ಸಿಯುಕೆಯಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ

ಕಲಬುರಗಿ; “ಹದಿಹರೆಯದವರು ಮತ್ತು ಯುವಕರಲ್ಲಿ ಆತ್ಮಹತ್ಯೆ ಸಾವುಗಳು ಹಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ” ಎಂದು ಮುಕ್ತಾ ಫೌಂಡೇಶನ್‍ನ ಸಂಸ್ಥಾಪಕಿ ಮತ್ತು ನಿರ್ದೇಶಕಿ ಡಾ.ಅಶ್ವಿನಿ ಎನ್.ವಿ. ಹೆಳಿದರು.

ಇಂದು ಅವರು ಸಿಯುಕೆಯ ಮನೋವಿಜ್ಞಾನ ವಿಭಾಗವು ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಆತ್ಮಹತ್ಯೆ ಸಾವುಗಳನ್ನು ತಡೆಗಟ್ಟುವ ಏಕೈಕ ಪರಿಹಾರವೆಂದರೆ ಅದು ಆಗದಂತೆ ನೋಡಿಕೊಳ್ಳವುದಾಗಿದೆ. ಸಲಹೆಗಾರರು ಮಾತ್ರ ಗೇಟ್ ಕೀಪರ್ ಆಗಬಹುದು ಮತ್ತು ಆತ್ಮಹತ್ಯೆಗಳನ್ನು ತಡೆಯಬಹುದು ಎಂದು ಯೋಚಿಸಬೇಡಿ. ಪ್ರತಿಯೊಬ್ಬ ವ್ಯಕ್ತಿಯು ಆತ್ಮಹತ್ಯೆಗಳನ್ನು ತಡೆಗಟ್ಟುವ ದ್ವಾರಪಾಲಕನಾಗಿ ತಮ್ಮ ಹತ್ತಿರದವರನ್ನು ಮತ್ತು ಆತ್ಮೀಯರನ್ನು ರಕ್ಷಿಸಬಹುದಾಗಿದೆ. ಇತರರಿಂದ ಬೆಂಬಲವ ಪಡೆಯುವ ಮತ್ತು ಬೆಂಬಲ ನೀಡುವ ಮೂಲಕ, ನಮ್ಮನ್ನು ನೋಡಿಕೊಳ್ಳಲು, ನಾವು ಇರುವೆಗಳಂತೆ ವರ್ತಿಸಬೇಕು. ಈ ರೀತಿಯಾಗಿ ನಾವು ಸ್ವಯಂ ಮತ್ತು ಇತರರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಗೌರವಾನ್ವಿತ ಕುಲಪತಿ ಪೆÇ್ರ.ಬಟ್ಟುಸತ್ಯನಾರಾಯಣ ಅವರು ಅಧ್ಯಕ್ಷೀಯ ಭಾಷಣ ಮಾಡಿ, ಮಾತನಾಡಿ “ಶಿಕ್ಷಣ ಸಂಸ್ಥೆಗಳಲ್ಲಿ ಯುವ ವಯಸ್ಕರೊಂದಿಗೆ ವ್ಯವಹರಿಸುವುದು ಇಂತಹ ಜಾಗೃತಿ ಕಾರ್ಯಕ್ರಮಗಳು ಬಹಳ ಮುಖ್ಯ. ವಿದ್ಯಾರ್ಥಿಗಳು ವಯಸ್ಕರಿಗಿಂತ ಹೆಚ್ಚು ಭಾವನಾತ್ಮಕವಾಗಿ ದುರ್ಬಲರಾಗಿರುತ್ತಾರೆ. ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆಯಂತಹ ವಿಪರೀತ ಕ್ರಮಗಳನ್ನು ತಗ್ಗಿಸುವಲ್ಲಿ ನಮ್ಮಲ್ಲೇರ ಪಾತ್ರವಿದೆ. ಈ ಸಮಸ್ಯೆಯನ್ನು ಪರಿಹರಿಸುವುದು ನಮ್ಮಲ್ಲೇರ ಕರ್ತವ್ಯವಾಗಿದೆ. ಯುವ ಮನಸ್ಸುಗಳೊಂದಿಗೆ ವ್ಯವಹರಿಸುವಾಗ ಶೈಕ್ಷಣಿಕ ಸಂಸ್ಥೆಗಳಲ್ಲಿ ಅತಿ ಮುಖ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಸ್ವಯಂ-ಹಾನಿ ಮತ್ತು ಆತ್ಮಹತ್ಯೆಯನ್ನು ತಡೆಗಟ್ಟಲು ಸಹಕಾರಿಯಾಗುತ್ತವೆ. ಆದ್ದರಿಂದ ಇಂತಹ ಕಾರ್ಯಕ್ರಮವನ್ನು ನಡೆಸುವುದು ಇಂದಿನ ಅಗತ್ಯವಾಗಿದೆ” ಎಂದು ಅವರು ಹೇಳಿದರು.

ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್ ಮಾತನಾಡಿ, ‘ಆತ್ಮಹತ್ಯೆಯಿಂದ ಕುಟುಂಬಕ್ಕೆ ಆರ್ಥಿಕವಾಗಿ ಹೆಚ್ಚಿನ ಹಾನಿಯಾಗುತ್ತದೆ. ಇದು ಆರ್ಥಿಕ, ಸಾಮಾಜಿಕ, ಕೌಟುಂಬಿಕ ಹಂತಗಳಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ನಾವು ಆತ್ಮಹತ್ಯೆಗಳನ್ನು ತಡೆಯಲು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ಹೇಳಿದರು.

ಸಾಮಾಜಿಕ ಮತ್ತು ವರ್ತನೆಯ ವಿಜ್ಞಾನಗಳ ನಿಕಾಯದ ಡೀನ್ ಪೆÇ್ರ.ಚನ್ನವೀರ್ ಆರ್.ಎಂ ಮಾತನಾಡಿ, “ಆತ್ಮಹತ್ಯೆಗೆ ಕಾರಣವು ವ್ಯಕ್ತಿಗತವಾಗಿರದೆ ಪರಿಸರವಾಗಿರಬಹುದು, ಆದ್ದರಿಂದ ಮಧ್ಯಸ್ಥಿಕೆಯು ಅನೇಕ ಹಂತಗಳಲ್ಲಿಯೂ ಇರಬೇಕು ಮತ್ತು ನಾವು ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಬಹುದಾಗಿದೆ” ಎಂದರು.

ಇದಕ್ಕೂ ಮುನ್ನ ಈ ಕಾರ್ಯಕ್ರಮದ ಸಂಯೋಜಕರಾದ ಡಾ. ಕೃತಿ ಶ್ರೀವಾಸ್ತವ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ “ಈ ವರ್ಷದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ವಿಷಯವು “ಆತ್ಮಹತ್ಯೆಯ ನಿರೂಪಣೆಯನ್ನು ಬದಲಾಯಿಸುವುದು” ಎಂಬುದಾಗಿದ್ದು, “ಸಂಭಾಷಣೆಯನ್ನು ಪ್ರಾರಂಭಿಸಿ” ಎಂಬ ಕ್ರಿಯೆಯ ಕರೆಯೊಂದಿಗೆ ಆಚರಿಸಲಾಗುತ್ತಿದೆ. ಇದು ಆತ್ಮಹತ್ಯಾ ಉದ್ದೇಶಿತರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುವ ಪರ್ಯಾಯಗಳ ಲಭ್ಯತೆಯನ್ನು ಬಲವಾಗಿ ಒತ್ತಾಯಿಸುತ್ತದೆ ಮತ್ತು ಆಶಾವಾದವನ್ನು ಬೆಳೆಸುವ ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆಯನ್ನು ಬಲಪಡಿಸುವ ಸಾಮೂಹಿಕ ಪ್ರಯತ್ನಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೆÇ್ರ.ವಿಜಯೇಂದ್ರ ಪಾಂಡೆ, ಪೆÇ್ರ.ರೊಮೇಟ್ ಜಾನ್, ಡಾ.ರವೀಂದ್ರ, ಇತರ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

