ಬಿಸಿ ಬಿಸಿ ಸುದ್ದಿ

ರಾಜ್ಯದ ಜನತೆಗೆ ಸಿದ್ದರಾಮಯ್ಯನವರಿಂದ ಮೋಸ: ದೇವೇಂದ್ರ ದೇಸಾಯಿ ಕಲ್ಲೂರ ಕಿಡಿ

ಇ-ಮೀಡಿಯಾ ಲೈನ್ ನ್ಯೂಸ್

ಕಲಬುರಗಿ: ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯವರು ಅಹಿಂದ ಎಂಬ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಅಹಿಂದ ಜನರನ್ನೆ ಕತ್ತಲಲ್ಲಿ ದೂಡುವುದು ಸರಿಯೇ, ಜಾತಿಗಣತಿ ಹೆಸರಲ್ಲಿ ಹಿಂದುಳಿದ ವರ್ಗಗಳಿಗೆ ಮೋಸ ಮಾಡುತ್ತಿದ್ದರೆ ಎಂದು ಬಿಜೆಪಿಯ ಓಬಿಸಿ ಮೋರ್ಚಾದ ಕಲಬುರಗಿ ನಗರಾಧ್ಯಕ್ಷ ದೇವೆಂದ್ರ ದೇಸಾಯಿ ಕಲ್ಲೂರ ಕೀಡಿ ಕಾರಿದ್ದಾರೆ.

ಜಾತಿಗಣಿತಿ ವರದಿಯನ್ನು ವಿಧಾನ ಸಭೆಯಲ್ಲಿ ಮಂಡಿಸುವುದಾಗಿ ಹೇಳಿಕೆ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ. ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುವುದು ಅವರಿಗೆ ಮೊದಲಿನಿಂದ ಕರಗತವಾಗಿದೆ. ಆದರೆ ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯವನರು ಇಂದು ಬಿಜೆಪಿ ಶಾಸಕರೊಂದಿಗೆ ಅಲ್ಲದೇ ಕಾಂಗ್ರೆಸ್ ಶಾಸಕರೊಂದಿಗೆ ಆಟವಾಡುತ್ತಿರುವುದು ಎಷ್ಟು ಸರಿ? ಸುಮಾರು 168 ಕೋಟಿ ರೂ. ವ್ಯಯಮಾಡಿ ರಾಜ್ಯದಲ್ಲಿರು ಆರ್ಥಿಕ ಹಾಗೂ ಸಮಾಜಿಕ ಹಿಂದುಳಿದ ಎಲ್ಲಾ ಜಾತಿ ಜನಾಂಗದವರ ಸಮೀಕ್ಷೆಯನ್ನು ತಾವು ಈ ಹಿಂದೆ ಇದ್ದ ಅಧಿಕಾರ ಅವಧಿಯಲ್ಲಿ ಮಾಡಿದ್ದರು. ಜಾತಿ ಸಮೀಕ್ಷೆಯು ಸೋರಿಕೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅಧಿಕಾರದಲ್ಲಿ ಇರುವ ಬಲಾಡ್ಯ ಸಮುದಾಯವರು ಎಲ್ಲಿ ಅತೀ ಕಡಿಮೆ ಜನಸಂಖ್ಯೆಯಲ್ಲಿ ನಾವು ಬರುತ್ತೇವೆ? ಎಂಬ ಹೆದರಿಕೆ ಒಂದು ಕಡೆಯಾದರೆ ರಾಜ್ಯದಲ್ಲಿ ಯಾವುದೇ ಸ್ಥಾನಮಾನ ಇಲ್ಲದೆ, ಅಧಿಕಾರದಲ್ಲಿ ಇಲ್ಲದೇ ಇರುವ ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನುವದು ಸದ್ಯದ ಲೆಕ್ಕಾಚಾರವಾಗಿದೆ. ರಾಜಕೀಯ, ಸಮಾಜಿಕ ಹಾಗೂ ಆರ್ಥಿಕವಾಗಿ ಬಲಡ್ಯರಾಗಿರುವ ಒಂದು ಸಮುದಾಯದವರನ್ನು ಹತ್ತಿಕ್ಕಲ್ಲು ಸಿಎಂ ಸಿದ್ದರಾಮಯ್ಯನವರು ನಾಟಕವನ್ನು ಆಡುತ್ತಿದ್ದರೆ. ಇನ್ನೊಂದು ಕಡೆ ನಮ್ಮ ಜನಸಂಖ್ಯೆ ಕಡಿಮೆ ಎಂದು ಗೊತ್ತಾದರೆ ಮುಂದಿನ ದಿನಗಳಲ್ಲಿ ರಾಜಕೀಯ ಅಲ್ಲದೇ ಸಾಮಾಜಿಕ ಸ್ಥಾನಮಾನವನ್ನು ಕಳೆದುಕೊಳ್ಳುವ ಭೀತಿ ಬಲಡ್ಯ ಸಮುದಾಯವದವರದಾಗಿದೆ.

