ಕಲಬುರಗಿ: ಪುರಾತನ ಕಾಲದಲ್ಲಿ ನಾಗಾವಿ ಪ್ರದೇಶವು ದಕ್ಷಿಣ ಭಾರತದಲ್ಲಿ ನಾಗಾವಿ ಪ್ರಸಿದ್ದಿ ಪಡೆದ ವಿಶ್ವ ವಿದ್ಯಾಲಯವಾಗಿತ್ತು ಎಂದು ತಹಸಿಲ್ದಾರ್ ನಾಗಯ್ಯ ಹಿರೇಮಠ್ ಅವರು ಹೇಳಿದರು.
ಚಿತ್ತಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಾಗಾವಿ ಸಾಂಸ್ಕ್ರತಿಕ ಪ್ರತಿಷ್ಠಾನ ವತಿಯಂದ ಹಮ್ಮಿಕೊಂಡ ಕರ್ನಾಟಕ ರಾಜೋತ್ಸವ ಸಾಂಸ್ಕ್ರತಿಕ ಸಂಭ್ರಮ ಹಾಗೂ ನಾಗಾವಿ ನಾಡಿನ ಸಾಂಸ್ಕ್ರತಿಕ ರತ್ನ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಭಾರತದಲ್ಲಿ ನಳಂದಾ. ತಕ್ಷಶಿಲೆ, ವಿಶ್ವವಿದ್ಯಾಲಯ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ನಾಗಾವಿ ಘಟಿಕಸ್ಥಾನ ಹೆಸರಿನ ಪ್ರಸಿದ್ದಿ ಪಡೆದ ವಿಶ್ವವಿದಾಲಯವಾಗಿತ್ತು ಎಂದರು.
ಈ ವಿಶ್ವವಿದ್ಯಾಲಯದಲ್ಲಿ ವೇದ, ಶಾಸ್ತ್ರ, ತರ್ಕಶಾಸ್ತ್ರ, ಪುರಾಣ, ನ್ಯಾಯಶಾಸ್ತ್ರ ಅಧ್ಯಯನ ನಡೆಯುತ್ತಿತು. ಹಾಗೂ ನಾಗಾವಿಯಲ್ಲಿ ಇರುವ ಪುರಾತನ ಸ್ಮಾರಕಗಳು, ಶಾಸನಗಳು ಅವಶೇಷಗಳು ಶಿಲ್ಪಕಲೆಗಳಿಂದ ನಾಗಾವಿ ನಾಡು ಪುರಾತನ ಕಾಲದಿಂದ ಸಾಂಸ್ಕ್ರತಿಕ ಶ್ರೀಮಂತ ನಾಡಾಗಿತ್ತು ಎಂದು ಅವರು ಹೇಳಿದರು.
ನಾಗಾವಿ ನಾಡಿನ ಸಾಂಸ್ಕ್ರತಿಕ ರತ್ನ ಪ್ರಶಸ್ತಿ. ಪ್ರದಾನ ಮಾಡಿದ ಶಾಹಾಬಾದ್ ಡಿವಾಯ್‍ಎಸ್‍ಪಿ. ಶಂಕರಗೌಡ ಪಾಟೀಲ್ ಅವರು ಮಾತನಾಡಿ, ಕಲೆ ಸಾಹಿತ್ಯ, ಸಾಂಸ್ಕ್ರತಿಕ ಕ್ಷೇತ್ರದಲ್ಲಿ ನಾಗಾವಿ ಸಾಂಸ್ಕ್ರತಿಕ ಪ್ರತಿಷ್ಠಾನ ನಿರಂತರ ಕಾರ್ಯಕ್ರಮಗಳು ಹಮ್ಮಿಕೊಂಡು ಎಲೆ ಮರೆಕಾಯಿಂತೆ ಇರುವ ಪ್ರತಿಭೆಗಳನ್ನು ಗುರುತಿಸುತ್ತಿರುವುದು ಶ್ಲಾಘನೀಯವಾಗಿದೆ.
ಪ್ರಶಸ್ತಿಪುರಸ್ಕøತರು ತಮ್ಮ ಕ್ಷೇತ್ರದಲ್ಲಿ ಇನ್ನು ಉತ್ತಮ ಸಾಧನೆಗೈಯಲಿ. ನಿಮ್ಮ ಸಾಧನೆಯಿಂದ ಇತರರು ಪ್ರೇರಣೆ ಪಡೆಯಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಭೀಮಣ್ಣ ಸಾಲಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ್ ಬಳೊಂಡಿಗಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ್, ತಾಲ್ಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ್ ನಾಲವಾರ್ ಅವರು ಆಗಮಿಸಿದ್ದರು. ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಅಮೃತ್ ಕ್ಷೀರಸಾಗರ್ ಅವರು ವಹಿಸಿದ್ದರು.
ವಿವಿಧ ಕ್ಷೇತ್ರದ ಸಾಧಕರಾದ ಮಹಾದೇವಿ ಭೀಮಾಶಂಕರ್ ಕೊಲ್ಲೂರ್ ( ಜಾನಪದ ಕ್ಷೇತ್ರ), ಶೈಲಶ್ರೀ (ಶಿಕ್ಷಣ ಕ್ಷೇತ್ರ), ವಿಕ್ರಮ್ ತೇಜಸ್ ವಾಡಿ (ಸಾಹಿತ್ಯ ಸಂಘಟಕ), ಮಲ್ಲಿಕಾರ್ಜುನ್ ಮುಡಬೂಳಕರ್ (ಮಾಧ್ಯಮ ಕ್ಷೇತ್ರ), ಬೀಮಶೇನ್ ಭೀಮನಹಳ್ಳಿ (ಕೃಷಿ ಕ್ಷೇತ್ರ) ಅವರಿಗೆ ನಾಗಾವಿ ನಾಡಿನ ಸಾಂಸ್ಕ್ರತಿಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ವಾಡಿ ವಲಯ ಅಧ್ಯಕ್ಷ ಸಿದ್ದಯ್ಯ ಶಾಸ್ತ್ರಿ, ಮಲ್ಲೇಶ್ ನಾಟಿಕಾರ್, ಕ್ಷೇಮಲಿಂಗ ವಾಡಿ, ಮಡಿವಾಳಪ್ಪ ಹೇರೂರು, ದಯಾನಂದ್ ಖರ್ಜರಿ, ವಿರುಪಾಕ್ಷಿ ರುದ್ರ ಬೆಣ್ಣಿ, ಸಂತೋಷ್ ಕಟ್ಟಮನಿ, ವಿಶ್ವರಾದ್ಯ ಕರದಾಳ್, ಶಿಕ್ಷಕರಾದ ಶರಣಪ್ಪ ಐಕೂರ್, ಸಾಬಣ್ಣ, ಸುರೇಶ್, ಅಂಬಣ್ಣ, ಶಿಕ್ಷಕಿಯರಾದ ಶಿವಲೀಲಾ, ಬೇಬಿ ಬಿರಾದಾರ್, ಜಯಶ್ರೀ, ವಿಜಯಲಕ್ಷ್ಮಿ, ರಾಮಲಿಂಗಪ್ಪ ಪ್ಯಾಟಿ ಮುಂತಾದವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಲಿಂಗಣ್ಣ ಮಲ್ಕನ್ ಅವರು ಸ್ವಾಗತಿಸಿದರು. ಕಾರ್ಯದರ್ಶಿ ನರಸಪ್ಪ ಚಿನ್ನಕಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಬಸವರಾಜ್ ಹೊಟ್ಟಿ ಅವರು ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…