ಬಿಸಿ ಬಿಸಿ ಸುದ್ದಿ

ಸೇಡಂನಲ್ಲಿ 24ನೇ ವರ್ಷದ ಅಮ್ಮ ಪ್ರಶಸ್ತಿ ಪ್ರದಾನ: “ಅಮ್ಮ ಹೆಸರಿನಲ್ಲಿ ನೀಡುವ ಪ್ರಶಸ್ತಿ ಶ್ರೇಷ್ಠ”

ಸೇಡಂ: ಜಗತ್ತಿನಲ್ಲಿ ಎರಡು ಸುರಕ್ಷಿತ ಸ್ಥಳ ಅಪ್ಪನ ಹೆಗಲು, ಅಮ್ಮನ ಮಡಿಲು ಹಾಗಾಗಿ ತಾಯಿ, ತಂದೆಯರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಜಗತ್ತಿನ ಎಲ್ಲ ಪ್ರಶಸ್ತಿಗೂ ಮಿಗಿಲಾದದ್ದು ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಅಭಿಪ್ರಾಯಪಟ್ಟರು.

ಇಲ್ಲಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನವು ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ 24ನೇ ವರ್ಷದ ಅಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಅವರು ಮಾತನಾಡಿದರು.

ದೇಶದ ಉದ್ಧಗಲಕ್ಕು ನೀಡುವ ಪ್ರಶಸ್ತಿಗಳ ಆಯ್ಕೆಗಳೆ ಪ್ರಶ್ನೆ ಮಾಡುವ ಇಂದಿನ ದಿನಗಳಲ್ಲಿ, ಅಳೆದು ತೂಗಿ ನೀಡುತ್ತಿರುವ ಅಮ್ಮ ಪ್ರಶಸ್ತಿ ಶ್ರೇಷ್ಠತೆಯನ್ನು ಒಳಗೊಂಡಿದೆ. ಇಂತಹ ಮಾನದಂಡಗಳು ಅನುಸರಿಸುವದರಿಂದ ನಿಜವಾದ ಸಾಧಕರಿಗೆ ಗೌರವ ಸಿಗಲು ಸಾಧ್ಯವಾಗಲಿದೆ. ಮುಂಬರುವ ದಿನಗಳಲ್ಲಿ ನಿಷ್ಠುರವಾದ ಸಾಹಿತ್ಯ ಮತ್ತು ಸಾಹಿತಿಗಳಿಗೆ ನಾಡಿನ ವಿವಿಧ ಸಂಘ ಸಂಸ್ಥೆಗಳು ಕೊಡಮಾಡುವ ಇಂತಹ ಪ್ರಶಸ್ತಿಗಳು ಲಭಿಸಬೇಕಾಗಿದೆ. ಈಡೀ ರಾಜ್ಯದ ವಿವಿಧ ಭಾಗಗಳಿಂದ ಸಾಹಿತಿಗಳನ್ನು ಗುರುತಿಸಿ ತಾಯಿ ಮಮತೆಯ ಗೌರವ ನೀಡುತ್ತಿರುವದು ತಾಯಿ ನೀಡಿದ ಪ್ರೀತಿಯಂತೆ ಕಾಣುತ್ತದೆ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ರಾಜ್ಯ ತೋಟಗಾರಿಕೆ ಮಹಾಮಂಡಳಿ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್ ಊಡಗಿ, ಮುನ್ನೂರ ಅವರು ನಾಡಿನ ನಾನಾ ಭಾಗದ ಸಾಹಿತಿಗಳನ್ನು ಸೇಡಂನ ನೆಲಕ್ಕೆ ಕರೆಸಿ, ಅವರಿಗೆ ಅಮ್ಮನ ಪ್ರಶಸ್ತಿ ಕೊಡುವು ಮೂಲಕ ಮಾತೃತ್ವದ ಮಮತೆಯನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಇದು ಕೇವಲ ಪ್ರತಿμÁ್ಠನಕ್ಕೆ ಮಾತ್ರವಲ್ಲ ನಮ್ಮ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಮಹಿಪಾಲರೆಡ್ಡಿಯವರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಸಾನಿಧ್ಯವಹಿಸಿದ್ದ ನಾಲವಾರ ಶ್ರೀ ಕೋರಿಸಿದ್ದೇಶ್ವರ ಮಠದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು. ಮುಖ್ಯಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಬಸವರಾಜ ಸಾದರ ಮಾತನಾಡಿದರು. ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮುನ್ನೂರು ಇದ್ದರು.

ಮೇಘಾ ಪ್ರಾರ್ಥಿಸಿದರು. ಪ್ರಭಾಕರ ಜೋಶಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಹಿಪಾಲರೆಡ್ಡಿ ಮುನ್ನೂರ್ ನಿರೂಪಣೆ ಮಾಡಿದರು. ಮಹಾಂತೇಶ ನವಲಕಲ್ ಪ್ರಶಸ್ತಿ ಆಯ್ಕೆಯ ಬಗೆ ವಿವರಿಸಿದರು.

ಇದೇ ಸಂದರ್ಭದಲ್ಲಿ ನಾಗಪ್ಪ ಮಾಸ್ತರ್ ಮುನ್ನೂರ ಅವರ ಸ್ಮರಣಾರ್ಥ ಇಬ್ಬರು ಬಡ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.

