ಬಿಸಿ ಬಿಸಿ ಸುದ್ದಿ

ಡಿ.೨೮, ೨೯ರಂದು ಬಾಗಲೂರಿನಲ್ಲಿ ವೈಜ್ಞಾನಿಕ ಸಮ್ಮೇಳನ

ಕಲಬುರಗಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಡಿ.೨೮ ಮತ್ತು ೨೯ರಂದು ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ಬಾಗಲೂರು ವಿ.ಜೆ. ಇಂಟರ್ ನ್ಯಾಶನಲ್ ಶಾಲಾ ಮೈದಾನದಲ್ಲಿ ೪ನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ನಡೆಯಲಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಶಿವರಂಜನ ಸತ್ಯಂಪೇಟೆ ತಿಳಿಸಿದರು.

ಮಾಜಿ ಸಚಿವೆ, ರಂಗಕರ್ಮಿ, ಚಲನಚಿತ್ರನಟಿ ಉಮಾಶ್ರೀ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವನ್ನು ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ೨೮ರಂದು ಬೆಳಗ್ಗೆ ೧೦:೩೦ ಗಂಟೆಗೆ ನಡೆಯಲಿರುವ ಸಚಿವರಾದ ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ, ಸತೀಶ ಜಾರಕಿಹೊಳಿ, ಎನ್.ಎಸ್. ಬೋಸರಾಜ್, ಎಚ್.ಸಿ. ಮಹಾದೇವಪ್ಪ, ಕೆ.ಎಚ್. ಮುನಿಯಪ್ಪ, ಶಾಸಕರಾದ ಎಸ್.ಆರ್. ವಿಶ್ವನಾಥ, ಮಂಜುಳಾ ಅರವಿಂದ ಲಿಂಬಾವಳಿ, ಮುನಿರತ್ನ, ರಾಮಮೂರ್ತಿ, ಎಸ್.ಟಿ. ಸೋಮಶೇಖರ ಮತ್ತಿತರರು ಭಾಗವಹಿಸಲಿದ್ದಾರೆ. ಪರಿಷತ್ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ನಮ್ಮ ಸಂವಿಧಾನ ನಮ್ಮ ಹಕ್ಕು, ಪ್ರಸ್ತುತ ರೈತರ ಭವಣೆಗಳು, ಪ್ರಸ್ತುತ ಶೈಕ್ಷಣಿಕ ತಲ್ಲಣಗಳು, ಅಂಗೈಯಲ್ಲಿ ಆರೋಗ್ಯ, ಸ್ತಿçà ಮನದ ತಲ್ಲಣಗಳು, ಸೈಬರ್ ಸುರಕ್ಷತೆ ವಿಷಯ ಕುರಿತು ಮೂರು ಗೋಷ್ಠಿಗಳು ಜರುಗಲಿದ್ದು, ಜಸ್ಟಿಸ್ ನಾಗಮೋಹನದಾಸ್, ಡಾ. ಪುರುಷೋತ್ತಮ ಬಿಳಿಮಲೆ, ಎಚ್.ಕೆ. ವಿವೇಕಾನಂದ, ಡಾ. ಆಂಜನಪ್ಪ, ಡಾ. ಪ್ರೇಮ ಸಿದ್ಧರಾಜು, ಡಾ. ಉದಯಶಂಕರ ಪುರಾಣಿಕ ಅವರು ವಿಷಯ ಮಂಡಿಸಲಿದ್ದಾರೆ ಎಂದು ಹೇಳಿದರು.

೨೯ರಂದು ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಬೆಂಗಳೂರು ಕೃಷಿ ವಿವಿ ವಿಶ್ರಾಂತ ನಿರ್ದೇಶಕ ಕೆ. ನಾರಾಯಣಗೌಡ ಸಮಾರೋಪ ನುಡಿಗಳನ್ನಾಡಲಿದ್ದಾರೆ. ನಂತರ ನಡೆಯಲಿರುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್. ನಾಗಾಭರಣ ವಹಿಸಲಿದ್ದು, ಹುಲಿಕಲ್ ನಟರಾಜ್ ಅವರಿಂದ ಪವಾಡ ಬಯಲು ಕಾರ್ಯಕ್ರಮ ಹಾಗೂ ಕೆಂಪೇಗೌಡ ನಾಟಕ ಪ್ರದರ್ಶನವಾಗಲಿದೆ ಎಂದು ಹೇಳಿದರು.

