ಬಿಸಿ ಬಿಸಿ ಸುದ್ದಿ

ಶಿಶುಪಾಲನಾ ಕೇಂದ್ರ. ಸ್ಥಾಪನೆ ಉದ್ಯೋಗಸ್ಥ ಮಹಿಳೆಯರಿಗೆ ಅನಕೂಲ

ಕಲಬುರಗಿ: ಸರಕಾರದಿಂದ ಸ್ಥಾಪನೆ ಆದ ಶಿಶುಪಾಲನಾ ಕೇಂದ್ರಗಳಿಂದ ಬೇರೆ ಕಡೆ ಕೆಲಸಕ್ಕೆ. ಹೋಗುವ ಮಹಿಳೆಯರಿಗೆ ತಮ್ಮ. ಮಕ್ಕಳನ್ನು. ಬಿಟ್ಟು. ಹೋಗಲು ಅನಕೂಲವಾಗಿದೆ ಎಂದು ಮಾನ್ಯ ಜಿಲ್ಲಾ ನ್ಯಾಯಲಯ ಮತ್ತುjMFC 2 ನೇ ನ್ಯಾಯಾಧೀಶರು ಗೌರವಾನ್ವಿತರು ಶ್ರೀಮತಿ ಸ್ಮೀತಾ ನಾಗಲಾಪುರ ಹೇಳಿದರು.

ಗುರುವಾರದಂದು ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕಲ್ಬುರ್ಗಿ ನಗರ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಕಲಬುರ್ಗಿ ಜಿಲ್ಲಾ ಆಡಳಿತ ಕಛೇರಿ ಪಕ್ಕದಲ್ಲಿರುವ ವಾತ್ಸಲ್ಯ ಶಿಶು ಪಾಲನಾ ಕೇಂದ್ರ ಜಿಲ್ಲಾಧಿಕಾರಿಗಳಅಧ್ಯಕ್ಷತೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮಲ್ಲಿ ಮಾತನಾಡಿದರು.

ಉದ್ಯೋಗಸ್ಥ ಮಹಿಳೆಯರ ಮಕ್ಕಳ ಆರೈಕೆಗಾಗಿ ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಿಂದ ಕಲಬುರ್ಗಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಕಛೇರಿ, ಜಿಲ್ಲಾ ಪಂಚಾಯತ್ ಕಛೇರಿ, ಶಹಾಬಾದ್ ಮತ್ತು ಸೇಡಂ ನಾಲ್ಕುಶಿಶು ಪಾಲನಾ ಕೇಂದ್ರಗಳನ್ನು2022 ಜುಲೈ ನಿಂದ ಪ್ರಾರಂಭ ಗೊಂಡು ಇಲ್ಲಿವರೆಗೆ ಎಲ್ಲಾ ಪೋಷಕರ ಮೆಚ್ಚುಗೆಯನ್ನು ಪಡೆದಿರುತ್ತದೆ.

6ತಿಂಗಳಿಂದ6 ವರ್ಷದ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ಮತ್ತು ಸುರಕ್ಷತೆ ,ಪೋಷಣೆ ಹಾಗೂ ಆರೊಗ್ಯ ಮತ್ತು ದೈಹಿಕ ಅರಿವಿನ ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆ ಮತ್ತು 3 ತಿಂಗಳಿಗೊಮ್ಮೆಪೋಷಕರ ಸಭೆ ನಡೆಸುವುದು, ಹಾಗೂ ಕೇಂದ್ರದಲ್ಲಿಯೆ ಸಾಂಪ್ರದಾಯಿಕ ವಾಗಿ ಮಕ್ಕಳಹುಟ್ಟುಹಬ್ಬವನ್ನು ಆರತಿ ಬೆಳಗಿ ರುಚಿಕರ ತಿಂಡಿ ಮಾಡಿ ಆಚರಣೆ ಮಾಡುವುದು. ಒಟ್ಟಿನಲ್ಲಿಶಿಶು ಪಾಲನಾ ಕೇಂದ್ರವು ಮಕ್ಕಳಿಗೆ ತಾಯಿ ಮಡಿಲಿನ ಅಕ್ಕರೆ ತೋರಿಸುವ ಕೇಂದ್ರವಾಗಿದೆ ಎಂದರು.

ಪಾಲನಾ.ಕೇಂದ್ರದಲ್ಲಿ ತಮ್ಮ 2 ವರ್ಷದ ಮಗುವನ್ನು ಬಿಡುತ್ತಿದ್ದು ಹಾಗೂ ಸ್ವತಹ ಅದೇ ಇಲಾಖೆಯ ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಲ್ಬುರ್ಗಿ ನಗರ ಮಗಳನ್ನು ಕೇಂದ್ರಕ್ಕೆ ದಾಖಲು ಮಾಡಿದ್ದಾರೆ ಅವರು ಶಿಶು ಪಾಲನಾ ಕೇಂದ್ರ ಬಗ್ಗೆ ಒಳ್ಳೆಯ ಅಭಿಪ್ರಾಯ ತಿಳಿಸಿದರು.

