ಬಿಸಿ ಬಿಸಿ ಸುದ್ದಿ

ಕನ್ನಡ ನಾಡು-ನುಡಿ ನೆಲ-ಜಲ ಭಾಷೆ-ಸಂಸ್ಕೃತಿ ಕುರಿತು ಅಭಿಮಾನವಿರಲಿ: ಹೊನ್ಕಲ್

ಕಲಬುರಗಿ: ನಮ್ಮ ನಾಡು, ನುಡಿ, ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿ ಕುರಿತು ಸದಾ ಅಭಿಮಾನ ತುಂಬಿರಬೇಕೇಂದು ಹಿರಿಯ ಸಾಹಿತಿಯೂ ಆದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಿದ್ಧರಾಮ ಹೊನ್ಕಲ್ ಹೇಳಿದ್ದಾರೆ.

ಅವರು ನಗರದ ಕಲಾ ಮಂಡಳದಲ್ಲಿ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 69 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕವಿಗೋಷ್ಠಿ, ಸಂಗೀತ ಸಂಭ್ರಮ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡವನ್ನು ನಮ್ಮ ಉಸಿರಾಗಿಸಿಕೊಂಡು ಬದುಕಬೇಕು. ಕನ್ನಡ ಸಂಭ್ರಮ ಕೇವಲ ಒಂದು ತಿಂಗಳಿಗೆ ಸೀಮಿತಗೊಳಿಸದೆ ವರ್ಷವಿಡೀ ಕನ್ನಡದ ಕಂಪು ಸೂಸಲಿ ಎಂದು ಆಶಿಸಿದರು.

ಈ ಭಾಗದಲ್ಲಿ ಈವರೆಗೂ ಸಾಹಿತ್ಯ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಿರಲಿಲ್ಲ, ಇದೀಗ ಆ ಹಸಿವು ಈ ಬಾರಿ ನೀಗಿದೆ, ಹಾಗಾಗಿ ನಿಮ್ಮ ಕೆಲಸದಲ್ಲಿ ನೀವು ತಲ್ಲೀನರಾಗಿ ಪ್ರಶಸ್ತಿಗಳು ತಾನಾಗಿಯೇ ನಿಮ್ಮನ್ನು ಅರಸುತ್ತಾ ಬರುತ್ತವೆ. ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ್ ಬಡಿಗೇರ ಮಾತನಾಡಿ, 26 ಅಕ್ಷರದ ಆಂಗ್ಲ ಭಾಷೆ ಜಗತ್ತನ್ನು ಆಳುತ್ತದೆ ಎಂದಾದರೆ 49 ಅಕ್ಷರವುಳ್ಳ ನಮ್ಮ ಕನ್ನಡ ಭಾಷೆ ಏಕೆ ಜಗತ್ತನ್ನು ಆಳಬಾರದು? ಎಂಬ ಸವಾಲು ಕನ್ನಡಾಭಿಮಾನಿಗಳ ಮುಂದಿಟ್ಟರು.

ಪ್ರಾಸ್ತಾವಿಕ ಮಾತನಾಡಿದ ಕಲಬುರಗಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್.ನಿರಗುಡಿ, ಕರ್ನಾಟಕ ರಾಜ್ಯೋತ್ಸವ ಎನ್ನುವುದು ಕೇವಲ ಒಂದೇ ತಿಂಗಳಿನ ಕಾರ್ಯಕ್ರಮವಲ್ಲ, ಕನ್ನಡ ಕಟ್ಟುವ ಕೆಲಸ ನಿರಂತರವಾಗಿ ನಡೆಯಬೇಕು. ನಾವೆಲ್ಲರೂ ಕನ್ನಡವನ್ನು ಮಾತೃಭಾಷೆಯಾಗಿ ತೆಗೆದುಕೊಂಡಾಗ ಮಾತ್ರ ಅದನ್ನು ಉಳಿಸಿ ಬೆಳೆಸಲು ಸಾದ್ಯ.ಹೀಗಾಗಿ ನಿತ್ಯವೂ ಕನ್ನಡದ ಧ್ವನಿ ಎಲ್ಲೆಲ್ಲೂ ಮೊಳಗಲಿ ಎಂದು ಹೇಳಿದರು.

ಜೆಡಿಎಸ್ ರಾಜ್ಯ ವಕ್ತಾರ ದೇವೆಗೌಡ ತೆಲ್ಲೂರ, ಶಿವಾನಂದ ಖಜೂರಗಿ, ಬಸವರಾಜ ಬಿರಾದಾರ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀನಿವಾಸ್ ಸರಡಗಿಯ ಪೂಜ್ಯ ಡಾ.ರೇವಣಸಿದ್ದ ಶಿವಾಚಾರ್ಯರು ವಹಿಸಿದ್ದರು.

ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವಿಗಳಾದ ಮಂಗಲಾ ಕಪರೆ, ಡಾ.ಸಂಗಣ್ಣ ಸಿಂಗೆ, ಗಂಗಮ್ಮ ನಾಲವಾರ, ರಾಜೇಂದ್ರ ಝಳಕಿ, ಪರ್ವಿನ್ ಸುಲ್ತಾನಾ, ಅಂಬಾರಾಯ ಮಡ್ಡೆ, ರಾಜು ಉದನೂರ, ರೇಣುಕಾ ಹೆಳವರ, ರಾಹುಲ ಕಟ್ಟಿ, ಶಿವಯ್ಯ ಮಠಪತಿ, ಪರಮಾನಂದ ಎಸ್. ಸರಸಂಬಿ, ಸಾಗರ ವಾಘಮೋರೆ ಅವರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಡಾ.ಸಿದ್ದಮ್ಮ ಗುಡೇದ, ಡಾ.ಪುಟ್ಟಮಣಿ ದೇವಿದಾಸ, ಪ್ರೊ.ಯಶವಂತರಾಯ ಅಷ್ಠಗಿ, ರೇಣುಕಾ ಡಾಂಗೆ, ಸೋಮಪ್ಪ ಬಣಗಾರ, ಚಂದ್ರಕಾಂತ ಕರ್ಜಗಿ, ಸಿದ್ದಯ್ಯಶಾಸ್ತ್ರಿ ನಂದೂರಮಠ, ತೀರ್ಥಕುಮಾರ ಬೆಳಕೋಟಾ, ಗೋಪಾಲ ಕುಲಕರ್ಣಿ, ಚಂದ್ರು ಹೀರೆಮಠ, ಭೀಮಾಶಂಕರ್ ಫಿರೋಜಾಬಾದ, ಸಂತೋಷ ಜಿ. ನಾಡಗಿರಿ, ಪರಮೇಶ್ವರ ದುಗುಂಡ, ಶಿವು ದೊಡ್ಡಮನಿ, ಮಲ್ಲಣ್ಣಗೌಡ ಎಸ್. ಪಾಟೀಲ, ವೈಜನಾಥ ತಡಕಲ್, ಅನೀಲಕುಮಾರ ಸಕ್ತಿ, ರಾಜಶೇಖರ ಗೊಣಗಿ, ಡಾ. ಎಸ್.ಎಸ್. ಭಕ್ತ ಕುಂಬಾರ, ಗಿರೀಶ ತುಂಬಗಿ ಮಲ್ಲಿಕಾರ್ಜುನ ಆಲಮೇಲ್ ಅವರಿಗೆ 2024ನೇ ಸಾಲಿನ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಕಲಬುರಗಿ ಪ್ರತಿಷ್ಠಾನದ ವತಿಯಿಂದ ಪ್ರದಾನ ಮಾಡಲಾಯಿತು.

vikram

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

12 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

21 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

21 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago