ಕಲಬುರಗಿ: ಕೆ ಪಿ ಆರ್ ಸಕ್ಕರೆ ಕಾರ್ಖಾನೆಯಿಂದ ಹೊರಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಜಮೀನುಗಳಿಗೆ ಹಾನಿಯಾಗಿರುವುದು ಮತ್ತು ಕಾರ್ಖಾನೆಯ ಹೊಲಸು ನೀರು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಬೋರ್ವೆಲ್ ನೀರಿನಲ್ಲಿ ಬೆರೆತಿರುವ ಕುರಿತು. ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ರವಿ ಎನ್ ದೇಗಾಂವ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅಫ್ಜಲ್‍ಪುರ್ ತಾಲೂಕಿನ ಚಿಣಮಗೇರಾದಲ್ಲಿರುವ ಕೆ.ಪಿ.ಆರ್. ಸಕ್ಕರೆ ಕಾರ್ಖಾನೆಯಿಂದ ಹೊರ ಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರೈತರಿಗೆ ವಿಪರಿತ ತೊಂದರೆಯಾಗುತ್ತಿದೆ. ಕಾರ್ಖಾನೆಯಿಂದ ಹೊರಬಿಡುವ ಕಲುಷಿತ ನೀರು ಸಂಪೂರ್ಣವಾಗಿ ಗ್ರಾಮದಲ್ಲಿ ಬರುತ್ತಿವೆ ಮತ್ತು ಕಾರ್ಖಾನೆಯ ಕಲುಷಿತ ಗಾಳಿಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪರಿಸರ ಹದಗೆಡುತ್ತಿದೆ. ಅಲ್ಲದೆ ಕಾರ್ಖಾನೆಗೆ ಹೊಂದಿಕೊಂಡು ರೈತರ ಫಲವತ್ತಾದ ಜಮೀನುಗಳು ಇದ್ದು ಕಲುಷಿತ ಗಾಳಿಯಿಂದಾಗಿ ಬೆಳೆಗಳು ಹಾಳಾಗುತ್ತಿವೆ.
ಕೆ.ಪಿ.ಆರ್ ಪಕ್ಕದ ಜಮೀನು ಸರ್ವೆ ನಂಬರ್ 3/2, 150/3, 153/2, 154, 151,145 ಇವುಗಳು ಅಲ್ಲದೆ ಸುತ್ತಮುತ್ತಲಿನ ಎಲ್ಲಾ ಜಮೀನುಗಳಲ್ಲಿನ ಬೆಳೆಗಳು ಸುಟ್ಟು ಹೋಗಿರುತ್ತವೆ. ಮತ್ತು ಕಾರ್ಖಾನೆಯ ಹೊಲಸು ನೀರು ಮತ್ತು ಗಾಳಿಯಿಂದಾಗಿ ಜಮೀನುಗಳಲ್ಲಿ ಬೆಳೆಗಳು ಬೆಳೆಯುತ್ತಿಲ್ಲ ಮತ್ತು ಕಾರ್ಖಾನೆಯ ಹೊಲಸು ನೀರು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಬೋರವೆಲ್ ನೀರಿನಲ್ಲಿ ಬೆರೆತುಕೊಂಡಿದ್ದು ಇದರಿಂದಾಗಿ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಕಾರ್ಖಾನೆ ಪ್ರಾರಂಭದ ಸಮಯದಲ್ಲಿ ರೈತರ ಜಮೀನು ಖರೀದಿ ಮಾಡುವಾಗ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ನೀಡುವಂತೆ ಆಶ್ವಾಸನೆ ನೀಡಲಾಗಿತ್ತು ಆದರೆ ಇಲ್ಲಿಯವರೆಗೂ ಸ್ಥಳೀಯರಿಗೆ ಉದ್ಯೋಗ ನೀಡಿರುವುದಿಲ್ಲ ತಮ್ಮ ಕಾರ್ಖಾನೆಯಿಂದಾಗಿ ಸಾರ್ವಜನಿಕರಿಗೆ ದೈಹಿಕ ಮತ್ತು ಮಾನಸಿಕ ತುಂಬಾ ತೊಂದರೆಗಳು ಆಗುತ್ತಿವೆ. ತಾವುಗಳು ಕೂಡಲೇ ಈ ಮೇಲೆ ತೋರಿಸಿರುವ ಎಲ್ಲಾ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಕರ್ನಾಟಕ ನವ ನಿರ್ಮಾಣ ಸೇನೆಯ ವತಿಯಿಂದ ಉಗ್ರವಾದ ಹೋರಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂತೋಷ್ ಪಾಟೀಲ್, ಬಸವರಾಜ್ ಪಾಟೀಲ್ ದುದನಿ, ಶೇಖರ್ ವದ್ರಗಿ ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…