emedialine

Recent Posts

ವಿಕಲಚೇತರಿಗೆ ಅನುಕಂಪ ಬೇಡ ಮನುಷ್ಯರಂತೆ ಕಾಣಿ: ಡಾ.ಗವಿಸಿದ್ಧಪ್ಪ ಪಾಟೀಲ

ಬಸವಕಲ್ಯಾಣ: ವಿಕಲಚೇತನರು ತಮ್ಮ ಅಂಗವಿಕಲತೆ ಬಗ್ಗೆ ಅಗೌರವ ತಾಳಲಾರದೇ,ಅನುಕಂಪ ತೋರಿಸದೇ ಸ್ವ ಪ್ರತಿಭೆ ಹೊಂದಿದ ಅವರಿಗೆ ಮೂಲಭೂತ ಸೌಲಭ್ಯ ಗಳನ್ನು…

9 hours ago

ಸತ್ಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ

ಕಲಬುರಗಿ: ಸ್ಥಾಪಿತ ಸಿದ್ಧಾಂತ ಹೊಡೆದು ಹಾಕಿ ಅವೈದಿಕ ವಚನ ಸಾಹಿತ್ಯವನ್ನು ಜನಮಾನಸಕ್ಕೆ ಮುಟ್ಟಿಸಿದ ಡಾ.‌ಎಂ.ಎಂ.‌ಕಲಬುರ್ಗಿ ಯವರು ಸತ್ಯದ ಸಂಶೋಧಕರಾಗಿದ್ದರು ಎಂದು…

10 hours ago

ಮಕ್ಕಳೊಂದಿಗೆ ಹುಟ್ಟ ಹುಬ್ಬ ಆಚರಿಸಿಕೊಂಡ ಡಿ.ಸಿ. ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುರುವಾರ ಸಂಜೆ ತಮ್ಮ ಹುಟ್ಟು ಹಬ್ಬವನ್ನು ಕಲಬುರಗಿ ನಗರದ ಆಳಂದ ನಾಕಾ ರಸ್ತೆಯಲ್ಲಿರುವ…

11 hours ago

ಚಿಂಚೋಳಿ ಗ್ರಾಮ ಅಡಳಿತಾಧಿಕಾರಿಗೆ ಡಿ.ಸಿ. ಪ್ರಶಂಸನಾ ಪತ್ರ; ಪಹಣಿಗೆ ಆಧಾರ್ ಜೋಡಣೆಯಲ್ಲಿ ಸಾಧನೆ

ಕಲಬುರಗಿ; ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಪಹಣಿಗೆ ಆಧಾರ್ ಜೋಡಣೆ ಮತ್ತು ಸರ್ಕಾರಿ ಜಮೀನುಗಳ ಸಂರಕ್ಷಣೆಯ ಲ್ಯಾಂಡ್ ಬೀಟ್ ಅಪ್ಲಿಕೇಶನ್ ನಲ್ಲಿ…

11 hours ago

ಉಚಿತ ಆರೋಗ್ಯ ತಪಾಸಣೆ| ರಾಜಾ ಕೃಷ್ಣಪ್ಪ ನಾಯಕ ಚಾಲನೆ

ಸುರಪುರ: ಹಿಂದಿನ ಕಾಲದಲ್ಲಿ ಅನೇಕ ಜನ ರಾಜರು ಸ್ವತಃ ತಾವೇ ಪಾರಂಪರಿಕ ವೈದ್ಯರಾಗಿದ್ದು ಬೇಟೆಗೆ ಹೋದ ಸಂದರ್ಭದಲ್ಲಿ ತಾವೇ ಮದ್ದು…

11 hours ago

ಲೋಕಾಯುಕ್ತ ಪೊಲೀಸ್ ಸಾರ್ವಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ

ಸುರಪುರ: ಸಾರ್ವಜನಿಕರು ತಮ್ಮ ಕೆಸಲ ಕಾರ್ಯಗಳಿಗಾಗಿ ಕಚೇರಿಗೆ ಬಂದಾಗ ವಿಳಂಬ ಮಾಡದೆ ನ್ಯಾಯಯುತವಾದ ಅರ್ಜಿಗಳ ಕೆಲಸ ಮಾಡಿಕೊಡುವಂತೆ ಕರ್ನಾಟಕ ಲೋಕಾಯುಕ್ತ…

11 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420