ಕೋವಿಡ್ ಸಮಯದಲ್ಲಿ ಪರ್ತಕರ್ತರಾದ ನಮ್ಮನ್ನು ಮನೆಯಲ್ಲಿಯೇ ಇರೀ ಅಂತ ಯಾರೂ ಹೇಳಲಿಲ್ಲ, ಸರ್ಕಾರ, ವೈದ್ಯರು ನೀಡುವ ಸಲಹೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಕೆಲಸ ಪತ್ರಕರ್ತರು ಮಾಡಿದ್ದಾರೆ. ಅನೇಕ ಪತ್ರಕರ್ತರು ಆ ಸಂದರ್ಭದಲ್ಲಿ ಜೀವ ಕಳೆದುಕೊಂಡರು. ಆ ದಿನಗಳಲ್ಲಿ ನಾವು ಕಂಡ ಕೋವಿಡ್ ಕಥೆಗಳು ಎಂಬ ಕೃತಿ ಹೊರತರುವ ಕೆಲಸ ಮಾಡಿದ್ದೇನೆ. ಆ ಕೃತಿಗೆ ಅಮ್ಮ ಪ್ರಶಸ್ತಿ ಲಭಿಸಿದ್ದು ಸಾರ್ಥಕ ಭಾವ ಮೂಡಿಸಿದೆ. -ಶಿವಾನಂದ ತಗಡೂರು, ರಾಜ್ಯಾಧ್ಯಕ್ಷರು ಪತ್ರಕರ್ತರ ಸಂಘ.

ಪ್ರಶಸ್ತಿ ಪಡೆದವರಿವರು: ವಿದ್ಯಾರಶ್ಮಿ ಪೆಲತ್ತಡ್ಕ, ಪ್ರಭಾವತಿ ದೇಸಾಯಿ, ವೀರೇಂದ್ರ ರಾವಿಹಾಳ್, ಪೂರ್ಣಿಮಾ ಮಾಳಗಿಮನಿ, ದ್ವಾರನಕುಂಟೆ ,ಪಾತಣ್ಣ, ಗುರುಪ್ರಸಾದ ಕಂಟಲಗೆರೆ, ಡಾ.ಪರ್ವಿನ ಸುಲ್ತಾನಾ, ಡಾ.ಪ್ರಕಾಶ ಭಟ್, ಡಾ.ಎಚ್.ಎಸ್.ಸತ್ಯನಾರಾಯಣ, ಮಂಜುನಾಥ ಚಾಂದ್.ಅಮ್ಮ ಮಾಧ್ಯಮ ಕೃತಿಗೆ ವಿಶೇಷ ಪುರಸ್ಕಾರಶಿವಾನಂದ ತಗಡೂರು (ಕೋವಿಡ್ ಕಥೆಗಳು)

emedialine

Recent Posts

ಎಂ.ಎಸ್ ಇರಾಣಿ ವಿದ್ಯಾರ್ಥಿಗೆ ದ್ವೀತಿಯ ಸ್ಥಾನ

ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…

34 mins ago

ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮ

ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…

42 mins ago

ಸ್ಲಂ ಜನಾಂದೋಲನ ಜಿಲ್ಲಾ ಘಟಕದಿಂದ ಹಕ್ಕು ಪತ್ರ ನೊಂದಣಿ ಖಾತ ಪ್ರತಿ ವಿತರಣೆ

ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ  ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ  ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…

43 mins ago

ಸಂವಿಧಾನ ದಿನಾಚರಣೆ

ಕಲಬುರಗಿ : ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಎನ್.ಎಸ್.ಎಸ್, ರೆಡ್‍ಕ್ರಾಸ್, ಸ್ಕೌಟ್ಸ್ ಆಂಡ್ ಗೈಡ್ಸ್, ಐ.ಕ್ಯೂ.ಎ.ಸಿ ಮತ್ತು ಸಾಂಸ್ಕøತಿಕ ಘಟಕಗಳ…

45 mins ago

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಪೆÇೀಲೀಸ್ ಇಲಾಖೆಗೆ ಅಭಿನಂದನೆ

ಕಲಬುರಗಿ; ಶಿಶು ಮಗುವಿಗೆ ಅಪಹರಣಕಾರರನ್ನು ಬಂಧಿಸಿದ ಕಲಬುರಗಿ ಪೆÇೀಲೀಸ್ ಇಲಾಖೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಅಭಿನಂದನೆ ವ್ಯಕ್ತಪಡಿಸಿದೆ.…

49 mins ago

ಲೋಕೋಪಯೋಗಿ ಕಚೇರಿ ಮುಂದೆ ನಮ್ಮ ಕರ್ನಾಟಕ ಸೇನೆಯಿಂದ ಧರಣಿ ಸತ್ಯಾಗ್ರಹ

ಕಲಬುರಗಿ; ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ, ಯಡ್ರಾಮಿ, ಅಫಜಲಪೂರ, ಸೇಡಂ, ಆಳಂದ, ಚಿಂಚೋಳಿ  ತಾಲೂಕಿನಲ್ಲಿ ಜಂಗಲ್ ಕಟಿಂಗ್ ಹಾಗೂ ಮೆಂಟನೆನ್ಸ್…

55 mins ago