ಪೋಷಕರು ಹಲವಾರುರೀತಿಯಲ್ಲಿ ಖುಷಿ ಯಿಂದಕಾಣಿಕೆಕೊಟ್ಟಿರುತ್ತಾರೆ. ಪೋಷಕರಾದ ಶ್ರಿಮತಿ ಲತಾ ನಾಯಕ,ಅಲ್ಮಾಸ್ ಬಾನು, ವಿಶಾಲಾಕ್ಷಿ, ಮಹಂತಿನ ಮಠ,ಸ್ವರೂಪ ಸ್ವಾಮಿ ಇವರು ಶಿಶು ಪಾಲನಾ ಕೇಂದ್ರದಿಂದ ನಮಗೆ ಕೆಲಸ ಮಾಡಲು ತುಂಬಾ ಅನುಕೂಲವಾಗಿದೆ ಎಂದು ಖುಷಿಯಿಂದ ಹೇಳಿದ್ದರು.

ಸಮಾಜ ಸೇವಕರು ಮತ್ತು ಮಕ್ಕಳ ಪ್ರೇಮಿ ಮಾಲಾ ದಣ್ಣುರ ಮತ್ತು ಮಾಲಿನಿ ಸ್ವಾಮಿ ಇವರು ಸೇಡಂ ಶಿಶು ಪಾಲನಾ ಕೇಂದ್ರಕ್ಕೆ LED TV ಯನ್ನು ಕಾಣಿಕೆ ಯಾಗಿ ನೀಡಿದರು.

ಉಪನಿರ್ದೇಶಕರು ರಾಜಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಲ್ಬುರ್ಗಿ ನಗರ ಭೀಮರಾಯ ಕಣ್ಣೂರ್ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಅಧ್ಯಕ್ಷರು ಮಲ್ಲಮ್ಮ ಎ ಕಡ್ಲಾ, ಕಾರ್ಯದರ್ಶಿ ವಿಜಯಲಕ್ಷ್ಮಿ ಚಿಟಗುಪ್ಪಾ,ಶ್ರೀಮತಿ ಶ್ರಿದೇವಿ ಕಾಲೆಬಾಗ, ನರಸಮ್ಮ ಆವುಂಟೆ, ರಿಜ್ವಾನ್, ಬಸಮ್ಮ ಸಿದ್ದಲೀಲಾ ಮತ್ತು ಸಿಬ್ಬಂದಿ ಗಳಾದ ಮೀನಾಕ್ಷಿ, ಗೌರಮ್ಮ, ಶಿಲ್ಪಾ ಉಪಸ್ಥಿತರಿದ್ದರು.

 

emedialine

Recent Posts

ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಫಾರೂಕ್ ಮನ್ನೂರ್ ಮಕ್ಕಳೊಂದಿಗೆ ಜನ್ಮದಿನಾಚರಣೆ

ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಇಂದು ಸಂಜು ನಗರದಲ್ಲಿರುವ ಕಲಿಕಾ ಕೇಂದ್ರದಲ್ಲಿ ಮನ್ನೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಫಾರೂಕ್ ಮನ್ನೂರ್…

5 hours ago

ಜಾನಪದದಲ್ಲಿ ಮಾನವೀಯ ಮೌಲ್ಯಗಳು ಒಳಗೊಂಡಿದೆ: ಯಲ್ಲಪ್ಪ ನಾಯ್ಕೋಡಿ

ಕಲಬುರಗಿ: ಜಾನಪದ ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವಿಯ ಮೌಲ್ಯ ಅಡಕವಾಗಿದೆ ಎಂದು ಮಹಾಪೌರರಾದ ಯಲ್ಲಪ್ಪ ನಾಯ್ಕೊಡಿ…

7 hours ago

ಕಲಬುರಗಿ ಸ್ಮಾರ್ಟ್ ಸಿಟೀ ಎನ್ನುವುದು ಸಿಎಂ ತೋರಿಸುವ ಹಗಲ ನಕ್ಷತ್ರ

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕದ ಜನರ ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಾ ಬಂದಿದ್ದಾರೆ, ಅದರ ಮುಂದುವರೆದ ಭಾಗವಾಗಿ…

7 hours ago

ರವಿ ಎನ್ ದೇಗಾಂವ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ

ಕಲಬುರಗಿ: ಕೆ ಪಿ ಆರ್ ಸಕ್ಕರೆ ಕಾರ್ಖಾನೆಯಿಂದ ಹೊರಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಜಮೀನುಗಳಿಗೆ…

7 hours ago

ಕಲಬುರಗಿ; 10 ಕೃತಿಗಳಿಗೆ `ಅಮ್ಮ ಪ್ರಶಸ್ತಿ’

ಕಲಬುರಗಿ; ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ವಿದ್ಯಾರಶ್ಮಿ…

7 hours ago

ವಾಡಿ; ಮಕ್ಕಳ ದಿನಾಚರಣೆ ಸಂಭ್ರಮ

ವಾಡಿ: ಮಾಜಿ ಪ್ರಧಾನಿ ಪಂಡೀತ್ ಜವಾಹರಲಾಲ್ ನೆಹರು ಅವರ ಜನ್ಮದಿನ ಪ್ರಯುಕ್ತ ಪಟ್ಟಣದ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.…

7 hours ago