ಅಂಧಕಾರವನ್ನು ಹಿಂದಿಕ್ಕಿ ಬೆಳಕಿನೆಡೆಗೆ ಸಾಗುವುದೇ ದೀಪಾವಳಿ

ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾದ ಹಾಗೂ ಭಾರತೀಯ ಸಾಂಸ್ಕøತಿಕ ಹಬ್ಬಗಳಲ್ಲಿ ಅತ್ಯಂತ ಮಹತ್ವಪೂರ್ಣವಾದ ಹಬ್ಬ ದೀಪಾವಳಿ. ಇದು ಪರಿಕಲ್ಪನೆಯಂತೆ ಕತ್ತಲಿನಿಂದ ಬೆಳಕಿನತ್ತ ಸಾಗುವ ಹಬ್ಬವಾಗಿದ್ದು, ಹೊಸ ಪ್ರಾರಂಭ, ಹೊಸ ಬೆಳಕು ಮತ್ತು ಕೃತಜ್ಞತೆಯ ಸಂಕೇತವಾಗಿದೆ.

ದೀಪಾವಳಿ ಹಬ್ಬವು ವಿಭಿನ್ನ ಪ್ರಾಂತಗಳಲ್ಲಿ ವಿವಿಧ ಕಥೆಗಳೊಂದಿಗೆ ಸಂಭಂಧ ಹೊಂದಿದೆ. ಶ್ರೀ ರಾಮನು ರಾವಣನನ್ನು ಗೆದ್ದು ಸೀತಾಮಾತೆ ಹಾಗೂ ಅನುಜ ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಆಚರಿಸುತ್ತಾರೆ. ಇನ್ನೂ ಕೆಲವು ಪ್ರಾಂತಗಳಲ್ಲಿ ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದ ದಿನ ಎಂದು ದೀಪಾವಳಿ ಆಚರಿಸುತ್ತಾರೆ. ಒಟ್ಟಿನಲ್ಲಿ ದೀಪಗಳ ಸಾಲು ಎಂದು ಅರ್ಥ ಹೊಂದಿರುವ ದೀಪಾವಳಿಯನ್ನು ಕೇಡಿನ ಮೇಲೆ ಶುಭದ ವಿಜಯ ಎಂದು ಆಚರಿಸಲಾಗುತ್ತದೆ.

ದೀಪಾವಳಿಯ ಸಮಯದಲ್ಲಿ, ಮನೆಯಲ್ಲಿ ಮತ್ತು ಮನೆಯ ಹೊರಗಿನ ಪ್ರದೇಶಗಳಲ್ಲಿ ಬೆಳಕಿನÀ ಉಲ್ಲಾಸವಿರುತ್ತದೆ. ಮನೆಗಳನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕಾರಗೊಳಿಸಿ, ಆಕಾಶ ಬುಟ್ಟಿಯಲ್ಲಿ ದೀಪವನ್ನಿಟ್ಟು, ರಂಗೋಲಿ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.

ದೀಪಾವಳಿಯಂದು ಮನೆಗಳಲ್ಲಿ ಹಾಗೂ ಅಂಗಡಿಗಳಲ್ಲಿ ಮಹಾಲಕ್ಷ್ಮಿ ಪೂಜೆ ನಡೆಯುತ್ತದೆ. ಈ ಪೂಜೆಯಲ್ಲಿ ಹೂವು ಹಣ್ಣು ಇಟ್ಟು ದೀಪಗಳಿಂದ ಮಹಾಲಕ್ಷ್ಮೀಗೆ ಅಲಂಕರಿಸಿ, ಸಿಹಿ ಹಂಚುತ್ತಾರೆ. ದೀಪಾವಳಿಯ ಸಂದರ್ಭದಲ್ಲಿ, ಪಾಕವಿಧಾನಗಳ ಪಟ್ಟಿ ವಿಶೇಷವಾಗಿದೆ. ದೀಪಾವಳಿಗೆ ಅನೇಕ ಬಗೆಯ ಸಿಹಿ ಆಹಾರಗಳು ತಯಾರಿಸಲಾಗುತ್ತದೆ.

ಅವುಗಳನ್ನು ಕುಟುಂಬಗಳು ಮತ್ತು ಸ್ನೇಹಿತರು ಪರಸ್ಪರ ಹಂಚಿಕೊಳ್ಳುತ್ತಾರೆ. ದೀಪಾವಳಿ ಹಬ್ಬವು ಕೇವಲ ಧಾರ್ಮಿಕ ಆಚರಣೆಯಲ್ಲ, ಸಮಾಜದ ಜಾತಿ, ಧರ್ಮ, ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಮೆರೆದಂತೆ, ಬಾಂಧವ್ಯದ ಬಲವನ್ನು ವಿಸ್ತಾರಗೊಳಿಸುತ್ತದೆ. ಈ ಹಬ್ಬದ ಸಮಯದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.

