ಬಿಸಿ ಬಿಸಿ ಸುದ್ದಿ

ಓದುಗರ ಲೇಖನ: ಜಾಗತಿಕ ಹಸಿವಿನ ಸೂಚ್ಯಂಕವು ವಾಸ್ತವದ ಮತ್ತೊಂದು

ವಿಶ್ವ ಮಟ್ಟದಲ್ಲಿ ಭಾರತ ಪ್ರಬಲ ಶಕ್ತಿಯಾಗಿ ಗುರುತಿಸಿಕೊಳ್ಳಲು ಹಂಬಲಿಸುತ್ತಿರುವ ಸಂದರ್ಭದಲ್ಲಿ ಪ್ರಕಟವಾಗಿರುವ ಜಾಗತಿಕ ಹಸಿವಿನ ಸೂಚ್ಯಂಕವು ವಾಸ್ತವದ ಮತ್ತೊಂದು ಮಗ್ಗುಲನ್ನು ಪರಿಚಯಿಸುವಂತಿದೆ.

ದಕ್ಷಿಣ ಏಷ್ಯಾ ಮತ್ತು ‘ಬ್ರಿಕ್ಸ್‌’ ದೇಶಗಳಲ್ಲಿ ಹಸಿವಿನಿಂದ ಬಳಲುತ್ತಿರುವ ಅತ್ಯಂತ ಹೆಚ್ಚು ಜನರು ಭಾರತದಲ್ಲಿದ್ದಾರೆ ಎನ್ನುವ ಸುದ್ದಿಯು ದಾರುಣ ಮುಖವೊಂದನ್ನು ಸೂಚಿಸುತ್ತದೆ. ‘ಕನ್ಸರ್ನ್‌ ವರ್ಲ್ಡ್‌ವೈಡ್‌’ ಮತ್ತು ‘ವೆಲ್ಟ್‌ಹಂಗರ್‌ಹಿಲ್ಫ್‌’ ಎನ್ನುವ ಸಂಸ್ಥೆಗಳು ಸಿದ್ಧಪಡಿಸಿರುವ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 102ನೇ ಸ್ಥಾನದಲ್ಲಿದೆ. ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಕಡಿಮೆ ತೂಕದ ಮಕ್ಕಳು ಹಾಗೂ ಶಿಶುಮರಣದ ಪ್ರಮಾಣವನ್ನು ಆಧರಿಸಿ ಈ ಸೂಚ್ಯಂಕವನ್ನು ರೂಪಿಸಲಾಗಿದೆ. ಅಪೌಷ್ಟಿಕತೆ, ಮಕ್ಕಳ ಕಡಿಮೆ ತೂಕ ಹಾಗೂ ಶಿಶುಮರಣ– ಇವೆಲ್ಲವೂ ಪರಸ್ಪರ ಸಂಬಂಧ ಹೊಂದಿರುವ ಸಂಗತಿಗಳು.

ಗರ್ಭಾವಸ್ಥೆಯಿಂದಲೇ ತಲೆದೋರುವ ಅಪೌಷ್ಟಿಕತೆಯ ಸಮಸ್ಯೆ, ಶಿಶುಮರಣಕ್ಕೂ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವುದಕ್ಕೂ ಕಾರಣವಾಗುತ್ತದೆ. ಶಿಶುಮರಣ ಪ್ರಮಾಣ ದೇಶದಲ್ಲಿ ಶೇ 3.9ರಷ್ಟಿದ್ದರೆ, ಬೆಳವಣಿಗೆ ಕುಂಠಿತವಾದ ಮಕ್ಕಳ ಸಂಖ್ಯೆ ಶೇ 37.8ರಷ್ಟಿದೆ. ನೂರಕ್ಕೆ ಸುಮಾರು ಹದಿನೈದು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, 6ರಿಂದ 23 ತಿಂಗಳವರೆಗಿನ ಶೇ 9.6 ಮಕ್ಕಳಿಗೆ ಕನಿಷ್ಠ ಆಹಾರ ದೊರೆಯುತ್ತಿದೆ. ವಿಶ್ವ ಹಸಿವು ಸೂಚ್ಯಂಕದ ಪಟ್ಟಿಯಲ್ಲಿ ಭಾರತ 2015ರಲ್ಲಿ 93ನೇ ಸ್ಥಾನ ಹಾಗೂ 2018ರಲ್ಲಿ 103ನೇ ಸ್ಥಾನದಲ್ಲಿತ್ತು.

2015ಕ್ಕೆ ಹೋಲಿಸಿದರೆ ಈಗ ಒಂಬತ್ತು ಸ್ಥಾನಗಳಷ್ಟು ಕುಸಿತ ಕಂಡಿರುವುದು ಆತಂಕಕ್ಕೆಡೆ ಮಾಡುವ ಸಂಗತಿ. ಇದೇ ಸೂಚ್ಯಂಕದಲ್ಲಿ 2000ನೇ ಇಸವಿಯಲ್ಲಿ ಭಾರತ 83ನೇ ಸ್ಥಾನದಲ್ಲಿತ್ತು ಎನ್ನುವುದನ್ನು ಪರಿಗಣಿಸಿದರೆ, ಎರಡು ದಶಕಗಳಲ್ಲಿ ನಾವು ಸಾಧಿಸಿರುವ ಅಭಿವೃದ್ಧಿಯ ಅಸಲಿಯತ್ತಿನ ಬಗ್ಗೆಯೇ ಗಂಭೀರ ವಿಮರ್ಶೆ ನಡೆಯಬೇಕಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಹಾಗೂ ಚೀನಾ ದೇಶವು ಭಾರತಕ್ಕಿಂತಲೂ ಉತ್ತಮ ಸ್ಥಾನದಲ್ಲಿರುವುದು ಕೂಡ ನಾವು ಎಡವಿರುವುದೆಲ್ಲಿ ಎನ್ನುವುದರ ವಿಶ್ಲೇಷಣೆಗೆ ಪ್ರೇರಣೆಯಾಗಬೇಕು.

