ದೇಹದ ಆರೋಗ್ಯಕ್ಕೆ ವ್ಯಾಯಾಮವೇ ಮೂಲ ಸೂತ್ರ

ಜಗತ್ತಿನ ಪ್ರತಿಯೊಂದು ದೇಶಗಳಲ್ಲಿ ಪ್ರತಿಯೊಂದು ಮಗುವಿಗೂ ಶಿಕ್ಷಣದ ಅವಶ್ಯಕತೆಯಿದೆ. ಒಂದು ಮಗುವಿನ ಸರ್ವತೋಮುಖ ಅಭಿವೃದ್ಧಿಗಾಗಿ ಅಕ್ಷರ ಶಿಕ್ಷಣದ ಜೊತೆಗೆ ಶಾರೀರಿಕ ಶಿಕ್ಷಣ ಬೇಕೇಬೇಕು. ಅದರಲ್ಲಿಯೂ ಕೂಡ ಇಂದಿನ ಆಧುನಿಕ ಜಗತ್ತಿನಲ್ಲಿ ಯಾಂತ್ರಿಕ ಬದುಕಿನಲ್ಲಿ  ದೈಹಿಕ ಶಿಕ್ಷಣ ಮತ್ತು ಆರೋಗ್ಯದ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ. ಶಿಕ್ಷಣವನ್ನು ಪಡೆದು ನೀನು ವೈದ್ಯನೇಯಾಗು, ಇಂಜಿನಿಯರೇ ಆಗು, ಶಿಕ್ಷಕನೇ ಆಗು, ವಿಜ್ಞಾನಿಯೇ ಆಗು, ಅಧಿಕಾರಿಯೇ ಆಗು, ಕವಿಯೇ ಆಗು, ಪತ್ರಕರ್ತನೇ ಆಗು, ರಾಜಕಾರಣಿಯೇ ಆಗು, ವ್ಯಾಪಾರಿಯೇ ಆಗು ಏನಾದರೂ ಆಗು ನೀ ಮೊದಲು ಆರೋಗ್ಯವಂತನಾಗು ಎನ್ನುವುದು ಇಂದಿನ ಅತ್ಯಂತ ಪ್ರಸ್ತುತ ವಿಷಯ.

ಈ ವಿಷಯದ ಕುರಿತು  ಏಕೆ ಈಗ ಪ್ರಸ್ತುತವೆಂದರೆ, ಬಹಳಷ್ಟು ಬುದ್ಧಿಜೀವಿಗಳು, ಬಹಳಷ್ಟು ಜ್ಞಾನವನ್ನು ಪಡೆದುಕೊಂಡವರು  ಬಹಳಷ್ಟು ವಿಚಾರವನ್ನು ಹೊಂದಿರುವಂತವರು, ಬಹಳಷ್ಟು ಸಾಧನೆ ಮಾಡಿರುವಂತವರು, ಅಧಿಕಾರಿಗಳು, ಹಣ ಸಂಪಾದನೆ ಮಾಡಿದವರಲ್ಲಿ ಹಲವು ಜನ ಇಂದಿನ ಪ್ರಸ್ತುತ ಸಮಾಜದಲ್ಲಿ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವಂತದ್ದು ನಮ್ಮ ಕಣ್ಣಮುಂದೆ ಕಾಣಿಸುತ್ತಿದೆ.

ಏಕೆ ಈ ರೀತಿಯಾದಂತಹ ಸಮಸ್ಯೆ ಇಂದಿನ ಆಧುನಿಕ ಜಗತ್ತಿನಲ್ಲಿ ಎಲ್ಲಾ ರಾಷ್ಟ್ರಗಳಲ್ಲಿ ಕಾಣಿಸುತ್ತಿದೆ? ಅದರಲ್ಲಿ ಹೆಚ್ಚಿನದಾಗಿ ಭಾರತದಲ್ಲಿ ಏಕೆ ಕಾಣಿಸುತ್ತಿದೆ ಎನ್ನುವುದನ್ನು ವಿಚಾರ ಮಾಡಿದಾಗ ಆರೋಗ್ಯದ ಬಗ್ಗೆ ಮತ್ತು ಶರೀರದ ಬಗ್ಗೆ ಸರಿಯಾದ ಜ್ಞಾನ ಇಲ್ಲದೆ ಇರುವಂತದ್ದು, ಮತ್ತು ನಾವು ಸೇವಿಸುವ  ಆಹಾರದ ಬಗ್ಗೆ ವೈಜ್ಞಾನಿಕ ಜ್ಞಾನ ಇರದೆ ಇರುವಂತದ್ದು ಪ್ರಮುಖ ಕಾರಣವಾಗಿದೆ. ಅಲ್ಲದೆ ಪ್ರತಿದಿನ ಬೆಳಗಿನ ಒಂದೆರೆಡು ತಾಸು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಇರುವಂತದ್ದು.

ಯಾಂತ್ರಿಕ ಜೀವನ ಬರುವುದಕ್ಕಿಂತ ಮುಂಚೆ ಪ್ರತಿಯೊಬ್ಬ ವ್ಯಕ್ತಿ ಶಾರೀರಿಕವಾಗಿ ಒಂದಿಲ್ಲ ಒಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಊರಿಂದ ಊರಿಗೆ ಹೋಗುವಾಗ ನಡೆಗೆ ಮೂಲಕ ಹೋಗುವುದಾಗಲಿ ಸೈಕಲ್ ಸವಾರಿಗಳ ಮೂಲಕ ಹೋಗುವುದಾಗಲಿ, ನೀರನ್ನು ಬಾವಿಯಿಂದ ಸೇದಿ ತರುವುದಾಗಲಿ, ಹೀಗೆ ಒಂದಿಲ್ಲ ಒಂದು ಚಟುವಟಿಕೆಗಳಲ್ಲಿ ಶರೀರವನ್ನು ದಂಡಿಸುತ್ತಿದ್ದರು ಶರೀರ ಉಪಯೋಗಿಸಿಕೊಳ್ಳುತ್ತಿದ್ದರು ಶಾರಿರಿಕ  ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.

ಈಗ ಪ್ರಸ್ತುತ ಬಟನ್ ಒತ್ತಿದರೆ ಸಾಕು ಬೋರ್ವೆಲ್ ನಿಂದ ನೀರು ಬರುವಂತದ್ದು, ಪ್ರಯಾಣಿಸಬೇಕಾದರೆ ವಾಹನಗಳನ್ನು ಅವಲಂಬಿಸಿರುವಂಥದ್ದು ಇವುಗಳೆಲ್ಲ ನಮ್ಮ ಅನುಕೂಲಕ್ಕಾಗಿ ಇರುವಂತದ್ದು ಇದರಿಂದ ಅನೇಕ ದೈಹಿಕ ಚಟುವಟಿಕೆ  ಕಡಿಮೆ ಆಗಿದೆ. ಆದರೆ ಅತಿಯಾದ ಯಂತ್ರಗಳ ಬಳಕೆಯಿಂದ ನಾವು ಶರೀರವನ್ನ ಬಳಸದೆ ಇದ್ದರೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿದ್ದರೆ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಆರೋಗ್ಯವೇ ಇಲ್ಲ ಅಂದಮೇಲೆ ಎಷ್ಟು ಅಧಿಕಾರವಿದ್ದರೇನು, ಎಷ್ಟು ಹಣವಿದ್ದರೇನು, ಎಷ್ಟು ಆಸ್ತಿ ಇದ್ದರೇನು ಅವಾವು ಗಣನೆಗೆ ಬರುವುದಿಲ್ಲ.

ಇಂದಿನ ಪ್ರಸ್ತುತದಲ್ಲಿ  ಮಾಡಬೇಕಾದದ್ದೇನು ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಶರೀರ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು. ಹಾಗಾದ್ರೆ ಅರಿವು ಮೂಡಿಸುವಲ್ಲಿ ದೈಹಿಕ ಶಿಕ್ಷಣದ ಪಾತ್ರ ಏನು ಎಂದು ಪ್ರಶ್ನಿಸಿದಾಗ. ದೈಹಿಕ ಶಿಕ್ಷಣ ಎಂದರೆ ನಮ್ಮಲ್ಲಿ ತಟ್ಟನೆ ಹೊಳೆಯುವಂತದ್ದು ಒಲಂಪಿಕ್ಸ್ ನಲ್ಲಿ ಏಷ್ಯನ್ ಗೇಮ್ಸ್ ಅಲ್ಲಿ ಕಾಮನ್ವೆಲ್ತ್  ಗೇಮ್ಸ್ ನಲ್ಲಿ ಪದಕ ತರಲೇಬೇಕು ಎನ್ನುವುದಾಗಿದೆ.ಆದರೆ ಎಷ್ಟು ಜನರಿಗೆ ಸಾಧ್ಯ? ಆದರೆ ನನ್ನ ದೃಷ್ಟಿಯಲ್ಲಿ ಆರೋಗ್ಯಕ್ಕಾಗಿ ನಡೆ ಸ್ಪರ್ಧೆಗಾಗಿ ಓಡು ಎನ್ನುವ ವಿಚಾರ ಬರುತ್ತದೆ.

ಏಕೆ ಈ ವಿಚಾರ ಹೇಳುತ್ತಿದ್ದೇನೆ ಅಂದರೆ ಪ್ರತಿಯೊಂದು ಮಗುವು ಶಿಕ್ಷಣ ಪಡೆದ ಮೇಲೆ ತನ್ನ ಉಪಜೀವನಕ್ಕಾಗಿ ಒಂದಿಲ್ಲ ಒಂದು ಕಾಯಕ ಮಾಡಲೇಬೇಕು ಆ ಕಾಯಕ ಮಾಡಲು  ಆರೋಗ್ಯವಂತ ಸದೃಢ ದೇಹದ ಮಗುವಿನ ನಿರ್ಮಾಣ ಮಾಡುವುದು ಶರೀರ ಶಿಕ್ಷಣದ ಮುಖ್ಯ ಉದ್ದೇಶ ಆಗಿದೆ. ಮಗುವಿನ ಆರೋಗ್ಯಕ್ಕಾಗಿ ಪ್ರತಿನಿತ್ಯ ವ್ಯಾಯಾಮ, ಯೋಗ, ನಡಿಗೆ,ಓಟ ಹೀಗೆ ಅನೇಕ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಸದೃಢವಾದಂತಹ ದೇಹ ಮತ್ತು ಮನಸ್ಸು  ನಿರ್ಮಾಣವಾಗುತ್ತದೆ.

ಒಂದು ಸಾಮಾನ್ಯ ವಿಚಾರವನ್ನು ತೆಗೆದುಕೊಂಡಾಗ ಗಣಿತ ಬೋಧನೆ ಮಾಡುವಂತವರಿಗೆ ತಮಗೆ ಸಮಾಜ ವಿಜ್ಞಾನ, ಇತಿಹಾಸ, ಅದರ ಬಗ್ಗೆ  ಏಕೆ ತಿಳಿದುಕೊಳ್ಳಬೇಕು ಅನಿಸಬಹುದು ಹಾಗೆ ಕನ್ನಡ ಬೋಧನೆ ಮಾಡುವಂತಹ ಅವರಿಗೆ ಗಣಿತ ಮತ್ತು ವಿಜ್ಞಾನದ ಬಗ್ಗೆ ಏಕೆ ತಿಳಿದುಕೊಳ್ಳಬೇಕು ಅಂತ ಅನ್ನಿಸಬಹುದು, ಕಂಪ್ಯೂಟರ್ ಅನ್ನು ಬೋಧಿಸುವಂಥವರಿಗೆ  ಇತಿಹಾಸ, ಭೂಗೋಳಶಾಸ್ತ್ರದ ಬಗ್ಗೆ ಏಕೆ ತಿಳಿದುಕೊಳ್ಳಬೇಕು ಅಂತ ಅನ್ನಿಸಬಹುದು, ಇಂಗ್ಲೀμï ಭಾμÉಯನ್ನು ಬೋಧನೆ ಮಾಡುವಂತವರಿಗೆ  ಗಣಿತ ಮತ್ತು ವಿಜ್ಞಾನದ ಬಗ್ಗೆ ಏಕೆ ತಿಳಿದುಕೊಳ್ಳಬೇಕು ಅಂತ ಅನ್ನಿಸಬಹುದು.

ಹೀಗೆ ಪ್ರತಿಯೊಬ್ಬರಿಗೂ ತಾವು ಬೋಧನೆ ಮಾಡುವ ವಿಷಯ ತಿಳಿದುಕೊಂಡರೆ ಸಾಕು ಎನ್ನುವಂತದ್ದು ಪ್ರತಿಯೊಬ್ಬರಲ್ಲಿಯೂ ಇರುತ್ತದೆ, ಹಾಗೆ ಒಬ್ಬ ರಾಜಕಾರಣಿಯಾಗಿದ್ದರೆ ಪ್ರಕರ್ತನಾದರೆ ಇತಿಹಾಸ,ವಿಜ್ಞಾನ, ರಸಾಯನಶಾಸ್ತ್ರ, ತತ್ವಶಾಸ್ತ್ರ, ಗಣಿತ, ಭೂಗೋಳ, ಹೀಗೆ ಅನೇಕ ವಿಷಯಗಳ  ಬಗ್ಗೆ ಏಕೆ ತಿಳಿದುಕೊಳ್ಳಬೇಕು ಎನ್ನುವಂತಹ ಪ್ರಶ್ನೆ ಬರಬಹುದು, ಇದರಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವಂತವರು ಬಹಳ ಅಪರೂಪ.

ಏಕೆ  ವಿಷಯವನ್ನ ಪ್ರಸ್ತಾಪಿಸುತ್ತೇನೆ ಎಂದರೆ ತಮ್ಮ ಜೀವನೋಪಾಯಕ್ಕಾಗಿ ವ್ಯಕ್ತಿ ಬಂದಿಲ್ಲ ಒಂದು ಕಾಯಕ ಮಾಡಬೇಕು ಕಾಯಕದಿಂದ ಧನ ಸಂಪಾದನೆ ಮಾಡಿ ಅದರಲ್ಲಿ ತಮ್ಮ ಉಪಜೀವನವನ್ನು ನಡೆಸುತ್ತಾರೆ. ಆದರೆ ಯಾವುದೇ ವೃತ್ತಿ ಯಾವುದೇ ಪ್ರವೃತ್ತಿಯನ್ನು ಕೈಗೊಂಡಿದ್ದರು ಕೂಡ ಆರೋಗ್ಯದ ಬಗ್ಗೆ ಶರೀರದ ಬಗ್ಗೆ ಶಾರೀರಿಕ ಶಿಕ್ಷಣದ ಬಗ್ಗೆ ಏಕೆ ತಿಳಿದುಕೊಳ್ಳಬೇಕು ಎಂದು ಪ್ರಶ್ನಿಸುವ ವಿಚಾರ ನಮಗೆ ಯಾರಿಗೂ ಬರುವುದೇ ಇಲ್ಲ. ಏಕೆಂದರೆ ಏನಾದರೂ ಆಗು ನೀ ಮೊದಲು ಆರೋಗ್ಯವಂತನಾಗು, ಆರೋಗ್ಯದ ವಿನಹ ದೇಹ ಕೀಟದಿಂದ ಸೌದೆಯಂತೆ, ಎನ್ನುವಂತೆ ಪ್ರತಿಯೊಬ್ಬರಿಗೂ ಕೂಡ ಆರೋಗ್ಯ ಬೇಕೇ ಬೇಕು.

