ಬಿಸಿ ಬಿಸಿ ಸುದ್ದಿ

ಜೇವರ್ಗಿಯಲ್ಲಿ ಅನಿಮಿಯಾ ಮುಕ್ತ ಕರ್ನಾಟಕ ಕಾರ್ಯಕ್ರಮ

ಜೇವರ್ಗಿ: ಪಟ್ಟಣದ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ತಾಲೂಕಾ ಆರೋಗ್ಯ ಇಲಾಖೆಯ ವತಿಯಿಂದ ಸೋಮವಾರ ಅನಿಮಿಯಾ ಮುಕ್ತ ಕರ್ನಾಟಕ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ತ್ರಿವೇಣಿ, ನವಜಾತ ಶಿಶುಗಳು, ಗರ್ಭಿಣಿ ಮಹಿಳೆಯರು, ಮಕ್ಕಳು ಹದಿ ಹರೆಯವರು ಹಾಗೂ ತಾಯಂದಿರಲ್ಲಿನ ರಕ್ತ ಹೀನತೆ ಮತ್ತು ಪವೌಷ್ಠಿಕತೆಯನ್ನು ನಿವಾರಿಸಲು ಸರ್ಕಾರ ‘ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ’ ಯೋಜನೆ ಜಾರಿಗೆ ತಂದಿದೆ. ಹಾಗಾಗಿ,  ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.

ಈ ಸಂದರ್ಭದಲ್ಲಿ ಹಲವರನ್ನು ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ಪರೀಕ್ಷಿಸಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿ ಪ್ರೀಯಾ, ಶರಣು, ಕಾಲೇಜಿನ ಪ್ರಾಚಾರ್ಯರಾದ ರವೀಂದ್ರಕುಮಾರ ಸಿ. ಬಟಗೇರಿ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ಮಲ್ಲಪ್ಪ ರಂಜಣಗಿ,  ಗ್ರಂಥಪಾಲಕ ಲಿಂಗರಾಜ ಹಿರೇಗೌಡ, ನಿವೃತ್ತ ಮುಖ್ಯ ಶಿಕ್ಷಕ ಬಸವರಾಜ ಹಡಪದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

vikram

Recent Posts

ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರತಿಕೃತಿ ದಹಿಸಿ ಡಿಎಸ್‌ಎಸ್ ಪ್ರತಿಭಟನೆ ಅಂಬೇಡ್ಕರ್‌ರನ್ನು ಅವಮಾನಿಸಿದ ಅಮಿತ್ ಷಾ ಗಡಿಪಾರು ಮಾಡಿ-ಕ್ರಾಂತಿ

ಸುರಪುರ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು…

2 hours ago

ಮಹಿಳಾ ಸಾಧಕರಿಗೆ ಸನ್ಮಾನ

ಕಲಬುರಗಿ: ನಗರದ ಹ್ಯಾಪಿ ಫಂಕ್ಷನ್ ಹಾಲ್‌ನಲ್ಲಿ ರಂಗಾAತರAಗ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ "ಕನ್ನಡಂ ಗೆಲ್ಗೆ…

2 hours ago

ಕನ್ನಡ ಸೈನ್ಯದ ಕನ್ನಡ ಉತ್ಸವ

ಕಲಬುರಗಿ: ನಗರದ ಸಿದ್ದಾರ್ಥ ವೃತ್ತ (ಗೋವಾ ಹೊಟೇಲ್) ಟ್ಯಾಂಕ್ ಬಂಡ್ ಮುಖ್ಯ ರಸ್ತೆಯ ಆವರಣ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಹಾಮಂಟಪದಲ್ಲಿ…

2 hours ago

ಜಿಲ್ಲಾಧಿಕಾರಿ ಡಾ. ಫೌಜಿಯಾ ತರನ್ನುಮ್ ಸೇರಿ ಸನ್ಮಾನ

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕಲಬುರಗಿ ವತಿಯಿಂದ ಕಲಬುರಗಿ ಜಿಲ್ಲಾಧಿಕಾರಿ ಡಾ.ಫೌಜಿಯಾ ತರನ್ನುಮ್, ಜಿಲ್ಲಾ…

2 hours ago

ಸಂಸತ್ತಿನಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಹೇಳಿಕೆಗೆ ದಿನೇಶ ದೊಡ್ಡಮನಿ ಖಂಡನೆ

ಕಲಬುರಗಿ: ಸಂಸತ್ತ ಅಧಿವೇಶನದಲ್ಲಿ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಮಾತನಾಡಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ ಆರ್…

10 hours ago

ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪಿಂಚಣಿ ಹೋರಾಟಕ್ಕೆ ಹೈ ಕ ಶಿಕ್ಷಣ ಸಂಸ್ಥೆಯ ನೌಕರರ ಬೆಂಬಲ

ಬೆಳಗಾವಿ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ (ರಿ ) *ಪ್ರಾಣ ಬಿಟ್ಟೇವು ಪಿಂಚಣಿ…

1 day ago