ಬಿಸಿ ಬಿಸಿ ಸುದ್ದಿ

ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಹೆಚ್ಚಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ: ಶಶೀಲ್ ಜಿ ನಮೋಶಿ

ಇ-ಮೀಡಿಯಾ ಲೈನ್ ನ್ಯೂಸ್

ಕಲಬುರಗಿ:  ಹಲೋ ಶಿಕ್ಷಣ ಇಲಾಖೆ ಕಲಬುರ್ಗಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ ಕಲಬುರಗಿ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ಕಲಬುರ್ಗಿ ಹಾಗೂ ನ್‌ಪಿಎಸ್ ಪದವಿಪೂರ್ವ ಕಾಲೇಜು ಜಿಲ್ಲೆಯ ಸರಕಾರಿ ಅನುದಾನಿತ ಮೊರಾರ್ಜಿ ವಸತಿ ಶಾಲೆಗಳ ಸಮಾಜ ವಿಜ್ಞಾನ ಶಿಕ್ಷಕರಿಗೆ ಶುಕ್ರವಾರ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಾಗಾರದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಶಶಿಲ್ ಜಿ ನಮೋ ಶ್ರೀ ರವರು ನೆರವೇರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಎಸ್ ಎಸ್ ಎಲ್ ಸಿ ಫಲಿತಾಂಶ ಅಭಿವೃದ್ಧಿಪಡಿಸಲು ಪ್ರಾಥಮಿಕ ಹಂತದ ಶಿಕ್ಷಣವನ್ನು ಗಟ್ಟಿಗೊಳಿಸುವುದು ಅತ್ಯವಶ್ಯಕವಾಗಿದೆ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳ ಕಲಿಕೆ ಚೆನ್ನಾಗಿ ಆದರೆ ಪ್ರೌಢಾವಸ್ಥೆಯಲ್ಲಿ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಮರ್ಥರಾಗುತ್ತಾರೆ ಇದೆಲ್ಲದರ ಮಧ್ಯೆ ದಾಖಲಾಗಿರುವ ಎಲ್ಲ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಫಲಿತಾಂಶ ಹೆಚ್ಚಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಮಹೇಶ್ ಹೂಗಾರ್ ಮಾತನಾಡಿ ಪ್ರೌಢಶಾಲೆಗೆ ದಾಖಲಾಗಿರುವ ಎಲ್ಲ ಮಕ್ಕಳಿಗೆ ಮನೋಬಲ ಹೆಚ್ಚಿಸಿ ಅವರೆಲ್ಲರೂ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುವುದು ನಮ್ಮೆಲ್ಲರಿಗೆ ಅನಿವಾರ್ಯವಾಗಿದೆ ಆ ಕಾರಣಕ್ಕಾಗಿ ಎಲ್ಲಾ ವಿಶೇಷ ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ಫಲಿತಾಂಶ ಹೆಚ್ಚಿಸುವ ಕೆಲಸ ಮಾಡುವ ಮೂಲಕ ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಬಸವರಾಜ್ ಬರವಣಿಗೆ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರವರು ಮಾತನಾಡಿ ಪ್ರಾಥಮಿಕ ಹಂತದಲ್ಲಿ ಕಡ್ಡಾಯವಾಗಿ ಮುತ್ತಿನ ಗೊಳಿಸುವ ಅನಿವಾರ್ಯತೆ ಇರುವುದರಿಂದ ಶಿಕ್ಷಣದ ಗುಣಮಟ್ಟದೆ ಈ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಾಗೂ ಪಾಲಕರಿಗೆ ವಿಶೇಷ ತರಬೇತಿ ನೀಡಿ ಪ್ರಾಥಮಿಕ ಹಂತದ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಸೂರ್ಯಕಾಂತ್ ಮದಾನೆ ನ್‌ಪಿಎಸ್ ಕಾರ್ಯದರ್ಶಿಗಳಾದ ಸುರೇಶ್ ಬುಲ್ ಬುಲೆ ನಿರ್ದೇಶಕರಾದ ಮೈನೋಧಿನ್ ಸಂಘದ ಕಾರ್ಯದರ್ಶಿಗಳಾದ ಶ್ರೀ ಜಮೀರ್ ಇಮ್ರಾನ್ ಅಹಮದ್ ವಿಶೇಷ ಶಿಕ್ಷಕರ ವೇದಿಕೆ ಅಧ್ಯಕ್ಷರಾದ ಸಂತೋಷ ಹೂಗಾರ್ ವಿಜಯಕುಮಾರ್ ಪಾಟೀಲ್ ರಾಮು ಚೌಹಾನ್ ಶರಣಬಸಪ್ಪ ನಾಟಿಕರ್ ಬಾಬರ ಪಟೇಲ್ ಸಿದ್ದು ಚಿಂಚೋಳಿ ರಾಜೇಂದ್ರ ಪ್ರಸಾದ್ ತಳವಾರ್ ಇತರರು ಉಪಸ್ಥಿತರಿದ್ದರು.

emedialine desk

Recent Posts

ಮುಜಾಹಿದ್ ಪಟೇಲ್ ಗೆ ಸಚಿವರಿಂದ ಸನ್ಮಾನ

ಯಾದಗಿರಿ: ಇಲ್ಲಿನ ನಗರಸಭೆ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಜಾಹಿದ್ ಪಟೇಲ್ ಅವರನ್ನು ಪೌರಾಡಳಿತ ಸಚಿವ ರಹಿಮ್ ಖಾನ್ ಮತ್ತು…

2 days ago

2025ರ ಕೆಬಿಎನ್ ಪ್ರೀಮಿಯರ ಲೀಗ T20 ಜನೆವರಿ 21 ರಿಂದ ಆರಂಭ

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದಲ್ಲಿನ ಕ್ರೀಡಾಪಟುಗಳಿಗೆ ಒಳ್ಳೆಯ ಅವಕಾಶ ನೀಡುವ ಸಲುವಾಗಿ ಕೆಬಿಎನ್ ಪ್ರಿಮಿಯರ್ ಲೀಗ್ ಆರಂಭಿಸಲಾಗಿದ್ದು ಪ್ರಸಕ್ತ…

2 days ago

ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ…

5 days ago

ರಾಜ್ಯದ ಜನತೆಗೆ ಸಿದ್ದರಾಮಯ್ಯನವರಿಂದ ಮೋಸ: ದೇವೇಂದ್ರ ದೇಸಾಯಿ ಕಲ್ಲೂರ ಕಿಡಿ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯವರು ಅಹಿಂದ ಎಂಬ ಹೆಸರಿನಲ್ಲಿ ಅಧಿಕಾರಕ್ಕೆ…

5 days ago

ಪಂಚಶೀಲ ಪಾದಯಾತ್ರೆ ಸಮಾರೋಪ ಜ. 24ರಂದು ಬೆಂಗಳೂರಿನಲ್ಲಿ ಸಮಾರೋಪ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ ಆಂಧ್ರಪ್ರದೇಶದ ಬುದ್ಧವನ…

5 days ago

ಶಾಂತರೆಡ್ಡಿ ಅವರಿಂದ ಶರಣು ಮೋದಿಗೆ ಸನ್ಮಾನ

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ  ಶರಣು ಮೋದಿ ಅವರಿಗೆ ನಗರ…

6 days ago