ಸುರಪುರ: ಗ್ರಾಮೀಣ ಪರಂಪರೆಯ ಮೂಲ ಜೀವಾಳವಾದ ಜಾನಪದಕ್ಕೆ ಇಂದು ಜಾಗತಿಕ ಮಟ್ಟದಲ್ಲಿ ಬೇಲೆ ಸಿಗಬೇಕಾಗಿದೆ ಎಂದು ಯಾದಗಿರಿ ಸರ್ವಜ್ಞ ಕಾಲೇಜಿನ ಪ್ರಾಚಾರ್ಯ ಗಂಗಾಧರ ಬಡಿಗೇರ ಹೇಳಿದರು.
ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಯಾದಗಿರಿ ವತಿಯಿಂದ ಆಯೋಜಿಸಿದ್ದ ಜಾನಪದ ವೈಭವ, ದಸರಾ ಸಂಭ್ರಮ ಹಾಗೂ ಕವಿ ಕಲಾವಿಧರ ಸಂಗಮ ಕಾರ್ಯಕ್ರಮದ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿ,ಇಂದು ಆಧುನಿಕ ವಾದ್ಯಗಳನ್ನು ಬಳಸಿ ಮೂಲ ಜಾನಪದ ಗೀತೆಗಳಿಗೆ ಹೊಸ ತಂತ್ರಜ್ಞಾನದ ಸ್ಪಶಕೊಟ್ಟು ಅನೇಕ ಗೀತೆಗಳು ಜನಪ್ರೀಯಗೊಂಡಿವೆ, ಶಾಸ್ತ್ರೀಯ ಸಂಗೀತಕ್ಕೆ ಸಿಗುವ ಗೌರವ, ಬೇಲೆ ಜಾನಪದಕ್ಕು ದೊರೆಯಬೇಕಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟಿಸಿದ ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ಮಾತನಾಡಿ, ಕಲಾವಿಧರು ಒಗ್ಗಟ್ಟಿನ ಕೊರತೆಯಿಂದ ಸರಕಾರದ ಸೌಲಭ್ಯ, ಸವಲತ್ತು ಪಡೆಯುವಲ್ಲಿ ವಿಫಲರಾಗಿದ್ದಾರೆ. ಅನಕ್ಷರತೆ, ಅಧಿಕಾರಿಗಳ ಇಚ್ಛಾಶಕ್ತಿಗಳ ಕೊರತೆ, ಕಲಾವಿಧರ ಒಗ್ಗಟ್ಟಿನ ಕೊರತೆ ನಮ್ಮ ಕಲಾವಿಧರು ರಾಜ್ಯ, ರಾಷ್ಟ್ರಮಟ್ಟ ಮುಟ್ಟುವಲ್ಲಿ ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಜಾನಪದ ಕಲಾವಿಧರು ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು.
ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶಿವಶರಣಪ್ಪ ಹೇಡಿಗಿನಾಳ, ನಬಿಲಾಲ್ ಮಕಾಂದಾರ, ವಿರೇಶ ಹಳಿಮನಿ ವೇದಿಕೆಮೇಲಿದ್ದರು. ಹಣಮಸಾಗರದ ಬಸಪ್ಪ ಗುಂತಾಗೋಳ್ ಅವರ ಡೊಳ್ಳಿನ ಹಾಡುಗಳು, ಕೊಡೆಕಲ್‌ನ ಬಸಮ್ಮ ಕೆಂಡದ್ ಮತ್ತು ಸಂಗಡಿಗರ ತತ್ವಪದ, ಶಿವಪ್ಪ ಹೆಬ್ಬಾಳ್ ಮತ್ತು ಸಂಗಡಿಗರ ಭಜನಾಪದ, ದೇವತ್ಕಲ್ಲಿನ ಗಂಗಪ್ಪ ಕಮತಗಿ ಮತ್ತು ಸಂಗಡಿಗರ ಗೀಗಿಪದ, ಚಿನ್ನಪ್ಪ ಕೋಡೆಕಲ್ ಹಾಗೂ ಲಿಂಗಣ್ಣ ತಡಿಬಿಡಿ ಅವರ ರಂಗಗೀತೆ ಗಮನ ಸೇಳೆದವು.
ನಂತರ ನಡೆದ ಕವಿಗೋಷ್ಠಿಯಲ್ಲಿ ನಬೀಲಾಲ್ ಮಕಾಂದಾರ, ರಾಠೋಡ್ ಬೈಚಬಾಳ, ಶಂಕರ ಹುಲಕಲ್, ಮಾಳಿಂಗ ದೇವರಮನಿ, ಸುರೇಶ ಪತ್ತಾರ, ಈರಣ್ಣ ಕಲೀಕೆರಿ, ಚಂದ್ರಹಾಸ ಮಿಟ್ಟ, ಜ್ಯೋತಿನಾಯಕ ಚಾಮನಾಳ ಸೇರಿದಂತೆ ಇತರರು ಕವಿತೆ ವಾಚಿಸಿದರು. ಶ್ರೀಕಾಂತ ರತ್ತಾಳ ಪ್ರಾರ್ಥಿಸಿದರು, ಲಂಕೇಶ ದೇವತ್ಕಲ್ ನಿರೂಪಿಸಿದರು, ಬಲಭೀಮ ಪಾಟೀಲ್ ಸ್ವಾಗತಿಸಿದರು, ಬಸವರಾಜ ಚನ್ನಪಟ್ನ ವಂದಿಸಿದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…