ಬಿಸಿ ಬಿಸಿ ಸುದ್ದಿ

ಮೂರು ತಿಂಗಳುಗಳಿಂದ ವೇತನ ಇಲ್ಲವೆಂದು ಕಾರ್ಮಿಕರ ಬೇಸರ

ಸುರಪುರ: ನಗರದ ಸ್ವಚ್ಛತೆ ಕಾಪಾಡುವಲ್ಲಿ ಕರ್ಮಚಾರಿಗಳು ತಮ್ಮ ಶ್ರಮವಹಿಸಿ ದುಡಿಯುತ್ತಾರೆ ಇತಂಹ ಕರ್ಮಚಾರಿಗಳಿಗೆ ಎರಡು ತಿಂಗಳಾದರು ನಗರಸಭೆ ಅಧಿಕಾರಿಗಳು ವೇತನ ನೀಡದೆ ಸತಾಯಿಸುತ್ತಿರುವುದು ಯಾವ ನ್ಯಾಯ ಎಂದು ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಗದೀಶ ಶಾಖನವರ ಬೇಸರ ವ್ಯಕ್ತಪಡಿಸಿದರು.

ನಗರದ ನಗರಸಭೆ ಕಛೇರಿ ಆವರಣದಲ್ಲಿ ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿ ತಾಲೂಕು ಶಾಖೆಯಿಂದ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಅವರು, ದಿನಗೂಲಿ ಮತ್ತು ಕೈ ರಶೀಧಿ ಆಧಾರದ ಮೇಲೆ ಪೌರಕಾರ್ಮಿಕರು ಮತ್ತು ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ ಕಳೆದ ಮೂರು ತಿಂಗಳಿನಿಂದ ನಮಗೆ ನೀಡಬೇಕಾದ ವೇತನವನ್ನು ನೀಡದೆ ನಮ್ಮನ್ನು ಸತಾಯಿಸುತ್ತಿದ್ದಾರೆ.ಇಷ್ಟಲ್ಲದೆ ನಮಗೆ ಸಿಗಬೇಕಾದ ಸಮವಸ್ತ್ರ ಹಾಗೂ ಕೇಲಸದ ಸಮಯದಲ್ಲಾಗುವ ಅಪಘಾತ ಹಾಗೂ ಅಹಿತಕರ ಘಟನೆಗಳು ಸಂಭವಿಸಿದರೆ ನಮಗೆ ಒಂದು ಈ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯಗಳ ದೊರಕಿಸಿಕೊಡುವಂತೆ ಹಲವು ಬಾರಿ ಮನವಿ ಮಾಡಿಕೊಂಡರು ಸಹ ಏನು ಪ್ರಯೋಜನವಾಗಿಲ್ಲ. ವೇತನವಿಲ್ಲದೆ ಎರಡು ತಿಂಗಳು ನಮ್ಮ ಬದುಕು ಹೀನಾಯವಾಗಿದೆ, ತಕ್ಷಣವೆ ನಮ್ಮ ವೇತನವನ್ನು ಬಿಡುಗಡೆಗೊಳಿಸಿ ನಮಗೆ ಸಿಗಬೇಕಾದ ಸೌಲಭ್ಯವನ್ನು ಒದಗಿಸುವಂತೆ ಒತ್ತಾಯಿಸಿದರು.

ಧರಣಿ ಸ್ಥಳಕ್ಕೆ ಪೌರಯುಕ್ತ ಜೀವನ ಕುಮಾರ ಆಗಮಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ನಂತರ ಧರಣಿ ನಿಲ್ಲಿಸಿ ಮನವಿ ಸಲ್ಲಿಸಲಾಯಿತು.ಈ ಸಂದಂರ್ಭದಲ್ಲಿ ನಗರಸಭೆ ಸದಸ್ಯರಾದ ವೇಣುಮಾಧವ ನಾಯಕ, ರಾಜಾ ಪಿಡ್ಡನಾಯಕ ತಾತಾ, ನರಸಿಂಹ ಪಂಚಮಗಿರಿ, ಮಹ್ಮದ್ ಗೌಸ,ನೈರ್ಮಲ್ಯ ನಿರೀಕ್ಷಕ ಸುನೀಲ ನಾಯಕ,ಲಕ್ಷ್ಮಣ ಕಟ್ಟಿಮನಿ ಹಾಗು ಮುಖಂಡರಾದ ವೆಂಕಟೇಶ ಹೊಸಮನಿ, ಅಯ್ಯಪ್ಪ ಅಕ್ಕಿ, ಹಣಮಂತ ತೇಲ್ಕರ್, ಮಹದೇವಪ್ಪಾ ಸತ್ಯಂಪೇಟ, ವೆಂಕಟೇಶ ಹುಲಿಕಲ್, ಬಸವರಾಜ ಉಲ್ಪೇನವರ, ಮಾನಪ್ಪ ಸುರಪುರಕರ್, ಗೌತಮ್ ತೇಲ್ಕರ್, ಜಿರಂಜೀವಿ ಹುಣಸಿಹೊಳೆ,ಮರೆಪ್ಪ ಚಲುವಾದಿ,ಮರೆಮ್ಮ ಶಾಖನವರ,ದುರ್ಗಮ್ಮ ಚಿಂಚೋಡಿ,ಯಲ್ಲಮ್ಮ ಸುರಪುರಕರ್,ಪಾರ್ವತಿ ಹುಲಿಕರ್,ಲಕ್ಷ್ಮೀ ದೇಸಾಯಿ,ನೀಲಮ್ಮ ಉಲ್ಪೇನವರ್,ಯಲ್ಲಮ್ಮ ಹಣಮಂತ,ಲಕ್ಷ್ಮೀ ಚಲುವಾದಿ,ಮಲ್ಲಮ್ಮ ತೇಲ್ಕರ್,ರೇಣುಕಾ ಚಲುವಾದಿ,ಶಂಕರ ಉಲ್ಪೇನವರ್,ಗೌತಮ್ ಉಲ್ಪೇನವರ್,ಯಲ್ಲಪ್ಪ ತೇಲ್ಕರ್,ಶರಣು ಚಲುವಾದಿ ಸೇರಿದಂತೆ ಅನೇಕರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago