ಶಿಸ್ತು ಮತ್ತು ದಕ್ಷತೆಯಿಂದ ಉತ್ತಮ ಭವಿಷ್ಯ

ಕಲಬುರಗಿ: ಬದುಕಿನಲ್ಲಿ ಮುಂದೆ ಬರಬೇಕಾದರೆ ಒಳ್ಳೆ ಭವಿಷ್ಯ ಕಾಣಬೇಕಾಗಿದ್ದರೆ ನೀವು ನಿಷ್ಠೆ, ಪರಿಶ್ರಮ ಮತ್ತು ಸಂಕಲ್ಪ ಹೊಂದಿರಬೇಕು. ಕೇವಲ ಪದವಿಗಾಗಿ ಓದುವುದನ್ನು ಮಾಡದೆ ಓದಿನಲ್ಲಿ ವಿನೂತನ ಶೈಲಿ ಮತ್ತು ಉತ್ತಮ ಕ್ರಮಗಳನ್ನು ಅನುಸರಿಸಬೇಕೆಂದು ನಗರ ಪೋಲಿಸ್ ಆಯುಕ್ತರಾದ ಡಾ. ಶರಣಪ್ಪ ಎಸ್. ಡಿ. ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅವರು ಇಂದು ಇಲ್ಲಿನ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿ.ಡಿ.ಎ. ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾಥಿಗಳು ಹಾಗೂ ಅವರ ಪೋಷಕರನ್ನು ಉದ್ಧೇಶಿಸಿ ಮಾತನಾಡಿದರು.

ಅವರು ತಾವು ಪಟ್ಟ ಪರಿಶ್ರಮ ಮತ್ತು ಕಾರ್ಯದಕ್ಷತೆಯನ್ನು ವಿವರಿಸಿ, ಉನ್ನತ ಸ್ಥಾನದಲ್ಲಿರುವವರ ಸಾಧನೆಯ ಬಗ್ಗೆ ತಿಳಿದುಕೊಂಡು ಅವರನ್ನು ಅನುಸರಿಸಿದರೆ ತಾವೂ ಕೂಡ ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೆ ಹೋಗಬಹುದೆಂದು ಹೇಳಿದರು