ದೀಪಾವಳಿ ಹಬ್ಬವು ಮಕ್ಕಳಿಂದ ಹಿಡಿದು ಹಿರಿಯರೆಲ್ಲರಿಗೂ ಹೊಸ ಹರ್ಷವನ್ನು ನೀಡುತ್ತದೆ. ಈ ಹಬ್ಬವು ಎಲ್ಲರಿಗೂ ಸಂತೋಷ ಮತ್ತು ಆನಂದವನ್ನು ತರಿಸುತ್ತದೆ. ದೀಪಾವಳಿ, ಬೆಳಕಿನ ಹಬ್ಬ ನಾವು ಕತ್ತಲಿನಿಂದ ದೂರ ಹೋಗಿ ಬೆಳಕನ್ನು ಸ್ವೀಕರಿಸಲು ಪ್ರೇರಣೆ ನೀಡುತ್ತದೆ. ಪ್ರೀತಿ, ಶಾಂತಿ, ಮತ್ತು ಸೌಹಾರ್ದದ ಸಂದೇಶವನ್ನು ಸಾರುತ್ತದೆ. ಇದು ಆಧ್ಯಾತ್ಮಿಕ ಬೆಳಕಿನ ಸಂಕೇತವಾಗಿದೆ. ಕತ್ತಲಿನಿಂದ ಬೆಳಕಿನತ್ತ, ಅಜ್ಞಾನದಿಂದ ಜ್ಞಾನದೆಡೆಗೆ ಹೋಗುವುದು. ಈ ಹಬ್ಬವು ಆಂತರಿಕ ಶಾಂತಿಯ ಪುನಃ ಸ್ಥಾಪನೆಗೆ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತದೆ.

ದೀಪಾವಳಿ ಒಂದು ಕುಟುಂಬ ಮತ್ತು ಸ್ನೇಹಿತರ ನಡುವೆ ಬಾಂಧವ್ಯವನ್ನು ಬಲಪಡಿಸುವ ಹಬ್ಬವಾಗಿದೆ. ಈ ಹಬ್ಬದ ಸಮಯದಲ್ಲಿ, ಕುಟುಂಬದ ಎಲ್ಲಾ ಸದಸ್ಯರು ಸೇರಿ ಊಟ ಮಾಡುವುದು, ಆಟವಾಡುವುದು ಮತ್ತು ಪರಸ್ಪರ ಉಡುಗೊರೆಗಳನ್ನು ನೀಡುವುದು ಸಾಮಾನ್ಯವಾಗಿದೆ.

ದೀಪಾವಳಿಯ ಸಂದರ್ಭದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಕುಟುಂಬಗಳನ್ನು ಒಂದೆಡೆ ಸೇರಿಸುತ್ತವೆ. ನೃತ್ಯ, ಸಂಗೀತ, ಮತ್ತು ನಾಟಕಗಳ ಮೂಲಕ, ಈ ಹಬ್ಬವು ಸಮಾಜವನ್ನು ಜೋಡಿಸುತ್ತವೆ. ವಿಶೇಷವಾಗಿ, ಮಕ್ಕಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಂತೋಷಿಸುತ್ತಾರೆ.

ದೀಪಾವಳಿ ಭಾರತದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ವಿಭಜನೆಗಳನ್ನು ಮೀರಿದ ಹಬ್ಬವಾಗಿದ್ದು, ಇದು ಜನರನ್ನು ಒಗ್ಗೂಡಿಸುತ್ತದೆ. ದೀಪಾವಳಿಯ ಆಚರಣೆಗಳು ಪ್ರಾಂತದ ಪ್ರಕಾರ ಭಿನ್ನವಾಗಿದ್ದರೂ, ಸಮಾನ ಭಾವನೆಯೊಂದಿಗೆ ಆಚರಿಸುತ್ತಾರೆ. ದೀಪಾವಳಿ ಸಮಾಜದ ಒಗ್ಗಟ್ಟಿನ, ಬಾಂಧವ್ಯದ ಮತ್ತು ಮಾನವೀಯತೆಯ ಸಂಕೇತವಾಗಿದೆ. ದೀಪಾವಳಿಯ ಹಬ್ಬವನ್ನು ಎಲ್ಲಾ ವರ್ಣ, ಪಂಥ ಮತ್ತು ಸಂಸ್ಕೃತಿಯ ಜನರು ಸೇರಿಕೊಂಡು ಆಚರಿಸುತ್ತಾರೆ, ಇದು ಭಾರತದ ವೈವಿಧ್ಯತೆಯ ಪರ್ಯಾಯವನ್ನು ಪ್ರತಿಬಿಂಬಿಸುತ್ತದೆ.

