಹುಸೇನ್ ರವರು ಸಮಾವೇಶವನ್ನು ಉದ್ಘಾಟಿಸಿದರು, ನಂತರ ಧ್ವಜವನ್ನು ವೆಲ್ಫೇರ್ ಯುವ ಕರ್ನಾಟಕ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಮಾವೇಶದಲ್ಲಿ ಉತ್ತರ ಕರ್ನಾಟಕದ ನೂರಾರು ಯುವಕರು ಭಾಗವಹಿಸಿದ್ದರು. ಪಕ್ಷದ ರಾಜ್ಯ ಉಪಾಧ್ಯಕ್ಷ ಮುಜಾಹಿದ್ ಪಾಷಾ ಖುರೇಶಿ ಉದ್ಘಾಟನ ಭಾಷಣ ಮಾಡಿದರು.

ಈ ವೇಳೆ ಕಲಬುರಗಿ ನಗರದ ಇಬ್ಬರು ಸಾಧಕರಿಗೆ ವೆಲ್ಫೇರ್ ಯುವ ಪ್ರಶಸ್ತಿ ನೀಡಲಾಯಿತು.

ವೆಲ್ಪೇರ್ ಯುವ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫೀಕ್, ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ರಿಯಾಝ್ ಅಹಮದ್, ತಲತ್ ಯಾಸ್ಮೀನ್, ಮುಬೀನ್ ಅಹ್ಮದ್, ಆಸಿಫ್ ಬಿಳಿಕುದ್ರಿ, ಸಿ.ಎಚ್.ಸಲಾಮ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ರಾಜ್ಯ ಉಪಾಧ್ಯಕ್ಷ ಹಬೀಬುಲ್ಲಾ ಖಾನ್ ಅವರ ಸಮಾರೋಪ ಭಾಷಣದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಪಕ್ಷದ ಬಾಗಲಕೋಟೆ ಜಿಲ್ಲಾ ಉಪಾಧ್ಯಕ್ಷ ಅಫ್ಝಲ್ ಹುಸೇನ್ ಹುಮನಾಬಾದ ಕಾರ್ಯಕ್ರಮ ನಿರೂಪಿಸಿದರು.

emedialine

Recent Posts

ಕಲ್ಯಾಣ ಕರ್ನಾಟಕ ಉತ್ಸವ 18 ರಂದು ಆಚರಿಸಲು ಆಗ್ರಹ

ಕಲಬುರಗಿ:"ಕಲ್ಯಾಣ ಕರ್ನಾಟಕ ಉತ್ಸವ" ವನ್ನು ಸೆಪ್ಟೆಂಬರ್ "18" ರಂದು ಆಚರಿಸಲು ಕರ್ನಾಟಕ ಯುವಜನ ಒಕ್ಕೂಟ(ರಿ) ಮತ್ತು "ಕಲ್ಯಾಣ ಕರ್ನಾಟಕ ಪ್ರತ್ಯೇಕ…

9 hours ago

ಸಚಿವ ಸಂಪುಟ ಸಭೆಯ ಮೂಲಕ ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭಕ್ಕೆ ಮನವಿ

ಕಲಬುರಗಿ: ಸಚಿವ ಸಂಪುಟ ಸಭೆಯ ಮೂಲಕ ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭ ಮಾಡುವ ತೀರ್ಮಾನ ಕೈಗೊಳಬೇಕೆಂದು ಕಾಳಗಿ ತಾಲೂಕ…

9 hours ago

ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳುವ ನಿರೀಕ್ಷೆ ಇದೆ: ಭೀಮನಗೌಡ ಪರಗೊಂಡ

ಕಲಬುರಗಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಂದು ಹತ್ತು ವರ್ಷಗಳ ನಂತರ ಬಹುನಿರೀಕ್ಷಿಯ ಸಚಿವ ಸಂಪುಟ ಕಲಬುರಗಿಯಲ್ಲಿ ನಡೆಯುತ್ತಿರುವುದು ಈ ಭಾಗದ…

9 hours ago

10 ವರ್ಷಗಳ ನಂತರ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ: ಡಾ. ಅಜಯಸಿಂಗ್

ಕಲಬುರಗಿ, ಕಳೆದ ಹತ್ತು ವರ್ಷಗಳ ನಂತರ ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಇಂದು ಸೆಪ್ಟಂಬರ್ 17ರಂದು ರಾಜ್ಯ ಸಚಿವ ಸಂಪುಟ ಸಭೆ…

11 hours ago

ಕೆಐಡಿಸಿಸಿ ಕಪ್ ಕ್ರಿಕೆಟ್ ಟೋರ್ನಮೆಂಟ್ ಸೀಸನ್ 3 ಲಾಂಛನ ಬಿಡುಗಡೆಗೊಳಿಸಿದ ಸಿಎಂ ಸಿದ್ದರಾಮಯ್ಯ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ದ ಟಿವಿ ಛಾನೆಲ್ ಎಸ್ ಎಸ್ ವಿ ಟಿವಿ ಮತ್ತು ಜೈ ಭೀಮ್ ಟಿವಿ…

12 hours ago

ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಿ: ಶಾಸಕ ಡಾ.ಅಜಯ್ ಸಿಂಗ್

ಕಲಬುರಗಿ: ಪ್ಲಾಸ್ಟಿಕ್ ನಿಷೇಧಕ್ಕೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಕರಿಸಿದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಿದೆ ಎಂದು…

12 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420