ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿರುವ ಲಾಹೋಟಿ ಮೋಟಾರ್ಸ್ ಶೋರೂಂನಲ್ಲಿ ಮಾರುತಿ ಅರೇನಾ ಕಂಪನಿಯ ದಿ ಡಾಸ್ಲಿಂಗ್ ನ್ಯೂ ಡಿಸೈರ್ ಕಾರ್ ಅನ್ನು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಶಾಸಕರು ಬಳಿಕ ಮಾತನಾಡಿದ ಅವರು, ಲಾಹೋಟಿ ಮೋಟಾರ್ಸ್ ಶೋರೂಂನಲ್ಲಿ ಉತ್ತಮ ಮೈಲೇಜ್ ಹಾಗೂ ಕ್ವಾಲಿಟಿ ಕಾರಗಳು ದೊರೆಯುತ್ತವೆ. ಅದರಂತೆ ಇದೀಗ ನೂತನ ಕಾರ್ ಲಾಂಚ್ ಮಾಡಲಾಗಿದ್ದು, ಶೋರೂಮ್ ಮಾಲಿಕರಾದ ಶ್ರೀಕಾಂತ್ ಲಾಹೋಟಿ ಅವರಿಗೆ ಶುಭವಾಗಲಿ ಎಂದರು.
ನಂತರ ಮಾತನಾಡಿದ ಲಾಹೋಟಿ ಶೋರೂಮ್ ಮಾಲಿಕರಾದ ಶ್ರೀಕಾಂತ್ ಲಾಹೋಟಿ ಅವರು, ಮಾರುತಿ ಅರೇನಾ ಕಂಪನಿಯ ದಿ ಡಾಸ್ಲಿಂಗ್ ನ್ಯೂ ಡಿಸೈರ್ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಇದೊಂದು ಗ್ರಾಹಕ ಸ್ನೇಹಿ ವಾಹನವಾಗಿದೆ ಎಂದು ಅಭಿಪ್ರಾಯಪಟ್ಟರು.
ತದನಂತರ ಮಾತನಾಡಿದ ಶೋರೂಮ್’ನ ಜನರಲ್ ಮ್ಯಾನೇಜರ್ ಶ್ರೀಪಾದ್ ದೇಶಪಾಂಡೆ ಅವರು, ಲಾಹೋಟಿ ಮೋಟಾರ್ಸ್ ಶೋರೂಂನಲ್ಲಿ ಮಾರುತಿ ಅರೇನಾ ಕಂಪನಿಯ ದಿ ಡಾಸ್ಲಿಂಗ್ ನ್ಯೂ ಡಿಸೈರ್ ಕಾರ್ ಲಾಂಚ್ ಮಾಡಲಾಗುದ್ದು ಮೊದಲ ಗ್ರಾಹಕರಾದ ಭರತೇಶ್ ಶಿಲವಂತ ಹಾಗೂ ವಿಜಯಕುಮಾರ್ ಅವರಿಗೆ ಕಾರ್ ಹಸ್ತಾಂತರಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಲಾಹೋಟಿ ಶೋರೂಮ್’ನ ಸರ್ವಿಸ್ ಜನರಲ್ ಮ್ಯಾನೇಜರ್ ವಿಜಯ್ ಶಂಕರ್, ಸೇವಾ ವಿಭಾಗದ ಜನರಲ್ ಮ್ಯಾನೇಜರ್ ವಿಜಯಶಂಕರ ಸಿಂದಗಿ, ಮಾರಾಟ ವಿಭಾಗದ ಮ್ಯಾನೇಜರ್ ರಾಜಕುಮಾರ ದೇಶಪಾಂಡೆ, ತಾಂತ್ರಿಕ ವಿಭಾಗದ ಮ್ಯಾನೇಜರ್ ಮಲ್ಲಿಕಾರ್ಜುನ ಬಿರಾದಾರ, ಕಸ್ಟಮರ್ ಕೇರ್ ಮ್ಯಾನೇಜರ್ ಶ್ರೀನಿವಾಸ ದೇಶಮುಖ ಸೇರಿದಂತೆ ಶೋರೋ’ನ ಅನೇಕ ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…