ಹಣಮಂತರಾಯ ಐನೂಲಿ, ಡಾ. ಅಶೋಕ ದೊಡ್ಡಮನಿ, ಸಂಗಣ್ಣ ಜಿ. ಸತ್ಯಂಪೇಟೆ, ಸತೀಶ ಸಜ್ಜನಶೆಟ್ಟಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

 

ಪ್ರಶಸ್ತಿ ಪುರಸ್ಕೃತ ಕಲಬುರಗಿ ಮಂದಿ:

ಇದೇವೇಳೆಯಲ್ಲಿ ರಾಜ್ಯಮಟ್ಟದ ಜೀವಮಾನ ಸಾಧನಾ ಪ್ರಶಸ್ತಿ, ಹೆಚ್.ಎನ್. ಪ್ರಶಸ್ತಿ ಹಾಗೂ ಚೈತನ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಲಬುರಗಿ ಜಿಲ್ಲೆಯಿಂದ ಜೀವಮಾನ ಸಾಧನಾ ಪ್ರಶಸ್ತಿಗೆ ಮುಖ್ಯಮಂತ್ರಿ ಸಲಹೆಗಾರ ಹಾಗೂ ಶಾಸಕ ಬಿ.ಆರ್. ಪಾಟೀಲ ಹೆಚ್.ಎನ್. ಪ್ರಶಸ್ತಿಗೆ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ, ಚೈತನ್ಯಶ್ರೀ ಪ್ರಶಸ್ತಿಗೆ ಜಯಶ್ರೀ ಚಟ್ನಳ್ಳಿ ಆಯ್ಕೆಯಾಗಿದ್ದಾರೆ ಎಂದು ಅವರು ವಿವರಿಸಿದರು.

sajidpress

Recent Posts

ಗ್ರಾಮೀಣ ವಿವಿಗೆ ಗಾಂಧಿ ಹೆಸರಿಡಿ: ಬಿ.ಆರ್. ಪಾಟೀಲ

ಗ್ರಾಮೀಣ ವಿವಿಗೆ ಗಾಂಧಿ ಹೆಸರಿಡ ಕಲಬುರಗಿ: ಗದಗನಲ್ಲಿರುವ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಮಹಾತ್ಮಗಾಂಧಿ ಅವರ ಹೆಸರಿಡಬೇಕು ಎಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ…

16 hours ago

ಜಾಗೃತ ಗ್ರಾಹಕರು ದೇಶದ ದೊಡ್ಡ ಆರ್ಥಿಕ ಶಕ್ತಿ: ನ್ಯಾಯವಾದಿ ಝಳಕಿ

ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…

2 days ago

ಜಾಗ್ರತ ಗ್ರಾಹಕರು ದೇಶದ ದೊಡ್ಡ ಆರ್ಥಿಕ ಶಕ್ತಿ: ನ್ಯಾಯವಾದಿ ಝಳಕಿ

ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…

2 days ago

ಜಾಗ್ರತ ಗ್ರಾಹಕರು ದೇಶದ ದೊಡ್ಡ ಆರ್ಥಿಕ ಶಕ್ತಿ: ನ್ಯಾಯವಾದಿ ಝಳಕಿ

ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ…

2 days ago

ಆದಿವಾಸಿ ಸಮಾಜದ ಜನಜೀವನ ಸ್ಥಿತಿಗತಿ ಕುರಿತು ಸಮಿಕ್ಷಾ ಕಾರ್ಯ.

ಆದಿವಾಸಿ ಸಮಾಜದ ಜನಜೀವನ ಸ್ಥಿತಿಗತಿ ಕುರಿತು ಸಮಿಕ್ಚಾ ಕಾರ್ಯಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಬಿ.ಎ. ಅಂತಿಮ…

2 days ago

ಅಮಿತ್ ಶಾ ಹೇಳಿಕೆ ಖಂಡಿಸಿ ಕಲಬುರಗಿ ಸಂಪೂರ್ಣ ಬಂದ್

ಕಲಬುರಗಿ: ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಇಲ್ಲಿನ ಸಂವಿಧಾನ ‌ರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ…

2 days ago