ಹಾಗಾದರೆ ದೈಹಿಕ  ಶಿಕ್ಷಣದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿಕೊಂಡು ಪರಿಹಾರವನ್ನು ಹುಡುಕುತ್ತಾ ಹೋದರೆ ಖಂಡಿತ  ಪರಿಹಾರವಿದೆ. ಪ್ರತಿನಿತ್ಯ ಅರ್ಧಗಂಟೆ ನಡೆಗೆ ನಮ್ಮ ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ.  ಪ್ರತಿನಿತ್ಯ ಯೋಗ ಅಭ್ಯಾಸವನ್ನು ಮಾಡುವುದರ  ಮೂಲಕ ಮನಸ್ಸು  ಹಗುರವಾಗಿ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಆಟಗಳನ್ನು ಆಡುವುದರ ಮೂಲಕ ದೇಹದ ಪ್ರತಿಯೊಂದು ಅಂಗಾಂಗಗಳಿಗೆ ವ್ಯಾಯಾಮ ಸಿಗುತ್ತದೆ.

ಹೀಗೆ ದೇಹಕ್ಕೆ ಬೇಕಾಗುವಂತಹ ಅನೇಕ ಪ್ರಯೋಜನಗಳು ಶರೀರ ಶಿಕ್ಷಣದ ಮೂಲಕ ನಾವು ಪಡೆದುಕೊಳ್ಳುತ್ತೇವೆ ಇμÉ್ಟಲ್ಲ ಮಹತ್ವವನ್ನು ಹೊಂದಿರತಕ್ಕಂತಹ ಶರೀರ ಶಿಕ್ಷಣ,ದೈಹಿಕ ಶಿಕ್ಷಣ,ಯೋಗ ಶಿಕ್ಷಣ ಕಡ್ಡಾಯವಾಗಿ ಪ್ರತಿಯೊಂದು ಮಗುವಿಗೆ ದೊರೆಯಲೇಬೇಕಾದಂತಹ ಮತ್ತು ಜೀವನದ ಕೊನೆಯ ಉಸಿರಿರುವರೆಗೂ ಅತ್ಯಂತ ಉಪಯೋಗಕರವಾದಂತಹ ಶಿಕ್ಷಣ ಯಾವುದಾದರೂ ಇದ್ದರೆ ಅದು ದೈಹಿಕ ಶಿಕ್ಷಣ,ಆರೋಗ್ಯ ಶಿಕ್ಷಣ, ಯೋಗ ಶಿಕ್ಷಣ ಇಂತಹ ಅತ್ಯಮೂಲ್ಯ ವಾದಂತಹ ಶಿಕ್ಷಣ ವ್ಯವಸ್ಥೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕಡೆಗಣಿಸುತ್ತಿರುವ ಅಂತದ್ದು ಅತ್ಯಂತ ದುರದೃಷ್ಟಕರವಾದ ಸಂಗತಿಯ ಸರಿ ದೇಶದ ನಿಜವಾದ ಸಂಪತ್ತು ಆರೋಗ್ಯವಂತ ಮಗುವಿನ ರೂಪಿಸುವಲ್ಲಿ ಪ್ರಮುಖ ಕೊಡುಗೆಯನ್ನು ನೀಡುವಂತದ್ದಾಗಿದೆ.

