ಬಿಸಿ ಬಿಸಿ ಸುದ್ದಿ

ಪತ್ರಿಕೋದ್ಯಮ ಅಭ್ಯರ್ಥಿಗಳು ಅಪ್ರೆಂಟಿಸ್‌ಗೆ ಅರ್ಜಿ ಸಲ್ಲಿಕೆ ನ.30ರ ವರೆಗೆ ವಿಸ್ತರಣೆ

ಕಲಬುರಗಿ: ನ.20 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2024-25ನೇ ಸಾಲಿನ ವಿಶೇಷ ಘಟಕ ಯೋಜನೆ-ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ಜಿಲ್ಲಾ ಕಚೇರಿಗಳಲ್ಲಿ ಕ್ಷೇತ್ರ ಪ್ರಚಾರ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿನ ಕಾರ್ಯನಿರ್ವಹಣೆ ಕುರಿತು ಒಂದು ವರ್ಷ ಅವಧಿಯ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಸಲ್ಲಿಸುವ ಅವಧಿ ನವೆಂಬರ್ 30ರ ರವೆಗೆ ವಿಸ್ತರಿಸಿದೆ ಎಂದು ಕಲಬುರಗಿ ಕಚೇರಿಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಅವರು ತಿಳಿಸಿದ್ದಾರೆ.

ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ಓರ್ವ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಓರ್ವ ಅಭ್ಯರ್ಥಿಯನ್ನು ಮೆರಿಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆಗೆ ಅರ್ಜಿ ಆಹ್ವಾನಿಸಿ ಅರ್ಜಿ ಸಲ್ಲಿಸಲು ನವೆಂಬರ್ 20 ಕೊನೆ ದಿನಾಂಕವೆಂದು ಈ ಹಿಂದೆ ತಿಳಿಸಲಾಗಿತ್ತು.

ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಬಾರದ ಕಾರಣ ಮತು ಅಭ್ಯರ್ಥಿಗಳ ಹಿತದೃಷ್ಠಿಯಿಂದ ಅರ್ಜಿ ಸಲ್ಲಿಕೆ ಅವಧಿ ಇದೀಗ ವಿಸ್ತರಿಸಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

vikram

Recent Posts

ಸಚಿವ ಖರ್ಗೆ ಜನ್ಮದಿನ: ನಾಳೆ ನೇತ್ರ ಚಿಕಿತ್ಸೆ, ಕನ್ನಡಕ ವಿತರಣೆ

ಕಲಬುರಗಿ: ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿ/ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹುಟ್ಟು ಹಬ್ಬದ…

6 hours ago

ಸರಕಾರದಿಂದ ಟಿಪ್ಪು ಸುಲ್ತಾನ ಜಯಂತಿ ಆಚರಣೆಗೆ ಆಗ್ರಹ

ಕಲಬುರಗಿ: ಟಿಪ್ಪುಸುಲ್ತಾನ ಜಯಂತಿಯನ್ನು ರಾಜ್ಯ ಸರಕಾರ ರದ್ದು ಪಡಿಸಿದ್ದನ್ನು ವಿರೋಧಿಸಿ ಟಿಪ್ಪು ಸುಲ್ತಾನ ಅಭಿಮಾನಿಗಳ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು…

18 hours ago

ಕನ್ನಡವನ್ನು ಬಳಸಿದಾಗ ಮಾತ್ರ ಉಳಿಸಲು ಬೆಳೆಸಲು ಸಾಧ್ಯ; ಪ್ರಲ್ಹಾದ್ ಭುರ್ಲಿ

ಕಲಬುರಗಿ: ಕನ್ನಡ ಭಾಷೆಯನ್ನು ದಿನನಿತ್ಯದ ವ್ಯವೆಹಾರಗಳಲ್ಲಿ ಬಳಸುವುದರಿಂದ ಮಾತ್ರ ಉಳಿಸಲು ಸಾಧ್ಯವೆಂದು ಆರ್.ಜೆ. ಕಾಲೇಜಿನ ಪ್ರಾಚಾರ್ಯರು ಪ್ರಲ್ಹಾದ್ ಭುರ್ಲಿ ಅವರು…

18 hours ago

ಪದವಿ ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಕ್ರಮ

ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಬಿ.ಎ. ಬಿ.ಕಾಂ. ಮತ್ತು ಬಿ.ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಗಳಿಗೆ ಪುನಶ್ವೇತನ ಈ ಕಾರ್ಯಕ್ರಮವನ್ನು…

18 hours ago

ಕಲಬುರಗಿ CPI(M) ಜಿಲ್ಲಾ ಸಮ್ಮೇಳನ; ಲೋಗೋ ಬಿಡುಗಡೆ

ಕಲಬುರಗಿ: ಭಾರತ ಕಮ್ಯೂನಿಸ್ಟ್ ಪಕ್ಷ ( ಮಾಕ್ರ್ಸ್ ವಾದಿ)ಯು ನವ್ಹೆಂಬರ್ 24, 25 ರಂದು, ಕಲಬುರಗಿಯಲ್ಲಿ ನಡೆಯಲಿರುವ ತನ್ನ 24…

18 hours ago

ವಿಶ್ವ ಪೈಲ್ಸ್ ದಿನ ಅತ್ಯಂತ ಉತ್ಸಾಹದಿಂದ ಆಚರಣೆ

ಕಲಬುರಗಿ: ಶ್ರೀ ಹಿಂಗುಲಾಂಬಿಕಾ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಗುಲ್ಬರ್ಗ ವಿಶ್ವ ಪೈಲ್ಸ್ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು.…

19 hours ago