ಸಿಎಂ ಸಿದ್ದರಾಮಯ್ಯನವರ ರಾಜಕೀಯ ಆಟದಿಂದಾಗಿ ಇಂದು ರಾಜ್ಯದ ಜನತೆ ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಉಚಿತ ಯೋಜನೆಗಳಿಂದಾಗಿ ರಾಜ್ಯವು ಆರ್ಥಿಕವಾಗಿ ದಿವಾಳಿಯತ್ತಾ ಸಾಗತ್ತಿದೆ ಎಂದು ಆರ್ಥಿಕ ತಜ್ಞರ ಅಭಿಪ್ರಾಯಗಳು ಕೇಳಿ ಬರುತ್ತಿದೆ. ನಿಮಗೆ ಉಚಿತವಾಗಿ ಕೊಡುವುದಾರೆ ನಿರುದ್ಯೋಗ ಯುವಕರಿಗೆ ಉದ್ಯೋಗದಂತ ಯೋಜನೆಗಳನ್ನು ಹಾಕಿ. ಪೆಟ್ರೋಲ್‌ನಲ್ಲಿ ಇರುವ ಸೆಸ್ಸ್ ತೆರಿಗೆ ಕಡಿಮೆ ಮಾಡಿ, ಉದ್ಯೋಗಕ್ಕಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳು ಉಚಿತವಾಗಿ ನಡೆಸಿ ಎಂದು ದೇವೆಂದ್ರ ದೇಸಾಯಿ ಸವಾಲು ಹಾಕಿದ್ದಾರೆ.

ಮಹಿಳೆಯರಿಗೆ ಪ್ರತಿತಿಂಗಳು ಎರಡು ಸಾವಿರ ರೂಪಾಯಿಗಳು ನೀಡುವ ಬದಲು ಪ್ರತಿಕುಟುಂಬಕ್ಕೆ ಉಚಿತ ತರಬೇತಿ ಯೋಜನೆಗಳನ್ನು ಹಾಕಿ ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಿ? ಮಹಿಳೆಯರಿಗಾಗಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಬದಲು 60 ವರ್ಷ ಮೇಲ್ಪಟ್ಟ ಮಹಿಳಾ ಹಾಗೂ ಪುರಷ ಹಿರಿಯ ನಾಗರಿಕರಿಗೆ ಮತ್ತು ಎಲ್ಲಾ ವರ್ಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಮಾಡಿ. 200 ಯುನಿಟ್ ಉಚಿತ ವಿದ್ಯುತ್ ಬದಲು ರೈತರಿಗೆ ದಿನದ 12 ಗಂಟೆ ಉಚಿತ ವಿದ್ಯುತ್ ಯೋಜನೆ ಜಾರಿಗೆ ಮಾಡಿ ಇದರಿಂದ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾರೆ. ಸಣ್ಣ ಅತೀ ಸಣ್ಣ ಉದ್ಯಮಗಳಿಗೆ ಕಡಿಮೆ ಬೆಲೆಯಲ್ಲಿ ವಿದ್ಯುತ್ ಸರಬರಾಜು ಮಾಡುವಂತ ವ್ಯವಸ್ಥೆ ಮಾಡಿದರೆ ಯುವಕರು ಸ್ವಯಂ ಉದ್ಯೋಗದ ಕಡೆ ಬರುವಂತ ಪರಿಸ್ಥಿತಿ ನಿರ್ಮಾಣವಾದಿತು.

ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಸಂಪೂರ್ಣ ಹದಗೆಟ್ಟಿದೆ. ಶಾಸಕರೆಲ್ಲರೂ ಸಿಎಂ ಖರ್ಚಿಗಾಗಿ ಕಾದಾಟ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬಾಲಕಿಯರ ಮೇಲೆ ನಿತ್ಯ ಅತ್ಯಚಾರದಂತ ಪ್ರಕರಣಗಳು ನಡೆಯುತ್ತಿವೆ. ದರೋಡೆ, ಲೂಟಿಗಳು ಎಗ್ಗಿಲ್ಲದೆ ನಡೆಯುತ್ತಿವೆ. ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಸಿಎಂ ಆಗುವ ತವಕದಲ್ಲಿರುವುದು ದುರಾದೃಷ್ಟಕರವಾಗಿದೆ.
ಒಟ್ಟಾರೆಯಾಗಿ ಸಿಎಂ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿಯ ಕಡೆಗೆ ಕೊಂಡ್ಯೋಯುತ್ತಿರುವುದು ದುರಾದೃಷ್ಟಕರವಾಗಿದೆ ಎಂದು ದೇವೇಂದ್ರ ದೇಸಾಯಿ ಕಲ್ಲೂರ ಕಿಡಿ ಕಾರಿದ್ದಾರೆ.

emedialine desk

Recent Posts

ಮುಜಾಹಿದ್ ಪಟೇಲ್ ಗೆ ಸಚಿವರಿಂದ ಸನ್ಮಾನ

ಯಾದಗಿರಿ: ಇಲ್ಲಿನ ನಗರಸಭೆ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಜಾಹಿದ್ ಪಟೇಲ್ ಅವರನ್ನು ಪೌರಾಡಳಿತ ಸಚಿವ ರಹಿಮ್ ಖಾನ್ ಮತ್ತು…

2 days ago

2025ರ ಕೆಬಿಎನ್ ಪ್ರೀಮಿಯರ ಲೀಗ T20 ಜನೆವರಿ 21 ರಿಂದ ಆರಂಭ

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದಲ್ಲಿನ ಕ್ರೀಡಾಪಟುಗಳಿಗೆ ಒಳ್ಳೆಯ ಅವಕಾಶ ನೀಡುವ ಸಲುವಾಗಿ ಕೆಬಿಎನ್ ಪ್ರಿಮಿಯರ್ ಲೀಗ್ ಆರಂಭಿಸಲಾಗಿದ್ದು ಪ್ರಸಕ್ತ…

2 days ago

ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ…

5 days ago

ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಹೆಚ್ಚಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ: ಶಶೀಲ್ ಜಿ ನಮೋಶಿ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ:  ಹಲೋ ಶಿಕ್ಷಣ ಇಲಾಖೆ ಕಲಬುರ್ಗಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ ಕಲಬುರಗಿ ಸಮಾಜ…

5 days ago

ಪಂಚಶೀಲ ಪಾದಯಾತ್ರೆ ಸಮಾರೋಪ ಜ. 24ರಂದು ಬೆಂಗಳೂರಿನಲ್ಲಿ ಸಮಾರೋಪ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ ಆಂಧ್ರಪ್ರದೇಶದ ಬುದ್ಧವನ…

5 days ago

ಶಾಂತರೆಡ್ಡಿ ಅವರಿಂದ ಶರಣು ಮೋದಿಗೆ ಸನ್ಮಾನ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ  ಶರಣು ಮೋದಿ ಅವರಿಗೆ ನಗರ…

6 days ago