ಸುರಪುರ: ತಾಲ್ಲುಕಿನಲ್ಲಿಯ ರೈತರಿಗೆ ನೀರು ಒದಗಿಸುವಲ್ಲಿ ಮಾನ್ಯ ಶಾಸಕರಾದ ರಾಜುಗೌಡರ ಶ್ರಮ ದೊಡ್ಡದಿದೆ. ಹಿಂದೆ ಮಾನ್ಯ ಶಾಸಕರು ಮಾತು ಕೊಟ್ಟಂತೆ ಇಂದು ತಾಲ್ಲುಕಿನ ಕೆ.ತಳ್ಳಳ್ಳಿ,ಬಂಡೇರದೊಡ್ಡಿ,ಹಾಳ ಅಮ್ಮಾಪುರ, ಚಿಕ್ಕನಹಳ್ಳಿ,ಬಾಚಿಮಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಕೆ.ತಳ್ಳಳ್ಳಿಯ ಹಿರೆಹಳ್ಳದಿಂದ ಲಿಫ್ಟ್ ಇರಿಗೇಶನ್ ಮೂಲಕ ನೀರು ಒದಗಿಸಲು ಕಾಮಗಾರಿಗೆ ಅನುಮೋದನೆಗೊಳಿಸಿಕೊಂಡು ರೈತರಿಗೆ ನೆರವಾಗಿದ್ದಾರೆ. ಶಾಸಕರಿಗೆ ನಮ್ಮ ಭಾಗದ ರೈತರು ಆಭಾರಿಗಳಾಗಿದ್ದೆವೆ ಎಂದು ಬಿಜೆಪಿ ರೈತ ಮೋರ್ಚಾದ ಮಾಜಿ ಅಧ್ಯಕ್ಷ ಭಿಮಣ್ಣ ಚಿಕ್ಕನಹಳ್ಳಿ ಮಾತನಾಡಿದರು.
ಕೆ.ತಳ್ಳಳ್ಳಿ ಬಳಿಯ ಹಿರೆಹಳ್ಳದಲ್ಲಿ ಲಿಫ್ಟ್ ಇರಿಗೇಶನ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ,ಆದಷ್ಟು ಬೇಗ ಇಲಾಖೆಯವರು ಕಾಮಗಾರಿ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತರಾದ ಚನ್ನಬಸವ ಕಮತಗಿ,ನಬೀಸಾಬ ಬಡಿಗೇರ,ಸಾಬಣ್ಣ ದೊರೆ,ಗುರ್ಗಪ್ಪ ದೇವಿಕೇರಾ,ಕಾಂತುಗೌಡ ಚೆನ್ನೂರ,ಅಶೋಕ ಮಾಲಗತ್ತಿ,ಗೋಪುರೆಡ್ಡಿ ಕಾಕರಗಲ್,ಆನಂದ ಅಲಗೂರು,ತಿರುಪತಿ ಹಾಗು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…