ಬಿಸಿ ಬಿಸಿ ಸುದ್ದಿ

ನಿವೃತ್ತ ರೈಲ್ವೆ ಪೊಲೀಸ್ ಅಧಿಕಾರಿ ಸ್ಮರಣಾರ್ಥ ಬೆಸ್ಟ್ ಪೊಲೀಸ್ ಪ್ರಶಸ್ತಿ ಸನ್ಮಾನ ಸಮಾರಂಭ

ಇ-ಮೀಡಿಯಾ ಲೈನ್ ನ್ಯೂಸ್

ಅಫಜಲಪುರ: ಪ್ರತಿಯೊಬ್ಬರು ತಮ್ಮ ತಂದೆ ತಾಯಂದಿರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕೆಂದು ಲೋಕೋಪಯೋಗಿ ಇಲಾಖೆಯ ನಿವೃತ್ತ ಲೆಕ್ಕ ಪರಿಶೋಧಕ ಬಾಬುರಾವ ಜಮಾದಾರ ತಿಳಿಸಿದರು.

ಪಟ್ಟಣದ ಮಾತೋಶ್ರೀ ಮನೋರಮಾ ಮಧ್ವರಾಜ ಪ್ರೌಢ ಶಾಲೆಯಲ್ಲಿ ಜಮಾದಾರ ಕುಟುಂಬ ಪ್ರತಿಷ್ಠಾನದ ವತಿಯಿಂದ ಪತ್ರಕರ್ತ ಸೂರ್ಯಕಾಂತ ಜಮಾದಾರ ಅವರು ತಮ್ಮ ತಂದೆ ನಿವೃತ್ತ ರೈಲ್ವೆ ಪೊಲೀಸ್ ಅಧಿಕಾರಿಯಾಗಿದ್ದ ದಿ. ಶ್ರೀ ಮಲಕಪ್ಪ ಹಣಮಂತ ಜಮಾದಾರ ಇವರ ಪ್ರಥಮ‌ ಪುಣ್ಯ ಸ್ಮರಣೆಯ ಅಂಗವಾಗಿ ಶನಿವಾರ ಆಯೋಜಿಸಿದ್ದ “ಬೆಸ್ಟ್ ಪೊಲೀಸ್ ಪ್ರಶಸ್ತಿ” ವಿತರಣಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು ಜೀವನದಲ್ಲಿ ಮಕ್ಕಳ ಮೊದಲ ಪಾಠ ಶಾಲೆ‌ ಮನೆ. ಏಕೆಂದರೆ ನಮ್ಮ ಬಾಲ್ಯದ ಜೀವನ ಆರಂಭವಾಗುವುದು ನಮ್ಮ ತಂದೆ ತಾಯಿಯ‌ ಆಶ್ರಯದಲ್ಲಿ. ಪ್ರತಿಯೊಂದು ಸಂಸ್ಕಾರಗಳು ಬೆಳೆಯುವುದು ಮನೆಯಿಂದಲೇ. ಹೀಗಾಗಿ ತಂದೆ ತಾಯಿ ಬುದ್ಧಿ ಮಾತು ನಮ್ಮನ್ನು ಮತ್ತಷ್ಟು ಸಶಕ್ತರನ್ನಾಗಿ ಮಾಡುತ್ತವೆ. ಅದನ್ನು ಯಾರೂ ಸಹ ಅನ್ಯಥಾ ಭಾವಿಸದೆ ಅವರ ಆದರ್ಶಮಯ ಬದುಕನ್ನು ನಮ್ಮ ಜೀವನದಲ್ಲಿ ಅಳವಡಿಕೊಂಡಾಗ ಮಾತ್ರ ಸಮಾಜಮುಖಿ ಬೆಳೆಯಲು ಸಾಧ್ಯವಾಗುವುದು ಎಂದು ತಿಳಿಸಿದ ಅವರು ತಮ್ಮ ತಂದೆಯ ಕೊಡುಗೆಯನ್ನು ಕಾರ್ಯಕ್ರಮದಲ್ಲಿ ಸ್ಮರಿಸಿ ಭಾವುಕರಾದರು.