ಯಾವುದೇ ವಿಷಯವನ್ನು ಅಧ್ಯಯನ ಮಾಡಿದರೆ ಉದ್ಯೋಗ ದೊರೆಯುವವರೆಗೂ ಮಾತ್ರ ನಾವು ಆ ವಿಷಯದ ಬಗ್ಗೆ ಅಧ್ಯಯನ ಮಾಡುತ್ತೇವೆ. ಆದರೆ ಶರೀರ ಶಿಕ್ಷಣ ದೈಹಿಕ ಶಿಕ್ಷಣ ಯೋಗ ಶಿಕ್ಷಣ ಇದಕ್ಕೆ ಕೊನೆ ಎಂಬುದೇ ಇಲ್ಲ ಏಕೆಂದರೆ ಉದ್ಯೋಗದ ಮೊದಲು ಉದ್ಯೋಗದ ನಂತರ ನಾವು ಯಾವುದೇ ಉದ್ಯೋಗದಲ್ಲಿ ತೊಡಗಿಸಿ ಕೊಂಡಾಗ ನಮಗೆ ಜೀವನದ ಕೊನೆಯ ಉಸಿರಿರುವರೆಗೂ ಮುಖ್ಯವಾಗಿ ಬೇಕಾಗಿರ್ತಕಂತದ್ದು ಆರೋಗ್ಯ, ದೈಹಿಕ ಸದೃಢತೆ. ಶಿಕ್ಷಣ  ಪಡೆಯುವಾಗಲೂ ಉದ್ಯೋಗ ದೊರೆತ ನಂತರ ಕೂಡ ನಮಗೆ ಉಪಯೋಗಕ್ಕೆ ಬರುವಂತಹದ್ದು ಜೀವನದ ಪ್ರತಿಯೊಂದು ಕ್ಷಣದಲ್ಲೂ ಪ್ರತಿಯೊಂದು ಹಂತದಲ್ಲೂ ಜೀವನದ ಕೊನೆಯ ಉಸಿರಿರುವವರೆಗೂ ಆರೋಗ್ಯದ ಬಗ್ಗೆ ಜ್ಞಾನ ಕಲಿಸಿಕೊಡುವಂತದ್ದು ದೈಹಿಕ ಶಿಕ್ಷಣದಲ್ಲಿದೆ.

ಶಿಕ್ಷಣ ಪಡೆದಂತಹ ಪ್ರತಿಯೊಬ್ಬರೂ ಒಂದಿಲ್ಲ ಒಂದು ವೃತ್ತಿಯನ್ನು ಪಡೆದುಕೊಳ್ಳುತ್ತಾರೆ ಪಡೆದುಕೊಂಡ ನಂತರವೂ ಕೂಡ ಯಾವಾಗಲೂ ಉತ್ತಮ ಆರೋಗ್ಯಕ್ಕಾಗಿ ಯೋಗ ವ್ಯಾಯಾಮ ನಡಿಗೆ ಓಟ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಹಾಗಾಗಿ ಶಿಕ್ಷಣದ ಜೊತೆಯೂ ಶಿಕ್ಷಣದ ನಂತರವೂ ಪ್ರತಿಯೊಬ್ಬರಿಗೂ ತಿಳಿದುಕೊಳ್ಳಬೇಕಾದದ್ದು ಅದು ದೈಹಿಕ ಶಿಕ್ಷಣ ಆಗಿದೆ. ಇμÉ್ಟಲ್ಲ ಉಪಯೋಗವನ್ನು ಹೊಂದಿರುವ  ದೈಹಿಕ ಶಿಕ್ಷಣಕ್ಕೆ ಹೆಚ್ಚು ಹೆಚ್ಚು ಪ್ರಾಶಸ್ತ್ಯ  ನೀಡುವಂತಾಗಲಿ ದೈಹಿಕ ಶಿಕ್ಷಣ ಶಿಕ್ಷಕರ, ಭೋಧಕರ ನೇಮಕಾತಿ ಆಗಲಿ ಸದೃಢ, ಆರೋಗ್ಯಯುತ ಸಮಾಜ ನಿರ್ಮಿಸುವಂತಾಗಲಿ.

 

– ಶ್ರೀನಾಥ ಇರಗೊಂಡ. ದೈಹಿಕ ಶಿಕ್ಷಕರು,

ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ವಾಡಿ.

emedialine

Recent Posts

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

8 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

8 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

8 hours ago

ಕನ್ನಡ ದೀಪೋತ್ಸವ: ವಿಜಯೀಭವ ಕೃತಿ ಜನಾರ್ಪಣೆ 24 ರಂದು

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…

8 hours ago

ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…

8 hours ago

ಅಭಿವೃದ್ಧಿ ಪರ ಚಿಂತನೆಯಳ್ಳ ಪ್ರಬುದ್ದ ರಾಜಕಾರಣಿ ಪ್ರಿಯಾಂಕ್ ಖರ್ಗೆ

ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…

8 hours ago