ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್ 

0
19

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ ಪರಿವರ್ತನೆಗಾಗಿ ಪ್ರೋಜೆಕ್ಟ್‍ರ ಮೂಲಕ ಸ್ಕ್ರೀನ್ ಮೇಲೆ ಹಳೆಯ ಹಿಂದಿ ಚಲನ ಚಿತ್ರವಾದ ದೋ ಆಂಖೆ ಬಾರಹ್‍ತ ಸಿನಿಮಾವನ್ನು ತೋರಿಸಲಾಯಿತು.

ಈ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಡಾ. ಅನಿತಾ ಆರ್.ರವರು ಚಲನ ಚಿತ್ರಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಬಂದಿಗಳ ಮನಃ ಪರಿವರ್ತನೆಗಾಗಿ ಹಲವು ಕಾರ್ಯಕ್ರಮಗಳಲ್ಲಿ ಚಲನ ಚಿತ್ರವು ವೀಕ್ಷಣೆಯು ಒಂದು ಭಾಗ ಹಾಗಾಗಿ ಉತ್ತಮವಾದ ಮನಃ ಪರಿವರ್ತನೆಗೊಳ್ಳುವಂತಹ ಚಲನ ಚಿತ್ರಗಳನ್ನು ತೋರಿಸುವುದರ ಮುಖಾಂತರ ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬುವುದರ ಜೊತೆಗೆ ತಾವು ಮಾಡಿದ ತಪ್ಪಿಗೆ ಪಶ್ವಾತಾಪ ಪಟ್ಟು ಇಲ್ಲಿಂದ ಬಿಡುಗಡೆಗೊಳ್ಳುವ ಸಮಯದಲ್ಲಿ ಸಮಾಜಕ್ಕೆ ಬೇಕಾಗುವ ಸಮಾಜ ಮುಖಿಯಾಗಿ ಕಾರ್ಯವನ್ನು ಮಾಡುವ ಒಳ್ಳೆಯ ಪ್ರವೃತ್ತಿಗಳಿಂದ ಇಲ್ಲಿಂದ ಕಲೆತುಕೊಂಡು ಹೋಗುವಂತೆ ಹೇಳಿದರು.

Contact Your\'s Advertisement; 9902492681

ಅಲ್ಲದೇ ತಾವು ವೀಕ್ಷಿಸಿದ ಈ ಚಲನ ಚಿತ್ರದಲ್ಲಿರುವ ಒಳ್ಳೆತನವನ್ನು ಇನ್ನೊಬ್ಬರ ಹಂಚಿಕೊಂಡು ಅವರ ಮನಃ ಪರಿವರ್ತನೆಗಾಗಿ ಕೈ ಜೋಡಿಸಬೇಕಾಗಿ ತಿಳಿ ಹೇಳಿದರು.

ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಮನಃ ಪರಿವರ್ತನೆಗೊಳ್ಳುವಂತಹ ಚಿತ್ರಗಳನ್ನು ವೀಕ್ಷಿಸಲು ಅನುಕೂಲ ಮಾಡಿ ಕೊಡಲಾಗುವುದು. ಈ ಕಾರಾಗೃಹದಲ್ಲಿ ಪ್ರಭಾರಿ ಅಧೀಕ್ಷಕರಾದ ಬಿ.ಸುರೇಶ, ಸಹಾಯಕ ಆಡಳಿತಾಧಿಕಾರಿಯಾದ ಭೀಮಾಶಂಕರ ಡಾಂಗೆ, ಜೈಲರ್ ಶ್ರೀಮತಿ ಸುನಂದ ವಿ., ಶಿಕ್ಷಕರಾದ ನಾಗರಾಜ ಮೂಲಗೆ, ಅದಾನಿ ಸಂಸ್ಥೆಯ ಹರಿಶ್ ಗೌಳಿ ಇತ್ಯಾದಿಯವರು ಭಾಗವಹಿಸಿ ಚಲನ ಚಿತ್ರಗಳನ್ನು ವೀಕ್ಷಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here