ಕಲಬುರಗಿ: ಜಾನಪದ ಕಲಾವಿದರಿಗೆ ಸರ್ಕಾರ ಮೀಸಲಾತಿ ಕಲ್ಪಿಸಲಿ ಕಲಾವಿದರು ಇವತ್ತು ಸಂಕಷ್ಟ ಪರಿಸ್ಥಿತಿಯಲ್ಲಿದಾರೆಂದು ಡಾ.ವಾಸುದೇವ ಸೇಡಂ ಕಳವಳ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶ್ರೀದೇವಿ ಸಂಗೀತ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆ ರಿ ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಿಂದ ಜಾನಪದ ಸಂಗೀತ ಸಾಂಸ್ಕೃತಿಕ ನೃತ್ಯೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾನಪದ ತಳಸಮುದಾಯ ಬುಡಕಟ್ಟು ಜನಾಂಗದಲ್ಲಿ ಬಂದಿರುವAತದು, ಜಾನಪದ ಇವತ್ತು ಅಳಿವಿನ ಅಂಚಿನಲ್ಲಿದೆ ಸರ್ಕಾರ ಅಂತಹ ಕಲಾವಿದರಿಗೆ ಪ್ರೋತ್ಸಾಹ ನೋಡಬೇಕಿರುವ ತುಂಬಾ ಅವಶ್ಯಕತೆವಿದೆ ಕಲಾವಿದರಿಗೆ ಮಾಶಾಸನ, ಜಾನಪದ ಭವನಗಳು ನಿರ್ಮಾಣವಾಗಬೇಕು, ಕಲಾವಿದರಿಗೆ ಹಾಗೂ ಅವರ ಮಕ್ಕಳಿಗೆ ಮೀಸಲಾತಿ ಕಲ್ಪಿಸಬೇಕು ಅಂದಾಗ ಮಾತ್ರ ಜಾನಪದ ಉಳಿಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ಮುಖಂಡ ನೀಲಕಂಠರಾವ್ ಮೂಲಗೆ ಮಾತನಾಡಿ ಜಾನಪದಕ್ಕೆ ತನ್ನದೆ ಅದಂತ ಶಕ್ತಿಯಿದೆ ಹಳ್ಳಿಯಲ್ಲಿ ಜನರು ಅನಕ್ಷರಸ್ಥರಾದರು ಕೂಡ ಜಾನಪದ ಸಂಗೀತದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವಂತ ಕಾರ್ಯಗಳು ನಡೆಯುತ್ತವೆ ಜಾನಪದವು ಮೂಗ್ಧಜನರಿನಲ್ಲಿ ಮೂಡಿಬರುವಂತ ಕಲೆಯಾಗಿದೆ ಎಂದು ತಿಳಿಸಿದರು.
ಜಾನಪದ ಸಂಗೀತ ಸಾಂಸ್ಕೃತಿಕ ನೃತ್ಯೊತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರು. ಹಿಂದುಸ್ತಾನಿ ಸಂಗೀತ. ಮಲ್ಲಿಕಾರ್ಜುನ ಭಜಂತ್ರಿ. ಸುಗಮ ಸಂಗೀತ. ಬಸಯ್ಯ ಗುತ್ತೆದಾರ ತೆಲ್ಲೂರ. ಆಕಾಶವಾಣಿ ಕಲಾವಿದರು. ತತ್ವ ಪದ ಗಾಯನ. ದತ್ತರಾಜ ಕಲಶೆಟ್ಟಿ ಬಂದರವಾಡ. ಜಾನಪದ ಗಾಯನ. ಬಾಬುರಾವ ಕೊಬಾಳ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ವಚನಗಾಯನ. ಕು. ಸ್ವಾತಿ ಬಿ ಕೆ. ಭರತ ನಾಟ್ಯ. ಸುಪ್ರಿಯಾ ಮೊಹನ. ಹಾಗೂ ಪ್ರಿಯಾಂಕಾ ಬಿ. ಜಾನಪದ ನೃತ್ಯ. ಕೆ.ವಿಜಯಲಕ್ಷ್ಮಿ. ದಾಸವಾಣಿ. ರೇವಣಸಿದ್ದಪ್ಪ ಸ್ಥಾವರಮಠ ಸಣ್ಣುರ. ಸಂಪ್ರದಾಯಕ ಹಾಡುಗಳು. ಈರಮ್ಮ ಸ್ಥಾವರಮಠ ಸುಂಟನೂರ. ಕತಾಕಿರ್ತನ. ನಾಗಲಿಂಗಯ್ಯ ಸ್ಥಾವರಮಠ ಸುಂಟನೂರ ಆಕಾಶವಾಣಿ ಕಲಾವಿದರು. ವಚನಗಾಯನ. ಮಹಾಲಿಂಗಯ್ಯ ಸ್ಥಾವರಮಠ. ಜಾನಪದ ಗಾಯನ. ಚಂದ್ರಕಾಂತ ಅಜಾದಪೂರ ಅವರು ನಡೆಸಿಕೊಟ್ಟರು.
ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ಸಮಾಜದಲ್ಲಿ ತೋಡಗಿಸಿರುವಂತ ಮಹಾನೀಯರನ್ನು ಗುರುತಿಸಿ ಕಾಯಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ, ಸಮಾಜದಲ್ಲಿ ನಿಸ್ವಾರ್ಥದಿಂದ ದುಡಿಯುತ್ತಿರುವರೀಗೆ ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸುವುದು ಬಹಳ ಮುಖ್ಯವೆಂದು ಬಸವರಾಜ ತೋಟದ ಪ್ರಾಸ್ತಾವಿಕ ನುಡಿಗಳಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಶಿವಲಿಂಗಪ್ಪಾ ದೊಡ್ಡಮನಿ, ಮಹಮ್ಮದ್ ಅಯಾಜ್ಯೊದಿನ ಪಟೇಲ್. ಬಿ.ಎಮ.ರಾವುರ. ಎಂ.ಬಿ.ನಿಂಗಪ್ಪ. ನಾಗೇಂದ್ರ ಸಕ್ಕರಗಿ ಸಂಸ್ಥೆಯ ಅದ್ಯರಾದ ಶರಣಪ್ಪ ಸಿಂಪಿ ಅವರು ಉಪಸ್ಥಿತಿರಿದ್ದರು. ನಿರೂಪಣೆ ವಿಶ್ವನಾಥ ತೋಟ್ನಳ್ಳಿ, ವಂದನಾರ್ಪಣೆ ಮಲ್ಲಿಕಾರ್ಜುನ ದೊಡ್ಡಿ ಕಾರ್ಯಮನ್ನು ನಿರ್ವಹಿಸಿದರು.
ಕಾಯಕ ರತ್ನ ಪ್ರಶಸ್ತಿ: ವಿಜಯಕುಮಾರ ಜಿಡಗಿ (ಪತ್ರಕರ್ತರು), ಗೋಪಿ ಕುಲಕರ್ಣಿ (ಪತ್ರಕರ್ತರು), ಡಾ.ವೈಜನಾಥ ಮಮ್ಮಾಣಿ (ಪಸು ಆರೋಗ್ಯ ಇಲಾಖೆ), ವಾಯ್.ಡಿ.ಬಡಿಗೇರ (ದೇವದಾಸಿ ಪುನರ್ವಸತಿ ಯೋಜನೆ), ಚಂದ್ರಶಾ ದೊಡ್ಡಮನಿ (ಪೋಲಿಸ್ ಇಲಾಖೆ), ಸದಾನಂದ ಹುಗ್ಗೆಕರ್ (ಸಣ್ಣ ನೀರಾವರಿ ಇಲಾಖೆ), ಮಲ್ಲಿಕಾರ್ಜುನ ಮಾಡಬುಳಕರ್ (ಸಮಾಜ ಸೇವಕರು), ವೀರಸಂಗಪ್ಪಾ ಪಾಟೀಲ್ (ಸಮಾಜ ಸೇವಕರು), ಶರಣಬಸಪ್ಪಾ ಮಾಲಿಪಾಟೀಲ್ (ಧಾರ್ಮಿಕ ಹಾಗೂ ಸಮಾಜ ಸೇವಕರು), ರಾಜಶೇಖರ ನಂದೂರ (ವಿದ್ಯುತ ಸರಬರಾಜ ಇಲಾಖೆ) ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…