ಪ್ರಾಸ್ತಾವಿಕವಾಗಿ ಹಿರಿಯ ಪತ್ರಕರ್ತ ಸೂರ್ಯಕಾಂತ ಎಂ. ಜಮಾದಾರ ಅವರು ಮಾತನಾಡಿ, ಈ ಭೂಮಿಗೆ ನಮ್ಮನ್ನು ಪರಿಚಯಿಸಿದವರು ನಮ್ಮ ತಂದೆ ತಾಯಿಗಳು. ಹೀಗಾಗಿ ಅವರ ಆದರ್ಶಮಯ ಬದುಕನ್ನು ಪ್ರತಿಯೊಬ್ಬ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ತಂದೆ ನಮಗೆ ಉನ್ನತ ಮಟ್ಟದ ವಿದ್ಯಾಭ್ಯಾಸ ಕೊಡಿಸಿ ಸಮಾಜದಲ್ಲಿ ಹೇಗೆ ಪರೋಪಕಾರಿಯಾಗಿ ಬದುಕು ಸಾಗಿಸಬೇಕೆಂದು ಮಾರ್ಗದರ್ಶನ ನೀಡಿದ್ದಾರೆ. ಹೀಗಾಗಿ ಅವರ ಹೆಸರನ್ನು ಚಿರಸ್ಥಾಯಿಯಾಗಿ ಇರಿಸಲು ಪ್ರತಿ ವರ್ಷವೂ ಕೂಡ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸುವುದಾಗಿ ತಿಳಿಸಿ ತಮ್ಮ ತಂದೆಗೆ ಭಾವಪೂರ್ಣ ನಮನ ಸಲ್ಲಿಸಿದರು.

ದಿ. ಮಲಕಪ್ಪ ಜಮಾದಾರ ಅವರ ವ್ಯಕ್ತಿತ್ವ ಪರಿಚಯವನ್ನು ಸಂಸ್ಥೆಯ ಶಿಕ್ಷಕ ಎಸ್.ಎಂ ಕರಿಕಲ್ ಮಾಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ‌ ಯಂಕಂಚಿ ವಹಿಸಿಕೊಂಡರು.

ಮುಖ್ಯ ಅತಿಥಿ ಸ್ಥಾನವನ್ನು ಶ್ರೀಮತಿ ಲಕ್ಷ್ಮೀ ಎಂ. ಜಮಾದಾರ, ರಮೇಶ ಜಮಾದಾರ ಹಾಗೂ ಪಂಚಾಕ್ಷರಿ ಜಮಾದಾರ ವಹಿಸಿಕೊಂಡರು.

ಕಾರ್ಯಕ್ರಮದಲ್ಲಿ “ಬೆಸ್ಟ್ ಪೊಲೀಸ್” ಪ್ರಶಸ್ತಿಗೆ ಭಾಜನಾರಾದ ಎಚ್.ಸಿ ಶ್ರೀಕಾಂತ ಖಾನಾಪೂರ, ಎಚ್.ಸಿ ಬಸವರಾಜ ಹೆಡಗಿಜೋಳ, ಪಿ.ಸಿ ಮಲ್ಲಿನಾಥ ಹತ್ತಿ, ಪಿ.ಸಿ ಶಿವಾನಂದ ದೇಸುಣಗಿ, ಪಿ.ಸಿ ನಿಂಗಣ್ಣ ಪೂಜಾರಿ ಸೇರಿದಂತೆ ನಿವೃತ್ತ ಪೊಲೀಸ್ ಸಿಬ್ಬಂದಿಗಳಾದ ಶರಣಪ್ಪ ಯಾತನೂರ, ವಿಠ್ಠಲ ಅಂಬೂರೆ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಬಸವರಾಜ ನಿಂಬರ್ಗಿ, ಎ.ಜಿ ನೆಲ್ಲಗಿ, ಎಸ್.ಸಿ ಕುಲಕರ್ಣಿ, ಎಂ.ಕೆ ಪಡಸಲಗಿ, ಪ್ರಭಾಕರ ಯಂಕಂಚಿ, ಎ.ವಿ ರಾಠೋಡ, ಸಂಗೀತಾ ನಾಟೀಕಾರ, ಗಾಯತ್ರಿ ದಳವಾಯಿ, ಈರಯ್ಯ ಗಂಗನಳ್ಳಿ, ಸುಭಾಶ ಕೋಳಿ ಅನೇಕರಿದ್ದರು.
ಪ್ರಶಸ್ತಿಯ ಜೊತೆಯಲ್ಲಿ ನೀಡಲಾಗಿದ್ದ ಗೌರವ ಧನವನ್ನು ಶಾಲೆಯ ಹಾಗೂ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಬಳಕೆ ಮಾಡುವಂತೆ ಕೋಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ್ ಯಂಕಂಚಿ ಅವರಿಗೆ ಹಸ್ತಾಂತರಿಸಿದರು.

