ಪಡಿತರ ಚೀಟಿ ಶಾಶ್ವತವಾಗಿ ರದ್ದು ಪಡಿಸುವ ಸರಕಾರದ ವಿರುದ್ಧ ಆಕ್ರೋಶ

ಶಹಾಬಾದ: ಅನ್ನಭಾಗ್ಯಕ್ಕೆ ಕನ್ನಹಾಕುತ್ತಿರುವ ಸರಕಾರಗಳ ವಿರುದ್ಧ ಪ್ರಬಲ ಜನಾಂದೋಲನವನ್ನು ಬೆಳೆಸುವ ಅವಶ್ಯಕತೆಯಿದೆ ಎಂದು ಎಸ್‍ಯುಸಿಐ (ಸಿ) ಪಕ್ಷದ ಶಹಾಬಾದ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಗಣಪತರಾವ. ಕೆ.ಮಾನೆ ಹೇಳಿದರು.

ಅವರು ನಗರದ ಬಸವೇಶ್ವರ ವೃತ್ತದಲ್ಲಿ ಸರಕಾರವು ರೇಷನ್ ಕಾರ್ಡ್‍ಗೆ ಅವೈಜ್ಞಾನಿಕವಾಗಿ ಆದಾಯದ ಮಿತಿಯನ್ನು ಹಾಕಿರುವುದನ್ನು ವಿರೋಧಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್‍ಆಫ್ ಇಂಡಿಯಾ (ಕಮ್ಯುನಿಸ್ಟ್) ಎಸ್‍ಯುಸಿಐ (ಸಿ) ಪಕ್ಷದ ಶಹಾಬಾದ ಸ್ಥಳೀಯ ಸಮಿತಿಯ ನೇತೃತ್ವದಲ್ಲಿ ಸಂಘಟಿಸಿದÀ ಪ್ರತಿಭಟನೆಯಲ್ಲಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರಿಗೆ ಅಗತ್ಯವಿರುವ ವಸ್ತುಗಳ ಬೆಲೆಗಳನ್ನು ಗಗನಮುಖಿಯಾಗಿಸಿ, ಜನರ ಬದುಕನ್ನು ದುಸ್ತರ ಮಾಡುತ್ತಿರುವುದು ಒಂದು ಕಡೆಯಾದರೆ ಮತ್ತೊಂದೆಡೆ ಪಡಿತರ ಚೀಟಿಯ ಮೂಲಕ ಸಿಗುತ್ತಿದ್ದ ಅಲ್ಪಸ್ವಲ್ಪ ಆಹಾರಧಾನ್ಯಗಳನ್ನು ಕಸಿದುಕೊಳ್ಳಲು ಪೂರ್ವತಯಾರಿ ನಡೆಸಿವೆ. ವಾರ್ಷಿಕವಾಗಿ ಕೇವಲ 1.20.000-00 ರೂಪಾಯಿಗಳನ್ನು ಆದಾಯ ಹೊಂದಿದವರನ್ನು ಶ್ರೀಮಂತರೆಂದು ಪರಿಗಣಿಸಿ ಪಡಿತರ ಚೀಟಿಯನ್ನು ಶಾಶ್ವತವಾಗಿ ರದ್ದು ಪಡಿಸುವ ಸರಕಾರದ ಯೋಜನೆಯ ವಿರುದ್ಧ ಜನರು ಪ್ರಬಲ ಜನಾಂದೋಲವನ್ನು ಬೆಳೆಸುವ ಅವಶ್ಯಕತೆಯಿದೆ ಎಂದು ಎಸ್‍ಯುಸಿಐ (ಸಿ) ಪಕ್ಷದ ಶಹಾಬಾದ ಸ್ಥಳೀಯ ಸಮಿತಿಯ ಕಾರ್ಯದರ್ಶಿಗಳಾದ ಗಣಪತರಾವ ಕೆ ಮಾನೆ ಯವರು ಜನರಿಗೆ ಕರೆ ನೀಡಿದರು.

ಸರಕಾರವು ರೇಷನ್ ಕಾರ್ಡ್‍ಗೆ ಅವೈಜ್ಞಾನಿಕವಾಗಿ ಆದಾಯದ ಮಿತಿಯನ್ನು ಹಾಕಿರುವುದನ್ನು ವಿರೋಧಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್‍ಆಫ್ ಇಂಡಿಯಾ (ಕಮ್ಯುನಿಸ್ಟ್) ಎಸ್‍ಯುಸಿಐ (ಸಿ) ಪಕ್ಷದ ಶಹಾಬಾದ ಸ್ಥಳೀಯ ಸಮಿತಿಯ ನೇತೃತ್ವದಲ್ಲಿ ಶಹಾಬಾದ ನಗರದ ಬಸವೇಶ್ವರ ವೃತ್ತದಲ್ಲಿ ಸಂಘಟಿಸಿದÀ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಶಹಾಬಾದ ನಗರ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ನೂರಾರು ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ, ಅವರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ ಬಡತನ ರೇಖೆಗಿಂತ ಕೆಳಗಿರುವ ಬಡಜನರಿಗೆ ಮೂರು ಹೊತ್ತಿನ ಅನ್ನವನ್ನು ನೀಡುತ್ತಿದ್ದು, ಆ ಅನ್ನವನ್ನು ಕಸಿದುಕೊಳ್ಳಲು ರಾಜ್ಯ ಸರಕಾರವು ಆದಾಯದ ಮಿತಿಯನ್ನು ಹಾಕಿರುವುದು ಜನವಿರೋಧಿ ನೀತಿಯಾಗಿದ್ದು, ಸರಕಾರದ ಈ ನಡೆಯು ಅಮಾನವೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‍ಯುಸಿಐ (ಸಿ) ಪಕ್ಷದ ಶಹಾಬಾದ ಸ್ಥಳೀಯ ಸಮಿತಿಯ ಸದಸ್ಯರಾದ ರಾಘವೇಂದ್ರ ಎಮ್.ಜಿ ಯವರು ಮಾತನಾಡಿ, ಸರಕಾರವು ಕೂಡಲೇ ಈ ಆದೇಶವನ್ನು ವಾಪಸ್ಸು ಪಡೆಯಬೇಕು ಹಾಗು ಆದಾಯದ ಮಿತಿಯನ್ನು ವೈಜ್ಞಾನಿಕವಾಗಿ ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಜನರು ಇಂತಹ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜನವಿರೋಧಿ ನೀತಿಯನ್ನು ಸೋಲಿಸಬೇಕೆಂದು ಕರೆ ನೀಡಿದರು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಕಾಮ್ರೇಡ್ ಜಗನ್ನಾಥ ಎಸ್.ಎಚ್. ಅವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಸಮಿತಿಯ ಸದಸ್ಯರಾದ ಕಾಮ್ರೇಡ್ ಗುಂಡಮ್ಮ ಮಾಡಿವಾಳ, ರಾಜೇಂದ್ರ ಆತ್ನೂರ್, ವಿವಿಧ ಸಂಘಟನೆಗಳ ನಾಯಕರಾದ ರಘು ಪವಾರ, ರಮೇಶ ದೇವಕರ್, ನೀಲಕಂಠ ಹುಲಿ, ಅಜಯ ಗುರಜಾಲಕರ್, ಬಾಬು ಪವಾರ, ಮಹಾದೇವಿ ಮಾನೆ, ರಾಧಿಕ ಚೌದ್ರಿ, ಶ್ಯಾಮ್ ಪವಾರÀ, ಆನಂದ, ಶ್ರೀನಿವಾಸ ದಂಡಗುಲಕರ್ ಭಾಗವಹಿಸಿದ್ದರು.

emedialine

Recent Posts

ಸ್ಲಂ ಜನರಿಗೆ ಹಕ್ಕು ಪತ್ರ ನೀಡುವಂತೆ ರೇಣುಕಾ ಸರಡಗಿ ಸಿಎಂಗೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…

10 hours ago

ಶರಣಬಸವ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…

10 hours ago

ವಕ್ಫ್ ಬೋರ್ಡ್ ನಿಂದ 15 ಜಿಲ್ಲೆಗಳಲ್ಲಿ ಮಹಿಳಾ ಪದವಿ ಕಾಲೇಜು ಸ್ಥಾಪನೆಗೆ ಸಂಪುಟ ಅಸ್ತು: ಸಚಿವ ಜಮೀರ್ ಅಹಮದ್ ಖಾನ್

ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…

12 hours ago

ಸೆ.22 ರಂದು ತುಂಗಭದ್ರೆಗೆ ಬಾಗಿನ ಅರ್ಪಣೆ: ಡಿ.ಕೆ ಶಿವಕುಮಾರ್

ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…

12 hours ago

ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ: ಡಿಕೆ ಶಿವುಕುಮಾರ್

ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…

12 hours ago

ನಾಗಮಂಗಲ ಘಟನೆ: ತನಿಖೆ ನಂತರ ಇನ್ನಷ್ಟು ಕ್ರಮ: ಗೃಹ ಸಚಿವ ಪರಮೇಶ್ವರ

ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…

12 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420