ಕಲಬುರಗಿ; ಮೌನವಾಗಿರುವವರೆಲ್ಲ ದಡ್ಡರಲ್ಲ, ತುಂಬಾ ಮಾತನಾಡುವವರೆಲ್ಲ ಬುದ್ಧಿವಂತರಲ್ಲ, ಮಾತಿಗೆ ಒಂದರ್ಥವಿದ್ದರೆ, ಮೌನಕ್ಕೆ ಸಾವಿರ ಅರ್ಥವಿದೆ, ಅದರಂತೆ ಬಬಲಾದ ಗುರುಪಾದಲಿಂಗ ಪೂಜ್ಯರು ಮೌನಿಯಾಗಿ ಭಕ್ತರ ಭವರೋಗ ಕಳೆಯುತ್ತಿದ್ದಾರೆ, ಮೌನ ಶಾಂತಿ ಸಮೃದ್ಧಿಯ ಸಂಕೇತವಾಗಿದೆ ಎಂದು ಜಿಲ್ಲಾ ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಭಾನುಕುಮಾರ ಗಿರೆಗೋಳ ಹೇಳಿದರು.
ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 236ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಾ ಶರಣರ ವಾಣಿಯಂತೆ ಬದುಕಿನ ಕೊನೆಯವರೆಗೂ ನಮ್ಮನ್ನು ಕರೆದುಯುವದು ಆತ್ಮವಿಶ್ವಾಸ ಮತ್ತು ಧೈರ್ಯ ಹೊರತು ಅದೃಷ್ಟವಲ್ಲ. 12ನೇ ಶತಮಾನದಲ್ಲಿ ಶರಣರು ಆಚಾರ, ವಿಚಾರ ಒಂದಾಗಿಸಿಕೊಂಡು ಅಮರವಾಗಿ ಉಳಿದಿದ್ದಾರೆ. ಅಂತಹ ವಿಚಾರಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಸಮಾಜ ನಿರ್ಮಿಸೋಣ ಎಂದು ಮಾರ್ಮಿಕವಾಗಿ ನುಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿಂತಕ ಸಿದ್ಧಾರೂಡ ಬೆಳಮಗಿ ಹತಗುಂದಿ ಆಗಮಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಸಂಗಮೇಶ ನಾಗೂರ, ಶಾಂತಕುಮಾರ ದುಧನಿ, ರೇವಣಸಿದ್ದಯ್ಯ ಶಾಸ್ತ್ರಿ, ಶರಣು ವರನಾಳ, ಶಾಂತು, ಕವಿತಾ ದೇಗಾಂವ, ಗುರುರಾಜ ಹಸರಗುಂಡಗಿ, ಮಹಾಂತೇಶ ಜಂಬಗಾ, ಮಾಣಿಕ ಗುತ್ತೇದಾರ, ಶರಣಬಸಪ್ಪ ಅಂಬಾಡಿ, ಸಿದ್ದಣ್ಣ ವಾಡಿ, ಚನ್ನವೀರ ಮಹಿಳಾ ಭಜನಾ ಸಂಘದವರು ಸೇರಿದಂತೆ ಅನೇಕ ಜನ ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕರಿಗೂ ಹಾಗೂ ಅತಿಥಿಗಳಿಗೂ ಶ್ರೀ ಮಠದ ಪರವಾಗಿ ವಿಶೇಷವಾಗಿ ಗೌರವಿಸಲಾಯಿತು.
ಕಲಬುರಗಿ: ಜಾನಪದ ಕಲಾವಿದರಿಗೆ ಸರ್ಕಾರ ಮೀಸಲಾತಿ ಕಲ್ಪಿಸಲಿ ಕಲಾವಿದರು ಇವತ್ತು ಸಂಕಷ್ಟ ಪರಿಸ್ಥಿತಿಯಲ್ಲಿದಾರೆಂದು ಡಾ.ವಾಸುದೇವ ಸೇಡಂ ಕಳವಳ ವ್ಯಕ್ತಪಡಿಸಿದರು. ನಗರದ…
ಕಲಬುರಗಿ: ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿರುವ ಮೆ. ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತ ಎಥೆನಾಲ್ ಕಾರ್ಖಾನೆಯು ಸ್ಥಗಿತಗೊಂಡಿದ್ದರಿಂದ ರೈತರ ಹಿತದೃಷ್ಠಿಯಿಂದ ಪ್ರಸಕ್ತ…
ಕಲಬುರಗಿ; ನವೆಂಬರ್ 14ರಂದು ನಡೆಯಲಿರುವ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರ 90ನೇ ಜನ್ಮದಿನಾಚರಣೆ, ನವೆಂಬರ್ 22ರಂದು ಶರಣಬಸವೇಶ್ವರ…
ಕಲಬುರಗಿ: ನಾಟ್ಯಸಾರ್ವಭೌಮ ಡಾ.ಶಿವರಾಜಕುಮಾರ ಅವರ ಅಭಿನಯದ ಅದ್ದೂರಿ ಆ್ಯಕ್ಷನ್, ಥ್ರಿಲ್ಲರ್ ಇರುವ `ಭೈರತಿ ರಣಗಲ್’ ಸಿನಿಮಾದಲ್ಲಿ ಲೇಖಕ, ಪತ್ರಕರ್ತ, ರಂಗ…
ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿರುವ ಲಾಹೋಟಿ ಮೋಟಾರ್ಸ್ ಶೋರೂಂನಲ್ಲಿ ಮಾರುತಿ ಅರೇನಾ ಕಂಪನಿಯ ದಿ ಡಾಸ್ಲಿಂಗ್ ನ್ಯೂ ಡಿಸೈರ್ ಕಾರ್…
ಕಲಬುರಗಿ: ನಗರದ ಜೀಮ್ಸ್ ಆಸ್ಪತ್ರೆಯಲ್ಲಿರುವ ಇಂದಿರಾ ಕ್ಯಾಂಟಿನ್‍ನಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿರುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಜೈ ಕನ್ನಡಿಗರ ಸೇನೆಯಿಂದ…