emedialine desk

Recent Posts

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಸ್ಥಾಪಿಸಿ

ಇ-ಮೀಡಿಯಾ ಲೈನ್ ಕಲಬುರಗಿ: ನಗರದ ಸೂಪರ್ ಮಾರ್ಕೆಟ್ ಸಿಟಿ ಬಸ್ ನಿಲ್ದಾಣದ ಹತ್ತಿರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸಿರುವುದು…

5 hours ago

ಮಕ್ಕಳ ಆರೈಕೆದಾರರಿಗೆ ತರಬೇತಿ ಕಾರ್ಯಕ್ರಮ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರ್ಗಿ:  ಜಿಲ್ಲೆಯ ಮತ್ತು. ಕಮಲಾಪುರ ತಾಲೂಕ ಸಂಯುಕ್ತ ಆಶ್ರಯದಲ್ಲಿ. ಕಲ್ಬುರ್ಗಿ ತಾಲೂಕ ಸಭಾಂಗಣದಲ್ಲಿ. ಕಮಲಾಪುರ ತಾಲೂಕಿನ…

8 hours ago

ಬಸವಸೇವಾ ಪ್ರತಿಷ್ಠಾನದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ- ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ…

2 days ago

ಬಸವಸೇವಾ ಪ್ರತಿಷ್ಠಾನದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ-ಮೀಡಿಯಾ ಲೈನ್ ನ್ಯೂಸ್  ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ ಅಡಿಯಲ್ಲಿ…

2 days ago

ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪಡೆದ ಶ್ರೀಮತಿ ಜ್ಯೋತಿ ಅವಿನಾಶ ಉಪಳಾಂವಕರ ಅವರಿಗೆ  ಅಭಿನಂದನೆ

ಕಲಬುರಗಿ: ಶ್ರೀಮತಿ ಜ್ಯೋತಿ ಉಪಳಾಂವಕರ ಅವರಿಗೆ ರೈತ ಉದ್ಯಮಿ ಅವ್ವ ಎನ್ನಲು ಹೆಮ್ಮೆ ಎನಿಸುತ್ತದೆ. ಏಕೆಂದರೆ ಕಳೆದ ೫-೬ ವರ್ಷಗಳಿಂದ…

3 days ago

ನಿವೃತ್ತ ರೈಲ್ವೆ ಪೊಲೀಸ್ ಅಧಿಕಾರಿ ಸ್ಮರಣಾರ್ಥ ಬೆಸ್ಟ್ ಪೊಲೀಸ್ ಪ್ರಶಸ್ತಿ ಸನ್ಮಾನ ಸಮಾರಂಭ

ಇ-ಮೀಡಿಯಾ ಲೈನ್ ನ್ಯೂಸ್ ಅಫಜಲಪುರ: ಪ್ರತಿಯೊಬ್ಬರು ತಮ್ಮ ತಂದೆ ತಾಯಂದಿರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕೆಂದು ಲೋಕೋಪಯೋಗಿ ಇಲಾಖೆಯ ನಿವೃತ್ತ…

3 days ago