ಕೃಷಿ ಇಲಾಖೆ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ

ಸುರಪುರ: ನಮ್ಮ ಸರಕಾರ ರೈತರಿಗಾಗಿ ಹಲವಾರು ಯೋಜನೆಗಳನ್ನು ಜೊರಿಗೊಳಿಸಿದ್ದು ರೈತರು ಸರಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳ ಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.

ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆ ಮಾಡಿ ಮಾತನಾಡಿ,ಸರಕಾರ ಕೃಷಿ ಅಭಿವೃಧ್ಧಿಗಾಗಿ ಕೃಷಿ ಭಾಗ್ಯದಂತ ಯೋಜನೆ ತಂದಿದೆ,ಇದರ ಮೂಲಕ ರೈತರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ.ಈಗ ಬಿತ್ತನೆ ಬೀಜ ವಿತರಿಸಲಾಗುತ್ತಿದೆ,ರೈತರಿಗೆ ನೀಡುವ ಬೀಜ ಉತ್ತಮ ಗುಣಮಟ್ಟದ್ದಾಗಿರಲಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೃಷಿ ಭಾಗ್ಯ ಯೋಜನೆಯ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ, ಸಾಂಕೇತಿಕವಾಗಿ ರೈತರಾದ ಹಣಮಂತ ದೇಸಾಯಿ ಶೆಳ್ಳಗಿ,ಚಂದಪ್ಪ ಶೆಳ್ಳಗಿ,ಮಲ್ಲಣ್ಣ ಶೆಳ್ಳಗಿ,ಮಲ್ಲನಗೌಡ ಶೆಳ್ಳಗಿ ಇವರುಗಳಿಗೆ ಜೋಳ ಹಾಗೂ ಕಡಲೆ ಬೀಜಗಳನ್ನು ವಿತರಿಸಲಾಯಿತು.ಅದರಂತೆ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿಕೊಂಡ ರೈತರಾದ ದೇವಿಂದ್ರಪ್ಪ ಜಾಲಿಬೆಂಚಿ,ಬಸವರಾಜ ಮಂಗಳೂರ ಇವರಿಗೆ ಸಹಾಯಧನದಲ್ಲಿ ಡಿಸೇಲ್ ಇಂಜಿನ್ ವಿತರಣೆ ಮಾಡಲಾಯಿತು.ಮಣ್ಣು ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಮಣ್ಣು ಮಾದರಿಗಳನ್ನು ಪ್ರಯೋಗಾಲಯ ದಿಂದ ವಿಶ್ಲೇಷಣೆ ಮಾಡಿದ ಮಣ್ಣು ಆರೋಗ್ಯ ಕಾರ್ಡ್‍ಗಳನ್ನು ರೈತರಾದ ಬಸ್ಸಪ್ಪ ನಾಯ್ಕೋಡಿ,ಶರಣಪ್ಪ ಜಾಲಿಬೆಂಚಿ,ಟಿ.ಶಿವರಾಜ ಜಾಲಿಬೆಂಚಿ,ಸೋಮರಾಯ ಜಾಲಿಬೆಂಚಿ ಇವರಿಗೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಎಪಿಎಮ್‍ಸಿ ಮಾಜಿ ಸದಸ್ಯ ಮಲ್ಲಣ್ಣ ಸಾಹುಕಾರ ನರಸಿಂಗಪೇಟ ಉಪಸ್ಥಿತರಿದ್ದರು.ರೈತ ಮುಖಂಡರಾದ ಬುಚ್ಚಪ್ಪ ನಾಯಕ ಕಕ್ಕೇರಾ,ಶಿವಣ್ಣ ಮೇಟಿಗೌಡ ಶೆಳ್ಳಗಿ,ಅಂಬ್ರೇಶ ಶಾಂತಪ್ಪ ದೇಸಾಯಿ,ಹಣಮಂತ ದೇಸಾಯಿ,ಕನಕಪ್ಪ ಮುಷ್ಠಳ್ಳಿ,ವೆಂಕಟೇಶ ಕುಪಗಲ್,ಭೀಮಾಶಂಕರ ರತ್ತಾಳ ಸೇರಿ ಅನೇಕರಿದ್ದರು.ಸಹಾಯಕ ಕೃಷಿ ನಿರ್ದೇಶಕ ಭೀಮರಾಯ ಹವಲ್ದಾರ್ ಅಧ್ಯಕ್ಷತೆ ವಹಿಸಿದ್ದರು.ಕೃಷಿ ಇಲಾಖೆಯ ಶ್ರೀಧರ,ವಿನಾಯಕ,ಸಿದ್ದಾರ್ಥ ಪಾಟೀಲ್,ರಾಮನಗೌಡ ಸೇರಿದಂತೆ ಅನೇಕ ಜನ ರೈತರು ಭಾಗವಹಿಸದ್ದರು.

ಮಣ್ಣು ಪರೀಕ್ಷೆ ಮಾಡಿಸಿ ರೈತರು ಯಾವ ಮಣ್ಣಿಗೆ ಎಷ್ಟು ರಸಗೊಬ್ಬರ ಬಳಕೆ ಮಾಡಬೇಕು ಎನ್ನುವುದನ್ನು ರೈತರು ಅಧಿಕಾರಿಗಳಿಂದ ಸಲಹೆ ಪಡೆದು ಅದೆ ಪ್ರಮಾಣದಲ್ಲಿ ಗೊಬ್ಬರಗಳ ಬಳಕೆ ಮಾಡಿ ಕೃಷಿಯಲ್ಲಿ ಲಾಭ ಪಡೆಯಬೇಕು. – ರಾಜಾ ವೇಣುಗೋಪಾಲ ನಾಯಕ ಶಾಸಕ ಸುರಪುರ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

14 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

16 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

23 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

23 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

24 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago