ಕಲಬುರಗಿ : ನಗರದಲ್ಲಿ ಆರೋಗ್ಯ ತುರ್ತು ಚಿಕಿತ್ಸೆ 108 ಅಂಬ್ಯುಲೇನ್ಸ 02 ವಾಹನಗಳು ಈಗ ಒಂದೇ ಕಡೆ ಕಾಕಡೆ ಚೌಕನಲ್ಲಿ ಇರುತ್ತವೆ. ಆದರೆ ನಗರ ಜನತೆಯ ಅನುಕೂಲಕ್ಕಾಗಿ 01 ವಾಹನವು ನಗರದ ಮಧ್ಯಭಾಗದಲ್ಲಿ ಸ್ಥಳವಕಾಶ ಮಾಡಿಕೊಡಬೇಕೆಂದು ಕಲಬುರಗಿ ಅಭಿವೃದ್ಧಿಪರ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಸರಕಾರದ ಮಹತ್ವ ಯೋಜನೆ ತುರ್ತು 108 ಆರೋಗ್ಯ ಕವಚ ಉಚಿತ ದೂರವಾಣಿ ಕರೆ ಮಾಡಿದ ಸಂದರ್ಭದಲ್ಲಿ ಕಲಬುರಗಿ ನಗರದಲ್ಲಿ ಇತ್ತೀಚಿಗೆ 108 ಆಂಬ್ಯುಲೇನ್ಸ್ ತುರ್ತು ಸೇವೆಗೆ ಸಾರ್ವಜನಿಕರು ಕರೆ ಮಾಡಿದಾಗ ಸಾರ್ವಜನಿಕರಿಗೆ ಸ್ಪಂಧಿಸುತ್ತಾ ಆರೋಗ್ಯ ಕವಚ ಸಿಬ್ಬಂದಿಯವರು ಮಾತನಾಡಿದ ಮೇಲೆ ಗಾಯಾಳುಗಳಿಗೆ ಆಸ್ಪತ್ರೆ ಸೇರಿಸುವ ಸಂಬಂಧ 108 ವಾಹನವು ಅವರ ಹತ್ತಿರ ಬರಲು ಸುಮಾರು 20 ನಿಮಿಷ ಮೇಲ್ಪಟ್ಟು ಸಮಯ ಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ. ಈ ಮೊದಲು ಆರೋಗ್ಯ ಕವಚ ಸಿಬ್ಬಂದಿಯವರು ತುರ್ತಾಗಿ ಬಂದು ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಜೀವ ಉಳಿಸುತ್ತಿದ್ದರು.
ಸದರಿ 108 ಆಂಬ್ಯುಲೇನ್ಸ್ ಸ್ಥಳವನ್ನು ಕಾಕಡೆ ಚೌಕ್, ಹುಮನಾಬಾದ ರಿಂಗ್ ರೋಡನಲ್ಲಿ ಇರುವುದರಿಂದ ನಗರದಲ್ಲಿ ಸುತ್ತ-ಮುತ್ತ ಬರುವ – ಕಾಲೋನಿಗಳಾದ ಬ್ರಹ್ಮಪೂ, ಜಗತ್, ಬಿದ್ದಾಪೂರ, ಹೀರಾಪೂರ, ಶಕ್ತಿ ನಗರ, ಸಿ.ಐ.ಬಿ ಕಾಲೋನಿ, ರಾಜಾಪೂರ, ಖರ್ಗೆ ಕ್ರಾಸ್, ವಿರೇಂದ್ರ ಪಾಟೀಲ್ ಬಡಾವಣೆ, ವಿಠಲ ನಗರ, ತಿಮ್ಮಾಪೂರ ಸರ್ಕಲ್, ನಗರದ ಇನ್ನು ಮುಂತಾದ ಬಡಾವಣೆಗಳಲ್ಲಿ ಆರೋಗ್ಯ ಸಮಸ್ಯೆಯ ತುರ್ತು ಸಂದರ್ಭಗಳಾದ ಹೃದಯಘಾತ, ರಸ್ತೆ ಅಪಘಾತ, ಹೆರಿಗೆ ನೋವು ಬೆಂಕಿ ಅನಾಹುತ, ಮುಂತಾದ ಸಮಯಗಳಲ್ಲಿ ಬರಲು ತಡವಾಗುತ್ತಿದೆ.
ಕಲಬುರಗಿ ನಗರದಲ್ಲಿ ಇತ್ತೀಚಿಗೆ ಒಂದು ಪ್ರಕರಣಗಳು ಬೆಳಕಿಗೆ ಬಂದಿರುವ ಪ್ರಕಾರ ಶಹಾಬಾದ ರಿಂಗ್ ರಸ್ತೆಯಲ್ಲಿ ಇಂಟರನ್ಯಾಶನಲ್ ಶಾಲೆಯ ಹಾಗೂ ಅನೇಕ ದುರಂತವು ಸಂಭವಿಸಿರುತ್ತವೆ. ಈ ಸಂದರ್ಭದಲ್ಲಿ 108 ಆಂಬ್ಯುಲೇನ್ಸ್ ಬರಲು ತುಂಬಾ ವಿಳಂಬವಾಗಿ ಮಕ್ಕಳಿಗೆ ತೊಂದರೆ ಅನುಭವಿಸುವಂತಾಗಿತ್ತು.
ಆದ್ದರಿಂದ ದಯಾಳುಗಳಾದ ತಾವುಗಳು ನಗರದಲ್ಲಿ ವಾಸಿಸುವ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ 108 ಆಂಬ್ಯುಲೇನ್ಸ್ ವಾಹನವು ಅತೀ ಅವಶ್ಯಕತೆ ಇರುವುದರಿಂದ ತಾವುಗಳು ನಗರದ ಮಧ್ಯಭಾಗದಲ್ಲಿ 108 ಆಂಬ್ಯುಲೇನ್ಸ್ ನಿಲ್ಲಿಸಿ ಇದರಿಂದ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ತುಂಬಾ ಅನುಕೂಲ ಮಾಡಿಕೊಟ್ಟಂತಾಗುತ್ತದೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಲೂಯಿಸ್ ಕೊರಿ, ಗೌರವಾಧ್ಯಕ್ಷ ಶಿವಕುಮಾರಿ ಬಾಳಿ, ನರಸಯ್ಯ ಗುತ್ತೇದಾರ, ಚಂದ್ರಶೇಖರ ಮಡಿವಾಳ, ಮಲ್ಲಿಕಾರ್ಜುನ ಸಾಗರ, ತುಕಾರಾಮ ಕೊಳ್ಳೂರ, ದೇವರಾಜ ಉಮ್ಮರ್ಗಿಕರ್, ಶಿವಲಿಂಗಯ್ಯ ಮಠಪತಿ, ರಾಜಶೇಖರ ಪಾಟೀಲ, ಅಂಬುಸಾ ಗಾಂಗಜಿ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಇಂದು ಸಂಜು ನಗರದಲ್ಲಿರುವ ಕಲಿಕಾ ಕೇಂದ್ರದಲ್ಲಿ ಮನ್ನೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಫಾರೂಕ್ ಮನ್ನೂರ್…
ಕಲಬುರಗಿ: ಜಾನಪದ ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವಿಯ ಮೌಲ್ಯ ಅಡಕವಾಗಿದೆ ಎಂದು ಮಹಾಪೌರರಾದ ಯಲ್ಲಪ್ಪ ನಾಯ್ಕೊಡಿ…
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕದ ಜನರ ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಾ ಬಂದಿದ್ದಾರೆ, ಅದರ ಮುಂದುವರೆದ ಭಾಗವಾಗಿ…
ಕಲಬುರಗಿ: ಕೆ ಪಿ ಆರ್ ಸಕ್ಕರೆ ಕಾರ್ಖಾನೆಯಿಂದ ಹೊರಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಜಮೀನುಗಳಿಗೆ…
ಕಲಬುರಗಿ; ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ವಿದ್ಯಾರಶ್ಮಿ…
ವಾಡಿ: ಮಾಜಿ ಪ್ರಧಾನಿ ಪಂಡೀತ್ ಜವಾಹರಲಾಲ್ ನೆಹರು ಅವರ ಜನ್ಮದಿನ ಪ್ರಯುಕ್ತ ಪಟ್ಟಣದ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.…