‘ಸ್ವಚ್ಛ ಭಾರತ’ ಅಭಿಯಾನ ನಿರೀಕ್ಷಿತ ಫಲ ನೀಡದಿರುವುದನ್ನು ಗುರುತಿಸಿರುವ ಹಸಿವು ಸೂಚ್ಯಂಕದ ವರದಿಯು ಸ್ವಚ್ಛತೆಯ ಕೊರತೆ, ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳಲು ಕಾರಣಗಳಲ್ಲೊಂದಾಗಿದೆ ಎಂದು ಹೇಳಿದೆ. ಸ್ವಾತಂತ್ರ್ಯ ಪಡೆದಾಗಿನಿಂದ ಈವರೆಗೆ ಬಡತನ–ಹಸಿವು ನಿರ್ಮೂಲನೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ‘ಗರೀಬಿ ಹಠಾವೊ’ದಿಂದ ಕರ್ನಾಟಕದ ‘ಅನ್ನಭಾಗ್ಯ’ದವರೆಗಿನ ಹಲವು ಯೋಜನೆಗಳು ಹಸಿವಿನ ನಿರ್ಮೂಲನೆಯ ಉದ್ದೇಶದಿಂದಲೇ ರೂಪುಗೊಂಡಂತಹವು. ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ದವಸ ಧಾನ್ಯ ವಿತರಿಸುವ ಪಡಿತರ ಯೋಜನೆಗಳು ಎಲ್ಲ ರಾಜ್ಯಗಳಲ್ಲಿವೆ. ಇಷ್ಟೆಲ್ಲ ಕಾರ್ಯಕ್ರಮಗಳ ನಂತರವೂ ಹಸಿವಿನ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದರೆ, ಅರ್ಹರನ್ನು ತಲುಪುವಲ್ಲಿ ಯೋಜನೆಗಳು ಯಶಸ್ವಿಯಾಗಿಲ್ಲ ಎಂದಾಯಿತು. ಆಹಾರಧಾನ್ಯಗಳ ಸಂಗ್ರಹ ಹಾಗೂ ವಿತರಣೆ ಕೂಡ ಸಮರ್ಪಕವಾಗಿಲ್ಲ.

ಒಂದೆಡೆ ಹೊಟ್ಟೆ ಹಸಿದ ಮಂದಿಯಿದ್ದರೆ, ಇನ್ನೊಂದು ತುದಿಯಲ್ಲಿ ಗೋದಾಮುಗಳಲ್ಲಿನ ಆಹಾರ ಕೊಳೆಯುತ್ತಿದೆ, ಇಲಿ- ಹೆಗ್ಗಣಗಳ ಪಾಲಾಗುತ್ತಿದೆ‌. ಶ್ರೀಮಂತವರ್ಗ ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಐದನೇ ಒಂದು ಪಾಲು ಪೋಲಾಗುತ್ತಿದೆ ಎನ್ನುವ ವರದಿಯೂ ಇದೆ. ಅನ್ನದ ಈ ಅಪಬಳಕೆಯು ಅಮಾನವೀಯ, ಅನೈತಿಕ. ಆಹಾರವು ಮನುಷ್ಯನ ಕನಿಷ್ಠ ಹಾಗೂ ಮೂಲಭೂತ ಅಗತ್ಯ. ಆಹಾರ ಪೂರೈಕೆಗೆ ಸಂಬಂಧಿಸಿದಂತೆಯೇ ಉದ್ಯೋಗಸೃಷ್ಟಿ ಚಟುವಟಿಕೆಗಳು ನಡೆಯುತ್ತವೆ. ‘ಜಾಗತಿಕ ಹಸಿವು ಸೂಚ್ಯಂಕ’ ಭಾರತದಲ್ಲಿನ ಹಸಿವಿನ ಭಾಗವಾದ ಆರೋಗ್ಯ, ಆರ್ಥಿಕ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಯೋಚಿಸಲು ಒತ್ತಾಯಿಸುತ್ತದೆ. ಹಸಿವುಮುಕ್ತ ಭಾರತದ ಪ್ರಯತ್ನವನ್ನು ಒಂದು ಬೃಹತ್‌ ಹಾಗೂ ಪ್ರಾಮಾಣಿಕ ಆಂದೋಲನವಾಗಿ ಬೆಳೆಸಬೇಕಾದ ಸವಾಲು ಸರ್ಕಾರದ ಮುಂದಿದೆ. ಆಹಾರ ಮತ್ತು ಆರೋಗ್ಯ ಎಲ್ಲರ ಆದ್ಯತೆಯಾಗಬೇಕಾದುದು ಈ ಹೊತ್ತಿನ ಅಗತ್ಯ.


ಸಂತೋಷ ಜಾಬೀನ್ ಸುಲೇಪೇಟ
8496811823

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

15 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

23 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago