ಜೀ಼ ಕನ್ನಡದ ಸರಿಗಮಪ ಆಡಿಷನ್ ಕಲಬುರಗಿಯಲ್ಲಿ ಇದೇ ಶನಿವಾರದಂದು

 

ನಿಮ್ಮ ಕನಸಿಗೆ ರೆಕ್ಕೆ ಕಟ್ಟಲು ನಿಮ್ಮೂರಿಗೂ ಬರ್ತಿದೆ ಸರಿಗಮಪ ಆಡಿಷನ್, ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಯುವ ಪ್ರತಿಭೆಗಳನ್ನ ಕರುನಾಡಿಗೆ ಪರಿಚಯಿಸಿರುವ ಕನ್ನಡದ ನಂ 1ವಾಹಿನಿ ಜೀ಼ ಕನ್ನಡ , ಈಗ ಮತ್ತೊಮ್ಮೆ ಸರಿಗಮಪ ರಿಯಾಲಿಟಿ ಶೋ ಮೂಲಕ

ಕರುನಾಡಿನ ಹಾಡುಗರನ್ನ ಹುಡುಕುವ ಕೆಲಸ ಶುರುಮಾಡಿದೆ. ಜೀ಼ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು,ಡಿಕೆಡಿ ಮತ್ತು ಮಹಾನಟಿ ಮೂಲಕ ಈಗಾಗಲೆ ಸಾಕಷ್ಟು ನಟ-ನಟಿಯರು ,ಗಾಯಕ ಗಾಯಕಿಯರು ಹಾಗು ಕೊರಿಯೋಗ್ರಾಫರ್ ಗಳನ್ನ ಕರುನಾಡಿಗೆ ಕೊಟ್ಟಿರುವ ಜೀ಼ ಕನ್ನಡ ವಾಹಿನಿ ಇದೀಗ ಸರಿಗಮಪ ಶೋ ಮೂಲಕ ನಿಮ್ಮೂರಿನಲ್ಲಿರುವ ಗಾಯಕ- ಗಾಯಕಿಯಾಗುವ ಕನಸು ಹೊತ್ತಿರುವ,ಪ್ರತಿಭೆಗಳಿಗೆ ವೇದಿಕೆಯಾಗಲು ಬಂದಿದೆ.

ಕಳೆದ ಬಾರಿ ವಿದೇಶಿ ಕನ್ನಡಿಗ ಪ್ರತಿಭೆಗಳೊಂದಿಗೆ ಕನ್ನಡದ ಕಂಪನ್ನ ಜಗತ್ತಿಗೆ ಬಿತ್ತರಿಸಿ ಸರಿಗಮಪ ಈ ಬಾರಿ 6 ರಿಂದ 60 ವಯಸ್ಸಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಸಜ್ಜಾಗಿದೆ. ಈ ಮೂಲಕ ಕನ್ನಡದ ಸಂಗೀತ ಮತ್ತು ಚಿತ್ರರಂಗಕ್ಕೆ ಭರವಸೆಯ ಗಾಯಕ-ಗಾಯಕಿಯರನ್ನ ನೀಡುವ ಕೆಲಸವನ್ನ ಈ ರಿಯಾಲಿಟಿ ಶೋ ಮಾಡಲಿದೆ.ಸರಿಗಮಪ ಶೋ ಮೂಲಕ ಹಲವಾರು ಪ್ರತಿಭೆಗಳು ಹೊರಹೊಮ್ಮಿ ಇಂದು ಸಂಗೀತ ಲೋಕದ ಸಾಧಕರ ಸಾಲಿಗೆ ಸೇರಿದ್ದಾರೆ, ನಿಮ್ಮ ಕನಸನ್ನ ನನಸು ಮಾಡುವ ನಿಟ್ಟಿನಲ್ಲಿ ನಿಮ್ಮೂರಿಗೆ ಬಂದು, ನಿಮ್ಮ ಪ್ರತಿಭಯೆನ್ನ ಗುರುತಿಸಿ ನಿಮ್ಮನ್ನ ಈ ವೇದಿಕೆ ಕರೆತರುವ ಕೆಲಸವನ್ನ ಈ ಮೂಲಕ ಮಾಡಲಿದೆ.

ಸರಿಗಮಪ ಶೋಗಾಗಿ ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ಆಡಿಷನ್ ಪ್ರಕ್ರಿಯೆ ನಡೆಸಲ್ಲಿದ್ದು ,ಇದರ ಆರಂಭಿಕ ಹಂತವೆಂಬಂತೆ 21-09-2024 ಶನಿವಾರದಂದು ಬೆಳಗ್ಗೆ 9 ಗಂಟೆಗೆ ಗೌರ್ಮೆಂಟ್ ಪಾಲಿಟೆಕ್ನಿಕ್ ಕಾಲೇಜು, ಐ ವಾನ್ ಶಾಹಿ ರಸ್ತೆ.ಸ್ಟೇಷನ್ ಬಜಾರ್,ಕಲಬುರಗಿ.ಇಲ್ಲಿ ಆಡಿಷನ್ಸ್ ನಡೆಯಲ್ಲಿದ್ದು.

ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು 2 ಪಾಸ್ಪೋರ್ಟ್ ಸೈಜ್ ಪೋಟೋ ಜೊತೆ ಅಡ್ರಸ್ ಪ್ರೂಫ್ ಜೆರಾಕ್ಸ್ ತೆಗೆದುಕೊಂಡು ಬಂದು ಭಾಗವಹಿಸಬಹುದಾಗಿದೆ. ಜೀ಼ ಕನ್ನಡ ನಡೆಸುವ ಈ ಆಡಿಷನ್ ಪ್ರಕ್ರಿಯೆಯಲ್ಲಿ ಯಾವುದೇ ಹಣವನ್ನ ಪಡೆಯಲಾಗುವುದಿಲ್ಲವೆಂದು ವಾಹಿನಿ ತಿಳಿಸಿದೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

2 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago