ಬಿಸಿ ಬಿಸಿ ಸುದ್ದಿ

ಕಲಬುರಗಿ: ಕೆಬಿಎನ್ ದರ್ಗಾದ ನೂತನ ಪೀಠಾಧಿಪತಿಗಳ ಪಟ್ಟಾಭಿಷೇಕ

ಹಫೀಝ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ನೂತನ ಪೀಠಾಧಿಪತಿ

ಕಲಬುರಗಿ: ದಕ್ಕನ್ ಮತ್ತು ಕಲ್ಯಾಣ ಕರ್ನಾಟಕ ಭಾಗದ ಸು ಪ್ರಸಿದ್ಧ ಸೂಫಿ ಸಂತ್ ಹಝ್ರತ್ ಖಾಜಾ ಬಂದಾ ನವಾಜ್ ಗೇಸುದರಾಜ್ (ರ.ಅ) ದರ್ಗಾದ 24ನೇ ಪೀಠಾಧಿಪತಿಯಾಗಿ ಹಫೀಝ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ಅವರ ಪಟ್ಟಾಭಿಷೇಕ ಕಾರ್ಯಕ್ರಮ ಶನಿವಾರ ದೇಶದ ಪ್ರಸಿದ್ಧ ದರ್ಗಾಗಳ ಪೀಠಾಧಿಪಗಳ ಸಮ್ಮುಖದಲ್ಲಿ ದರ್ಗಾದ ಆವರಣದಲ್ಲಿ ಜರುಗಿತು.

ವಿದ್ವಾಂಸ ಕೆಬಿಎನ್ ದರ್ಗಾದ 23ನೇ ಪೀಠಾಧಿಪತಿಗಳಾದ ದಿವಂಗತ ಡಾ. ಸೈಯದ್ ಷಾ ಖ್ರೂಸ್ರೋ ಹುಸೈನಿ ಅವರು ಗುರುವಾರ ವಯೋಸಹಜವಾಗಿ ನಿಧನರಾಗಿದ್ದರು. ಅವರ ಹಿರಿಯ ಪುತ್ರದರಾದ ಹಫೀಝ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ಅವರನ್ನು ಧಾರ್ಮಿಕ ವಿಧಿವಿಧಾನಗಳ ಪ್ರಕಾರ ದರ್ಗಾದ 24ನೇ ಸಜ್ಜಾದಾ ನಶೀನ್ (ಪೀಠಾಧಿಪತಿ) ಪಟ್ಟಾಭಿಷೇಕ ಮಾಡಲಾಯಿತು.

ಇದಕ್ಕೂ ಮುನ್ನ ಖಾಜಾ ಬಂದಾ ನವಾಜ್ ದರ್ಗಾದಲ್ಲಿ ಧಾರ್ಮಿಕ ಕಾರ್ಯಕ್ರಮಗಳಾದ ಕತ್ ಮೆ ಕುರಾನ್ (ಕುರಾನ್ ಓದುವುದು), ಫಾತೇಹಾ ಕಾನಿ, ಚಾದರ್ ಗುಲ್ ಸೇರಿದಂತೆ ವಿಧಿವಿಧಾನಗಳ ಕಾರ್ಯಕ್ರಮಗಳು ಮತ್ತು ವಿಶೇಷ ಪ್ರಾರ್ಥನೆಗಳು ಜರುಗಿದವು.

ಪಟ್ಟಾಭಿಷೇಕದ ನಂತರ ನೂತನ ಪೀಠಾಧಿಪತಿಗಳು ದರ್ಗಾದಲ್ಲಿ ನಮಾಜ ಮಾಡುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ದಹಲಿ, ಅಜಮೇರ್, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲೆಂಗಾಣ ಸೇರಿದಂತೆ ದೇಶದ ವಿವಿಧ ಭಾಗಗಳ ಪ್ರಸಿದ್ಧ ದರ್ಗಾಗಳ ಪೀಠಾಧಿಪತಿಗಳು ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಿಸಿ ನೂತನ ಸಜ್ಜಾದೆ ಅವರಿಗೆ ಶುಭಹಾರೈಯಿಸಿ, ಆಶೀರ್ವಾದಿಸಿ ಅಭಿನಂದಿಸಿದರು.

ಸದರ ಸೋಫಾನಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ ಕವಾಲ್ಲಿ ಗಾಯಕರಿಂದ ಕವಾಲ್ಲಿ ಕಾರ್ಯಕ್ರಮ ನಡೆಯಿತು. ಸಹಸ್ರಾರು ಭಕ್ತರು ನವ ಪೀಠಧಿಪತಿ ಭೇಟಿಯಾಗಿ ಆಶಿರ್ವಾದ ಪಡೆದರು.

emedialine

Recent Posts

ಮಾರುತಿ ಅರೇನಾ ಕಂಪನಿಯ ದಿ ಡಾಸ್ಲಿಂಗ್ ನ್ಯೂ ಡಿಸೈರ್ ಕಾರ್ ಮಾರುಕಟ್ಟೆಗೆ ಬಿಡುಗಡೆ

ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿರುವ ಲಾಹೋಟಿ ಮೋಟಾರ್ಸ್ ಶೋರೂಂನಲ್ಲಿ ಮಾರುತಿ ಅರೇನಾ ಕಂಪನಿಯ ದಿ ಡಾಸ್ಲಿಂಗ್ ನ್ಯೂ ಡಿಸೈರ್ ಕಾರ್…

11 hours ago

ಜೈ ಕನ್ನಡಿಗರ ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಕಲಬುರಗಿ: ನಗರದ ಜೀಮ್ಸ್ ಆಸ್ಪತ್ರೆಯಲ್ಲಿರುವ ಇಂದಿರಾ ಕ್ಯಾಂಟಿನ್‍ನಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿರುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಜೈ ಕನ್ನಡಿಗರ ಸೇನೆಯಿಂದ…

11 hours ago

ಶರಣರ ಕೃಪೆಗೆ ಪಾತ್ರರಾಗಿಯೆಂದು ಮನವಿ: ನಾಗನಹಳ್ಳಿ, ಪಾಟೀಲ್

ಕಲಬುರಗಿ: ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾ ಸಮಿತಿವತಿಯಿಂದ ನವೆಂಬರ್ 14ರಂದು 8ನೇ ಪೀಠಾಧಿಪತಿಗಳು ಪೂಜ್ಯ ಡಾ. ಶ್ರೀ ಶರಣಬಸಪ್ಪ…

11 hours ago

ವಿಜಯನಗರ ಜಿಲ್ಲೆ ಅಭಿವೃದ್ದಿಗೆ ಕೆಕೆಆರ್ ಡಿಬಿಯಿಂದ 348 ಕೋಟಿ ರೂ ಅನುದಾನ: ಡಾ.ಅಜಯ್ ಸಿಂಗ್‌

ವಿಜಯನಗರ (ಹೊಸಪೇಟೆ):ಪ್ರಸಕ್ತ ವರ್ಷದಲ್ಲಿ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಕೆಆರ್ ಡಿಬಿಯಿಂದ ರೂ. 348 ಕೋಟಿ ನೀಡಲಾಗಿದೆ ಎಂದು ಕಲ್ಯಾಣ…

11 hours ago

ಮೌನ ಶಾಂತಿ ಸಮೃದ್ಧಿಯ ಸಂಕೇತ; ಗಿರೆಗೋಳ

ಕಲಬುರಗಿ; ಮೌನವಾಗಿರುವವರೆಲ್ಲ ದಡ್ಡರಲ್ಲ, ತುಂಬಾ ಮಾತನಾಡುವವರೆಲ್ಲ ಬುದ್ಧಿವಂತರಲ್ಲ, ಮಾತಿಗೆ ಒಂದರ್ಥವಿದ್ದರೆ, ಮೌನಕ್ಕೆ ಸಾವಿರ ಅರ್ಥವಿದೆ, ಅದರಂತೆ ಬಬಲಾದ ಗುರುಪಾದಲಿಂಗ ಪೂಜ್ಯರು…

11 hours ago

ಕಲಬುರಗಿ: ಶ್ರೀ ವಿಜಯ ದಾಸರ ಆರಾಧನೆ

ಕಲಬುರಗಿ: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ವಿಜಯದಾಸರ ಆರಾಧನೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮಹಿಳಾ ಭಜನಾ…

1 day ago