ಕೊನೆಗೊಂದು ಕಳಕಳಿಯ ವಿನಮ್ರ ಬೇಡಿಕೆ:
ಪಟಾಕಿ ಹಾಗೂ ಸಿಡಿಮದ್ದುಗಳನ್ನು ಬಳಸುವುದರಿಂದ ಪರಿಸರದ ಮೇಲೆ ಬಹಳಷ್ಟು ಹಾನಿಯಾಗುತ್ತಿರುವುದು ಇಂದು ನಮಗೆ ಕಾಣ ಸಿಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ಬಳಸುವ ಮೂಲಕ ಪರಿಸರವು ಹೇಗೆ ಹಾನಿಯಾಗುತ್ತದೆ ಎಂಬುದರ ಕುರಿತು ಚಿಂತನೆ ಶುರುವಾಗಿದೆ. ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಮತ್ತು ಹವಾಮಾನದಲ್ಲಿ ಬದಲಾವಣೆಯ ಬಗ್ಗೆ ಹೆಚ್ಚು ಗಮನ ಹರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಾವೆಲ್ಲರೂ ಸೇರಿ ಪರಿಸರದ ಬಗ್ಗೆ ಹಾಗೂ ಮುಂದಿನ ಪೀಳಿಗೆಯ ಬಗ್ಗೆ ಕಾಳಜಿ ವಹಿಸೋಣ. ಹೀಗೆ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಣೆ ಮಾಡೋಣ. ಬನ್ನಿ ಎಲ್ಲರೂ ಕೈ ಜೋಡಿಸಿ.

ಕಳೆದ ಕೆಲವು ವರ್ಷಗಳಲ್ಲಿ, ಬಹಳಷ್ಟು ಜನ ಪರಿಸರ ಸ್ನೇಹಿ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಬೆಳಕಿನ ದೀಪಗಳು, ಜವಳಿ, ಮತ್ತು ಇತರ ಪುನರ್‍ಬಳಸಬಹುದಾದ ವಸ್ತುಗಳನ್ನು ಬಳಸುತ್ತಿದ್ದಾರೆ. ಪಟಾಕಿಗಳಿಗೆ ಬದಲಾಗಿ, ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಪೂರಕವಾಗಿ ಆಚರಣೆ ಮಾಡಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ.

ಅಶೋಕ ಪಾಟೀಲ,
ಅಶೋಕ ಪಾಟೀಲ
ಹವ್ಯಾಸಿ ಪತ್ರಕರ್ತರು
ಕಲಬುರಗಿ.
emedialine

Recent Posts

ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟ

ಡಿಸೆಂಬರ್ 4ಕ್ಕೆ ಮತದಾನ,ಅಂದೇ ಫಲಿತಾಂಶ ಪ್ರಕಟ ಕಲಬುರಗಿ,ನ.16: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ 2024-29…

36 mins ago

ಆನು ಒಲಿದಂತೆ ಹಾಡುವುದು ಕೂಡ ಕಾವ್ಯ: ಚಂದ್ರಕಲಾ ಬಿದರಿ

ಕಲಬುರಗಿ: ಕಾವ್ಯ ಅನ್ನುವುದು ಸುಲಭವಾಗಿ ಒಲಿಯುವುದಿಲ್ಲ.‌ ಅದು ತಪಸ್ಸು ಇದ್ದ ಹಾಗೆ. ಕವಿಗಳಿಗೆ ಅಧ್ಯಯನ ಹಾಗೂ ಶಬ್ದ ಭಂಡಾರ ಅಗತ್ಯ…

2 hours ago

ಜನಪದ ನೃತ್ಯೋತ್ಸವಕ್ಕೆ ಚಾಲನೆ

ಕಲಬುರಗಿ: ನಗರದ ರಂಗಾಯಣದಲ್ಲಿ ಮನಸ್ವಿ ಸಾಂಸ್ಕøತಿಕ ಹಾಗೂ ನಾಟ್ಯ ಕಲಾವಿದರ ಸಂಘದ ವತಿಯಿಂದ ಜನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ನೃತ್ಯಕಲಾವಿದ ಚಾಂದ…

3 hours ago

ಶುಕ್ಲಾ ಶಾಲೆಯ ವಾರ್ಷಿಕೋತ್ಸವಕ್ಕೆ ಚಾಲನೆ

ಕಲಬುರಗಿ: ನಗರದ ಶಾಹಬಜಾರಲ್ಲಿರುವ ಶುಕ್ಲಾ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಷಾ ಎಜುಕೇಶನಲ್ ಅಂಡ್ ಚಾರಿಟೇಬಲ್…

3 hours ago

ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಬೆಂಬಲವಿಲ್ಲ: ನಾಗರಾಜ ಗುಂಡಗುರ್ತಿ

ಕಲಬುರಗಿ; ನವೆಂಬರ್ 20 ರಂದು ಕರ್ನಾಟಕದಲ್ಲಿ ಮಧ್ಯ ಮಾರಾಟ ಮಳಿಗೆಗಳ ಬಂದ ಕರೆಗೆ ಬೆಂಬಲವಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್…

3 hours ago

ಭೀಮಾಶಂಕರ್, ಚಂದ್ರು, ನಾಡಗಿರಿ,ಗೋಪಾಲ ಸೇರಿ ಹಲವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಲಬುರಗಿ: ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವದಂಗವಾಗಿ ಕವಿಗೋಷ್ಠಿ,…

3 hours ago