ಕಲಬುರಗಿ: ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಇಲ್ಲಿನ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬೆಳಗ್ಗೆ 6 ಗಂಟೆಯಿಂದಲೇ ನಗರದ ಹೊರ ವಲಯದ ವೃತ್ತಗಳಲ್ಲಿ ಸೇರಿದ ಜನತೆ ಯಾವ ವಾಹನಗಳು ಸಹ ನಗರದೊಳಗೆ ಪ್ರವೇಶವಾಗದಂತೆ ಪ್ರತಿಭಟನೆ ನಡೆಸಿದರು.
ನಗರದ ವಿವಿಧೆಡೆ ಕೆಲ ಲಾರಿ, ದ್ವಿಚಕ್ರ ವಾಹನದ ಮೇಲೆ ಕಲ್ಲು ತೂರಿದ ಸಣ್ಣ ಪುಟ್ಟ ಅಹಿತಕರ ಘಟನೆಗಳು ನಡೆದಿರುವುದನ್ನು ಪ್ರತ್ಯಕ್ಷದರ್ಶಿಗಳು ಪ್ರಜಾಪ್ರಗತಿಗೆ ತಿಳಿಸಿದರು.
ನಗರದ ಗಂಜ್ ಪ್ರದೇಶದಿಂದ ಹೊರಟ ಬೃಹತ್ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ಅಮಿತ್ ಶಾ ಹೇಳಿಕೆಯನ್ನು ಖಂಡಿಸಿದರು ಮಾತ್ರವಲ್ಲ ಕ್ಷಮೆ ಕೇಳಬೇಕು ಮೇಲಾಗಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಗೃಹ ಸಚಿವ ಅಮಿತ್ ಶಾ ಹೇಳಿಕೆ ಭಾರತ ಒಪ್ಪುವುದಿಲ್ಲ. ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಅವಮಾನವಾದರೆ ಈ ಹೋರಾಟ ಇಷ್ಟಕ್ಕೆ ನಿಲ್ಲದೆ ನಿರಂತರವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ, ವಿಠ್ಠಲ ದೊಡ್ಡಮನಿ, ದಿನೇಶ ದೊಡ್ಡಮನಿ, ಮೀನಾಕ್ಷಿ ಬಾಳಿ, ಕೆ. ನೀಲಾ, ಮಜರ್ ಆಲಂಖಾನ್, ಅಣದೂರು ವರಜ್ಯೋತಿ ಭಂತೇಜಿ, ಗುರುನಾಥ ಪೂಜಾರಿ, ಲಚ್ಚಪ್ಪ ಜಮಾದಾರ, ವಹಾಜ್ ಬಾಬಾ, ರಾಜು ಕಪನೂರ, ಲಿಂಗರಾಜ ತಾರ್ಫೈಲ್, ಬಾಬಾಖಾನ್, ಅಶ್ವಿನಿ ಮದನಕರ್, ನಂದಕುಮಾರ ಮಾಲಿಪಾಟೀಲ, ಪ್ರಕಾಶ ಮೂಲಭಾರತಿ, ಅರ್ಜುನ ಭದ್ರೆ, ಅರುಣಕುಮಾರ ಪಾಟೀಲ, ಸೂರ್ಯಕಾಂತ ನಿಂಬಾಳಕರ, ಎ.ಬಿ. ಹೊಸಮನಿ, ಸುಭಾಷ ರಾಠೋಡ, ಸುನಿಲ್ ಮಾನ್ಪಡೆ, ಸುರೇಶ ಹಾದಿಮನಿ ಮತ್ತಿತರರು ಮಾತನಾಡಿ, ಅಮಿತ್ ಶಾ ಹಾಗೂ ಮನಸ್ಥಿತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಪ್ರತಿಭಟನೆಯಲ್ಲಿ ಸುಮಾರು 10 ಸಾವಿರ ಜನ ಭಾಗವಹಿಸಿದ್ದರು. ಅಮಿತ್ ಶಾ ಪ್ರತಿಕೃತಿ ಹಾಗೂ ಟೈಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕಲಬುರಗಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಡಿ.೨೮ ಮತ್ತು ೨೯ರಂದು ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ…
ಗ್ರಾಮೀಣ ವಿವಿಗೆ ಗಾಂಧಿ ಹೆಸರಿಡ ಕಲಬುರಗಿ: ಗದಗನಲ್ಲಿರುವ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಮಹಾತ್ಮಗಾಂಧಿ ಅವರ ಹೆಸರಿಡಬೇಕು ಎಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ…
ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…
ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…
ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…
ಆದಿವಾಸಿ ಸಮಾಜದ ಜನಜೀವನ ಸ್ಥಿತಿಗತಿ ಕುರಿತು ಸಮಿಕ್ಚಾ ಕಾರ್ಯಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಬಿ.ಎ. ಅಂತಿಮ…