ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ಅಂಧರ ಬಾಳಿಗೆ ಬೆಳಕು ನೀಡುವ ಕಾರ್ಯ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕಳೆದ ಮೂರು ದಿನಗಳಲ್ಲಿ ಕಾರ್ನಿಯಲ್ ( ಕಣ್ಣಿನ ಮೇಲ್ಪದರದಲ್ಲಿರುವ ಪಾರದರ್ಶಕ ಪದರು) ಕಸಿ ವೆಚ್ಚ ದಾಯಕ ಶಸ್ತ್ರ ಚಿಕಿತ್ಸೆಯನ್ನು ಡಾ ವೀರೇಶ್ ವಿಲಾಸಬಾಬು ಕೋರವಾರವರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿ ಅಂದರ ಬಾಳಿಗೆ ಬೆಳಕಾಗಿದ್ದಾರೆ. ಈ ಶಸ್ತ್ರ ಚಿಕಿತ್ಸಗಳನ್ನು ಸಂಸ್ಥೆಯು ಸಂಪೂರ್ಣವಾಗಿ ಉಚಿತವಾಗಿ ನೀಡಿದೆ.
ಸಾಮಾನ್ಯವಾಗಿ ಈ ಶಸ್ತ್ರ ಚಿಕಿತ್ಸೆಗೆ ರೋಗಿಗಳು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೆ ಇಂತಹ ಕ್ಲೀಷ್ಟಕರ ಸೂಕ್ಷ್ಮ ಶಸ್ತ್ರ ಚಿಕಿತ್ಸೆಯನ್ನು ನಮ್ಮ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯ ವೈದ್ಯರು ಸಮರ್ಥವಾಗಿ ನೇರವೇರಿಸುತ್ತಿರುವದಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
2009 ರಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಪ್ರಸ್ತುತ ಅಧ್ಯಕ್ಷರಾದ ಶಶೀಲ್ ಜಿ ನಮೋಶಿಯವರ ವಿಶೇಷ ಪ್ರಯತ್ನದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಇಂತಹ ಕ್ಲೀಷ್ಟವಾದ,ಅತಿ ಸೂಕ್ಷ್ಮವಾದ ಚಿಕಿತ್ಸೆ ಬಡ ಜನರಿಗೆ ಒದಗಿಸಲೆಬೇಕೆಂಬ ಹಂಬಲದಿಂದ ಹಾಗೂ ವಿಭಾಗದ ಅಂದಿನ ಮುಖ್ಯಸ್ಥರಾದ ಡಾ ಎಂ ಆರ್ ಪೂಜಾರಿ ಅವರ ನೇತೃತ್ವದಲ್ಲಿ ಬಸವೇಶ್ವರ ಆಸ್ಪತ್ರೆಯಲ್ಲಿ EBAI (Eye Bank Association India) ಸ್ಥಾಪನೆಯಾಯಿತು. ಇದು ಕರ್ನಾಟಕದಲ್ಲಿ ಪ್ರಪ್ರಥಮ EBAI ಆಗಿರುವುದು ವಿಶೇಷವಾಗಿದೆ. ಇದನ್ನು ಮಾನದಂಡವಾಗಿಟ್ಟುಕೊಂಡು ಮಣಿಪಾಲ, ಬಿ ಎಲ್ ಡಿ ಇ ಬ್ಯಾಂಕ್ ಸ್ಥಾಪನೆ ಮಾಡಿಕೊಂಡವು ಇದು ನಮ್ಮ ಸಂಸ್ಥೆಯ ಹಿರಿಮೆಗೆ ಗರಿಯಾಗಿದೆ. ಅಂದಿನಿಂದಲೆ ವೆಟ್ ಲ್ಯಾಬ್ ಸ್ಥಾಪನೆಯಾಗಿ ಸ್ನಾತಕೋತ್ತರ ಪದವಿಧರರ ಗುಣಮಟ್ಟ ಹೆಚ್ಚಿಸಲು ಅನೂಕೂಲವಾಗಿದೆ ಇಂತಹ ವಾತಾವರಣ ನಿರ್ಮಿಸಿದ ಅಧ್ಯಕ್ಷರ ಕಾರ್ಯ ಮೆಚ್ಚುವಂತದ್ದು
ಈ ಬ್ಯಾಂಕ್ ಸ್ಥಾಪನೆ ಆದ ನಂತರದಲ್ಲಿ ನಮ್ಮ ಭಾಗದ ಅನೇಕ ದಾನಿಗಳು ಅಂಧರ ಬಾಳಿಗೆ ಬೆಳಕಾಗಲು ನೇತ್ರದಾನ ಮಾಡಲು ಪ್ರಾರಂಭಿಸಿದರು.ಇಂತಹ ಉದಾತ್ತ ದಾನಿಗಳು ಅವರ ಕುಟುಂಬದ ಸಹಾಯದಿಂದ ಇಂದು ಆಸ್ಪತ್ರೆಯು ನೇತ್ರ ಜ್ಯೋತಿಯಾಗಿ ಅಂದರ ಬಾಳು ಬೆಳಗುತ್ತಿದೆ. ಹೀಗಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆಗಳಿಗೆ ಮಹಾನಗರಗಳನ್ನು ಆಶ್ರಯಿಸಿದ್ದ ರೋಗಿಗಳಿಗೆ ಇಂದು ಆಸ್ಪತ್ರೆಯು ವರದಾನವಾಗಿದೆ.
ಈಗ 3 ಜನರ ಅಂದರಿಗೆ ಸೂಕ್ಷ್ಮ ಶಸ್ತ್ರ ಚಿಕಿತ್ಸೆ ನೀಡಿ ಬಾಳಿಗೆ ಬೆಳಕಾದ ಡಾ ವೀರೇಶ್ ಕೊರವಾರ ಹಾಗೂ ಆಸ್ಪತ್ರೆಯ ನುರಿತ ವೈದ್ಯರು, ಡೀನ್,ವೈಸ್ ಡೀನ್ ವೈದ್ಯಾಧಿಕಾರಿಗಳ ಕಾರ್ಯಕ್ಷಮತೆಯನ್ನು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ, ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಹಾಗೂ ಆಡಳಿತ ಮಂಡಳಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಕಲಬುರಗಿ: ಕಮಲಾಪೂರ ತಾಲ್ಲೂಕಿನ ಬಬಲಾದ ಐಕೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರ ಚುನಾವಣೆಯಲ್ಲಿ ಪಾರ್ವತಿ ಗಂಡ ಜಗನ್ನಾಥ ಹೊಳಕ್ಕರ್ ಇವರು ಅವಿರುದ್ಧವಾಗಿ…
ಸುರಪುರ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು…
ಕಲಬುರಗಿ: ನಗರದ ಹ್ಯಾಪಿ ಫಂಕ್ಷನ್ ಹಾಲ್‌ನಲ್ಲಿ ರಂಗಾAತರAಗ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ "ಕನ್ನಡಂ ಗೆಲ್ಗೆ…
ಕಲಬುರಗಿ: ನಗರದ ಸಿದ್ದಾರ್ಥ ವೃತ್ತ (ಗೋವಾ ಹೊಟೇಲ್) ಟ್ಯಾಂಕ್ ಬಂಡ್ ಮುಖ್ಯ ರಸ್ತೆಯ ಆವರಣ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಹಾಮಂಟಪದಲ್ಲಿ…
ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕಲಬುರಗಿ ವತಿಯಿಂದ ಕಲಬುರಗಿ ಜಿಲ್ಲಾಧಿಕಾರಿ ಡಾ.ಫೌಜಿಯಾ ತರನ್ನುಮ್, ಜಿಲ್ಲಾ…
ಕಲಬುರಗಿ: ಸಂಸತ್ತ ಅಧಿವೇಶನದಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಮಾತನಾಡಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ ಆರ್…