ಬಿಸಿ ಬಿಸಿ ಸುದ್ದಿ

ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಆರ್ ಬಿ ಐ ಹೊಸ ಘೋಷಣೆ : ತೇಲ್ಕೂರ ಅಭಿನಂದನೆ

ಕಲಬುರಗಿ: ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಹೊಸ ಘೋಷಣೆಯನ್ನು ಮಾಡಿದೆ. ಕೃಷಿ ಸಾಲದ ಮೇಲಿನ ಮಿತಿಯನ್ನು ಏರಿಕೆ ಮಾಡಲಾಗಿದ್ದು, 2025ರ ಜನವರಿ 1 ರಿಂದ ರೈತರು ಈ ಹೊಸ ಘೋಷಣೆಯ ಸಹಾಯವನ್ನು ಪಡೆಯಬಹುದು.

ಆರ್ ಬಿ ಐ ನ ಈ ಘೋಷಣೆಯಿಂದ ದೇಶದ ಸುಮಾರು ಶೇ 86ರಷ್ಟು ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಆರ್ ಬಿ ಐ ನ. ಈ ಘೊಷಣೆಗೆ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆರ್ ಬಿ ಐ ಗೆ ಅಭಿನಂದನೆ ಸಲ್ಲಿಸಿದರು.

ಈ ಕುರಿತು ಪಾತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಆರ್ ಬಿ ಐ ನಹೊಸ ಗವರ್ನರ್ ಆಗಿ ಅಧಿಕಾರವಹಿಸಿಕೊಂಡ ಸಂಜಯ್ ಮಲ್ಲೊತ್ರಾ ಅವರು ಮಾಡಿದ ಮೊದಲ ಘೋಷಣೆ ಇದಾಗಿದೆ. ರೈತರಿಗೆ ಸುಲಭವಾಗಿ ಹೆಚ್ಚು ಮೊತ್ತದ ಕೃಷಿ ಸಾಲ ಲಭ್ಯವಾಗುವಂತೆ ಮಾಡುವ ಮೂಲಕ ಕೃಷಿ ಕ್ಷೇತ್ರದ ಉತ್ತೇಜನಕ್ಕೆ ಒತ್ತು ನೀಡಲಾಗುತ್ತದೆ , ಭಾರತೀಯ ರಿಸರ್ವ್ ಬ್ಯಾಂಕ್ ಅಡವು ರಹಿತ ಕೃಷಿ ಸಾಲದ ಮಿತಿಯನ್ನು 1.6 ಲಕ್ಷ ರೂ.ಗಳಿಂದ 2 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿದೆ. ಈ ಹೊಸ ಘೋಷಣೆ 2025ರ ಜನವರಿ 1 ರಿಂದ ಜಾರಿಗೆ ಬರಲಿದೆ ,
ಈ ಘೋಷಣೆಯಿಂದಾಗಿ ರೈತರಿಗೆ ಅನುಕೂಲವಾಗಲಿದ್ದು, ಕಡಿಮೆ ಮೊತ್ತದ ಸಾಲಕ್ಕೆ ಮನೆ, ಜಮೀನು ಅಡವಿಡುವ ಪ್ರಶ್ನೆಯೇ ಬರುವುದಿಲ್ಲ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಘೋಷಣೆಯಿಂದ ಸಹಾಯಕವಾಗಲಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗಿದೆ.

ದೇಶದ ರೈತರಿಗೆ ಅನುಕೂಲ ಮಾಡಿಕೊಡಲು ಕಾಲ ಕಾಲಕ್ಕೆ ಕೃಷಿ ಸಾಲದ ಮೇಲಿನ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಲಾಗುತ್ತದೆ. ಅಡವು ರಹಿತ ಕೃಷಿ ಸಾಲದ ಮಿತಿ ಏರಿಕೆಯಿಂದಾಗಿ ದೇಶದ ಶೇ 86ರಷ್ಟು ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದು ಆರ್ ಬಿಐ ಹೇಳಿದ್ದು.
ಈಗಾಗಲೇ ಬ್ಯಾಂಕುಗಳಿಗೆ ಆರ್ ಬಿ ಐ ಕೃಷಿ ಸಾಲದ ವಿಚಾರದಲ್ಲಿ ಮಾರ್ಗಸೂಚಿ ಪರಿಷ್ಕರಣೆ ಮಾಡಿರುವ ಕುರಿತು ವ್ಯಾಪಕ ಪ್ರಚಾರ ನೀಡಬೇಕು. ದೇಶದ ಪ್ರತಿ ರೈತರಿಗೆ ಈ ಮಾಹಿತಿ ತಲುಪಬೇಕು. ಹೊಸ ಘೋಷಣೆಯ ಉಪಯೋಗವನ್ನು ಎಲ್ಲರೂ ಪಡೆಯುವಂತಾಗಬೇಕು ಎಂದು ಸೂಚನೆ ನೀಡಿದ್ದು,
ಮುಂದಿನ ದಿನಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲಿನ ಸಾಲದ ಮಿತಿಯನ್ನು ಸಹ ಏರಿಕೆ ಮಾಡುವ ಕುರಿತು ಆರ ಬಿ ಐ ಸುಳಿವು ನೀಡಿದ್ದು. ಈ ಮೂಲಕ ಕೃಷಿ ವಲಯದ ಮೇಲಿನ ಹೂಡಿಕೆಯನ್ನು ಸಹ ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಅಲ್ಲದೇ ಮಾರ್ಪಡಿಸಿದ ಬಡ್ಡಿ ಸಹಾಯಧನ ಯೋಜನೆಯಡಿ ರೈತರಿಗೆ 3 ಲಕ್ಷದ ತನಕ ಶೇ 4ರ ಬಡ್ಡಿದರದಲ್ಲಿ ಸಾಲ ಸಿಗಲಿದೆ. ಕೃಷಿಗೆ ಉತ್ತೇಜನ ನೀಡಿದರೆ ಗ್ರಾಮೀಣ ಪ್ರದೇಶದಲ್ಲಿ ಜನರ ಜೀವನ ಮಟ್ಟ ಉತ್ತಮವಾಗಲಿದೆ, ಇದಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರ್ ಬಿ ಐ ಹೇಳಿದ್ದು,
2022ರಲ್ಲಿ ಕೇಂದ್ರ ಸರ್ಕಾರ ರೈತರಿಗೆ ಅಗ್ಗದ ದರದಲ್ಲಿ ತೊಂದರೆಯಿಲ್ಲದ ಸಾಲದ ಲಭ್ಯತೆ ಖಚಿತಪಡಿಸಿಕೊಳ್ಳಲು ಆದ್ಯತೆಯನ್ನು ನೀಡಿತು. ಇದರ ಭಾಗವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆ ಪರಿಚಯಿಸಿತು. ಸಾಲದ ಮೇಲೆ ಕೃಷಿ ಉತ್ಪನ್ನಗಳನ್ನು ಖರೀದಿಸಲು ರೈತರನ್ನು ಸಶಕ್ತರನ್ನಾಗಿ ಮಾಡಲಾಯಿತು.
ರೈತರು ಬ್ಯಾಂಕುಗಳಿಗೆ ಕನಿಷ್ಠ ಬಡ್ಡಿದರ ಪಾವತಿಯನ್ನು ಖಚಿತಪಡಿಸಲು ಸರ್ಕಾರವು ಬಡ್ಡಿ ಸಹಾಯಧನ ಯೋಜನೆ (ಐಎಸ್ಎಸ್) ಪರಿಚಯಿಸಿತು. ಬಳಿಕ ಅದನ್ನು ಮಾರ್ಪಡಿಸಿದ್ದು, ಬಡ್ಡಿ ಸಬ್ಸಿಡಿ ಯೋಜನೆ (ಎಂಐಎಸ್) ಎಂದು ಮರುನಾಮಕರಣ ಮಾಡಿತು. ಈ ಮೂಲಕ ರೈತರಿಗೆ ಸಬ್ಸಿಡಿ ಸಹಿತ ಬಡ್ಡಿ ದರಗಳಲ್ಲಿ ಅಲ್ಪಾವಧಿ ಸಾಲವನ್ನು ನೀಡಲಾಗುತ್ತಿದೆ ಎಂದು ತೇಲ್ಕೂರ ಹೇಳಿದರು.

emedialine

Recent Posts

ಸಂಸತ್ತಿನಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಹೇಳಿಕೆಗೆ ದಿನೇಶ ದೊಡ್ಡಮನಿ ಖಂಡನೆ

ಕಲಬುರಗಿ: ಸಂಸತ್ತ ಅಧಿವೇಶನದಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಮಾತನಾಡಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ ಆರ್…

38 minutes ago

ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪಿಂಚಣಿ ಹೋರಾಟಕ್ಕೆ ಹೈ ಕ ಶಿಕ್ಷಣ ಸಂಸ್ಥೆಯ ನೌಕರರ ಬೆಂಬಲ

ಬೆಳಗಾವಿ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ (ರಿ ) *ಪ್ರಾಣ ಬಿಟ್ಟೇವು ಪಿಂಚಣಿ…

15 hours ago

ಕಸಾಪಕ್ಕೆ ಶಹಾಪೂರಕರ್ ನೇಮಕ

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ವಲಯದ ಅಧ್ಯಕ್ಷರನ್ನಾಗಿ ತಾಜ್ ಸುಲ್ತಾನಪೂರ ಗ್ರಾಪಂ ಸದಸ್ಯರೂ ಆದ ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯ…

17 hours ago

ವಚನ ಸಾಹಿತ್ಯ ಪರಿಷತ್‌ಗೆ ಚಿಂತನಪಳ್ಳಿ ನೇಮಕ

ಕಲಬುರಗಿ: ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಕಲಬುರಗಿ ಸಮಿತಿಯ ಕಲಬುರಗಿ ತಾಲೂಕಾ ಅಧ್ಯಕ್ಷರನ್ನಾಗಿ ಮದಸೂಧನ್ ಭೀಮಣ್ಣ ಚಿಂತನಪಳ್ಳಿ…

17 hours ago

ಗಾಮಾ ವರ್ಲ್ಡ್ ಚಾಂಪಿಯನ್‌ಶಿಪ್: ಭಾರತಕ್ಕೆ ೩ ಚಿನ್ನ, ೩ ಬೆಳ್ಳಿ ಮತ್ತು ೧ ಕಂಚು

ಕಲಬುರಗಿ: ಭಾರತ ತಂಡ ೨೦೨೪ ರ ಡಿಸೆಂಬರ್ ೬ ರಿಂದ ೧೩ ರವರೆಗೆ ಜಕಾರ್ತಾ ಇಂಡೋನೇಷ್ಯಾದಲ್ಲಿ ನಡೆದ ಗಾಮಾ ವರ್ಲ್ಡ್…

18 hours ago

ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಆಯ್ಕೆ

ಕಲಬುರಗಿ: ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ಮಂಗಳವಾರ ಸಡೆದಿದ್ದು, ಎಲ್ಲಾ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು…

18 hours ago