ಗೌರವ ಅತಿಥಿಗಳಾದ ಆಗಮಿಸಿದ ಪೂಣೆ ಮೂಲದ ಕೈಗಾರಿಕೋದ್ಯಮಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಗುರುನಾಥ ಕುಲಕರ್ಣಿ ಅವರು ಮಾತನಾಡುತ್ತ ಪಿ.ಡಿ.ಎ. ಕಾಲೇಜು ಇಲ್ಲಿಯವರೆಗೆ ಉತ್ತಮ ಇಂಜಿನಿಯರುಗಳನ್ನು ತಯ್ಯಾರಿಸಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅವರು ಮಿಂಚುವಂತೆ ಮಾಡಿದೆ. ಇಂತಹ ಕಾಲೇಜು ಈ ಭಾಗದಲ್ಲಿರುವುದ ನಮ್ಮ ಸುದೈವ. ಕಲ್ಯಾಣ ಕರ್ನಾಟಕ ಭಾಗದ ಸಾಕಷ್ಟು ಯುವಜನ ಇಂದು ಉತ್ತಮ ಭವಿಷ್ಯವನ್ನು ಪಡೆದಿದ್ದಾರೆ. ನಿಮ್ಮ ಶೈಕ್ಷಣಿಕ ಪಠ್ಯಕ್ರಮದ ಜೊತೆ ಪ್ರಸ್ತುತ ತಂತ್ರಜ್ಞಾನ ಮತ್ತು ವಿವಿಧ ರಾಷ್ಟ್ರಗಳ ಭಾಷೆಗಳನ್ನು ಕೂಡ ಕರಗತ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಮತ್ತು ವಿಧಾನ ಪರಿಷತ ಸದಸ್ಯರಾದ ಶಶೀಲ ಜಿ. ನಮೋಶಿಯವರು ಮಾತನಾಡುತ್ತ ವಿದ್ಯಾರ್ಥಿಗಳ ಉತ್ತಮ ವ್ಯಾಸಂಗ, ಹಾಗೂ ಉತ್ತಮ ಭವಿಷ್ಯವನ್ನು ಗುರಿಯಾಗಿಟ್ಟುಕೊಂಡು ನಾವು ಪಿ.ಡಿ.ಎ ಕಾಲೇಜಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದು ಅದಕ್ಕಾಗಿ ಬೇಕಾಗುವಂತಹ ಆಧುನಿಕ ಪಿಠೋಪಕರಣ ಮತ್ತು ಯಂತ್ರೋಪಕರಣಗಳ ವ್ಯವಸ್ಥಕೂಡ ಮಾಡಿಕೊಡಲಾಗಿದೆ. ಶೈಕ್ಷಣಿಕ ಮಟ್ಟ ಸುಧಾರಿಸಲು ಹಾಗೂ ಪ್ರಸ್ತುತ ತಂತ್ರಜ್ಞಾನವನ್ನು ರೂಢಿಸಿಕೊಳ್ಳಲು ಸೆಂಟರ್ ಆಫ್ ಎಕ್ಸಲೆನ್ಸ ಮುಖಾಂತರ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುವುದು ಮತ್ತು ಅವರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸಮಾರಂಭದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಬಿ. ಭೀಮಳ್ಳಿ, ಆಡಳಿತ ಮಂಡಳಿ ಸದಸ್ಯರಾದ ಅರುಣಕುಮಾರ ಎಮ್. ಪಾಟೀಲ, ಡಾ. ಶರಣಬಸಪ್ಪಾ ಹರವಾಳ, ಡಾ. ಅನೀಲಕುಮಾರ ಪಟ್ಟಣ, ಡಾ. ಮಹಾದೇವಪ್ಪ ರಾಂಪೂರೆ, ಸಾಯಿನಾಥ ಪಾಟೀಲ, ಡಾ. ಕಿರಣ ದೇಶಮುಖ, ನಾಗಣ್ಣ ಘಂಟಿ, ನಿಶಾಂತ ಎಲಿ, ಡಾ. ಶಿವಾನಂದ ಮೇಳಕುಂದಿ ಅವರು ಉಪಸ್ಥಿತರಿದ್ದರು.

ಪಿ.ಡಿ.ಎ. ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್. ಆರ್. ಪಾಟೀಲ ಪ್ರಾಸ್ತವಿಕ ಭಾಷಣ ಮಾಡಿ ಎಲ್ಲರಿಗೂ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅವರು ಕಾಲೇಜಿನ ಸಂಪೂರ್ಣ ಮಾಹಿತಿಯನ್ನು ಕೂಡ ಒದಗಿಸಿದರು. ಸಮಾಂರಂಭದ ಸಂಚಾಲಕರಾದ ಪ್ರೊ. ಜಯಪ್ರಕಾಶ ಕ್ಷಿರಸಾಗರ ಕಾರ್ಯಕ್ರಮದ ಉದ್ಧೇಶವನ್ನು ವಿವರಿಸಿದರು. ಪ್ರಥಮ ವರ್ಷದ ಸಂಯೋಜಕರಾದ ಡಾ. ಅಮರೇಶ್ವರಿ ಪಾಟೀಲ ವಂದಿಸಿದರು. ಕಾರ್ಯಕ್ರಮವನ್ನು ಡಾ. ಸುಜಾತಾ ಪಾಟೀಲ ನಿರೂಪಿಸಿದರು.

ಸಮಾರಂಭದಲ್ಲಿ ಮಹಾವಿದ್ಯಾಲಯದ ಡಾ. ಎಸ್. ಆರ. ಹೊಟ್ಟಿ, ಉಪ-ಪ್ರಾಚಾರ್ಯ(ಶೈಕ್ಷಣಿಕ) ಮತ್ತು ಡಾ. ಭಾರತಿ ಹರಸೂರ ಉಪ-ಪ್ರಾಚಾರ್ಯ(ಆಡಳಿತ), ವಿಭಾಗಗಳ ಮುಖ್ಯಸ್ಥರು, ಪರೀಕ್ಷಾ ನಿಯಂತ್ರಣಾಧಿಕಾರಿಗಳು, ಡೀನ್‍ರು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

6 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

8 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

15 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

15 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

15 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago