ರೇಷ್ಮೆ ಬೆಳೆಯಿಂದ ಲಕ್ಷಗಟ್ಟಲೇ ಆದಾಯ ಗಳಿಕೆ

ವರದಿ:ಜಿ.ಚಂದ್ರಕಾಂತ

ಬಳ್ಳಾರಿ: ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಶೀಗೇನಹಳ್ಳಿಯ ಕೆ.ಕೊಟ್ರಮ್ಮ ಸಂಗಪ್ಪ ಕಳೆದ ೧೩ ವರ್ಷಗಳಿಂದ ೩ ಎಕರೆಯಲ್ಲಿ ವರ್ಷಕ್ಕೆ ಹತ್ತು ರೇಷ್ಮೆ ಬೆಳೆಯನ್ನು ಬೆಳೆದು ಲಕ್ಷಗಟ್ಟಲೇ ಹಣ ಸಂಪಾದಿಸುತ್ತಿದ್ದಾರೆ. ಒಂದೂವರೆ ಎಕರೆಯ ೨ ತಾಕುಗಳಾಗಿ ವಿಂಗಡಿಸಿ ಪ್ರತಿ ಬೆಳೆಗೆ ೩೦೦ ಮೊಟ್ಟೆಗಳನ್ನು ಚಾಕಿ ಮಾಡಿ ವಾರ್ಷಿಕ ಸರಾಸರಿ ಪ್ರತಿ ನೂರು ಮೊಟ್ಟೆಗೆ ೮೦ಕೆ.ಜಿ. ರೇಷ್ಮೆಗೂಡನ್ನು ಉತ್ಪಾದಿಸಿ ಮಾದರಿ ರೇಷ್ಮೆ ಬೆಳೆಗಾರರಾಗಿದ್ದಾರೆ.

ಒಟ್ಟು ಆರೂವರೆ ಎಕರೆ ಜಮಿನು ಹೊಂದಿದ್ದರೂ ಇವರ ಆರ್ಥಿಕ ಪರಿಸ್ಥಿತಿ ಪ್ರಾರಂಭದಲ್ಲಿ ಸರಿಯಾಗಿರಲಿಲ್ಲ. ತಾಲೂಕಿನ ಸೊನ್ನದಲ್ಲಿ ರೇಷ್ಮೆ ಬೆಳೆಯುತ್ತಿದ್ದ ಸಂಬಂಧಿಕರಿಂದ ಪ್ರಭಾವಿತರಾಗಿ ರೇಷ್ಮೆ ಬೆಳೆಯುವ ದೃಢಸಂಕಲ್ಪ ಮಾಡಿದರು. ರೇಷ್ಮೆ ಇಲಾಖೆಯಿಂದ ಶೀಗೇನಹಳ್ಳಿಯಲ್ಲಿ ಮತ್ತು ತೋಳಹುಣಸೆಯಲ್ಲಿ ಆಯೋಜಿಸಿದ ತರಬೇತಿಯಲ್ಲಿ ಭಾಗವಹಿಸಿ ಸಂಪೂರ್ಣ ವಿವರ ಪಡೆದರು. ಆರು ಗಂಡು ಮತ್ತು ೪ ಹೆಣ್ಣು ಮಕ್ಕಳಿದ್ದಾರೆ. ಮೂರು ಗಂಡು ಮಕ್ಕಳಿಗೆ ೩ ಎಕರೆ ಹಂಚಿಕೊಟ್ಟಿದ್ದು, ಕೊಟ್ರಮ್ಮ ಮೂವರು ಗಂಡು ಮಕ್ಕಳೊಂದಿಗೆ ೩ ಎಕರೆಯಲ್ಲಿ ರೇಷ್ಮೆ ಇಲಾಖೆಯ ಸೂಕ್ತ ಮಾರ್ಗದರ್ಶನ ಮತ್ತು ಸಲಹೆಯಂತೆ ೨೦೦೬ರಲ್ಲಿ ವ್ಹಿ-೧ ತಳಿಯ ಹಿಪ್ಪುನೇರಳೆ ನಾಟಿ ಮಾಡಿದರು. ಈ ತೋಟದಲ್ಲಿ ೪x೪ ಅಡಿ ಅಂತರದಲ್ಲಿ ಎಕಕಾಂಡ ಪದ್ಥತಿ ಮತ್ತು ನೀರಾವರಿಯನ್ನು ಅಳವಡಿಸಿಕೊಂಡಿರುತ್ತಾರೆ. ವಾರ್ಷಿಕ ೩೦ ಟ್ರ್ಯಾಕ್ಟರ್ ಕೆರೆಹೂಳು ಹಾಗೂ ೧೦ ಕೊಟ್ಟಿಗೆ ಗೊಬ್ಬರ ಹಾಕಿ ಉತ್ತಮ ಗುಣಮಟ್ಟದ ಹಿಪ್ಪುನೇರಳೆಯಿಂದ ರೇಷ್ಮೆಹುಳುಗಳನ್ನು ಸಾಕುತ್ತಿದ್ದಾರೆ. ನಂತರ ೫೭x೨೧ಅಡಿ ಉದ್ದಗಲದ ರೇಷ್ಮೆಹುಳು ಸಾಕಾಣಿಕೆ ಮನೆಯನ್ನು ೫ ಲಕ್ಷ ರೂ.ದಿಂದ ನಿರ್ಮಿಸಿ ಪ್ರತಿ ಬದಿಗೂ ೭ರಂತೆ ೧೪ ಅಟ್ಟ ನಿರ್ಮಿಸಿದ್ದಾರೆ. ಇವರ ಪತಿ ಸಂಗಪ್ಪ ೨೦೧೪ರಲ್ಲಿ ಸಾವನ್ನಪ್ಪಿರುತ್ತಾರೆ.

ಪ್ರಾರಂಭದಲ್ಲಿ ೧೦೦ ರೇಷ್ಮೆ ಮೊಟ್ಟೆಯಿಂದ ೬೦ ಕೆ.ಜಿ.ಯಂತೆ ಒಂದು ವರ್ಷಕ್ಕೆ ೩೫೯ ಕೆ.ಜಿ.ರೇಷ್ಮೆಗೂಡು ಉತ್ಪಾದಿಸಿ ನಿವ್ವಳ ೧.೨೭ ಲಕ್ಷ ರೂ. ಆದಾಯ ಗಳಿಸಿದರು. ಇಲಾಖೆಯ ನೂತನ ತಾಂತ್ರಿಕತೆಯನ್ನು ಅಳವಡಿಸಿಕೊಂಡ ಪ್ರಯುಕ್ತ ೨೦೧೬-೧೭ನೇ ಸಾಲಿನಲ್ಲಿ ೨೭ ಕೆ.ಜಿ. ರೇಷ್ಮೆಗೂಡಿನಿಂದ ನಿವ್ವಳ ೧.೧೨ ಲಕ್ಷ ರೂ., ೨೦೧೭-೧೮ನೇ ಸಾಲಿನಲ್ಲಿ ೧೦೫೨ಕೆ.ಜಿ. ರೇಷ್ಮೆಗೂಡಿನಿಂದ ನಿವ್ವಳ ೫.೬೦ ಲಕ್ಷ ರೂ. ಮತ್ತು ೨೦೧೮-೧೯ನೇ ಸಾಲಿನಲ್ಲಿ ೭೮೬ ಕೆ.ಜಿ. ರೇಷ್ಮೆಗೂಡಿನಿಂದ ನಿವ್ವಳ ೩.೦೯ ಲಕ್ಷ ರೂ. ಲಾಭ ಪಡೆದಿದ್ದಾರೆ. ಇವರ ೨೦೧೭-೧೮ನೇ ಮತ್ತು ೨೦೧೮-೧೯ನೇ ಸಾಲಿನಲ್ಲಿ ರೇಷ್ಮೆಗೂಡಿನ ಸರಾಸರಿ ಇಳುವರಿ ಕ್ರಮವಾಗಿ ೮೦.೯ ಕೆ.ಜಿ. ಮತ್ತು ೮೪.೯ ಕೆ.ಜಿ. ಇರುತ್ತದೆ.

ಪ್ರಾರಂಭದಿಂದಲೂ ರಾಮನಗರದಲ್ಲಿ ರೇಷ್ಮಗೂಡನ್ನು ಮಾರಾಟ ಮಾಡುತ್ತಿದ್ದು, ಹಾಲಿ ಪ್ರತಿ ಕೆ.ಜಿ.ಗೆ ಸರಾಸರಿ ೪೦೦ರೂ. ಪಡೆದಿದ್ದಾರೆ. ಕಳೆದ ಸೆಪ್ಟಂಬರ್ ೩ನೇ ವಾರದಲ್ಲಿ ೨೫೦ ಮೊಟ್ಟೆಗೆ ಸರಾಸರಿ ೮೮ ಕೆ.ಜಿ.ಯಂತೆ ೨೨೦ ಕೆ.ಜಿ. ರೇಷ್ಮೆಗೂಡು ಉತ್ಪಾದಿಸಿ ಪ್ರತಿ ಕೆ.ಜಿ.ಗೆ ೪೬೦ರೂ. ದರದಂತೆ ೧.೦೧ ಲಕ್ಷ ರೂ. ಪಡೆದಿದ್ದಾರೆ. ರೇಷ್ಮೆಯ ಆದಾಯದಿಂದಲೇ ತೋಟದ ಹತ್ತಿರವಿರುವ ೧೫ ಎಕರೆ ಭೂಮಿ ಖರೀದಿಸಿ ತುಂಗಭದ್ರಾ ನದಿ ನೀರಿನಿಂದ ೧೦ ಎಕರೆಯಲ್ಲಿ ಶೇಂಗಾ ಮತ್ತು ೫ ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಮಕ್ಕಳೊಂದಿಗೆ ರೇಷ್ಮೆ ಕೃಷಿಯಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯೇ ಕೊಟ್ರಮ್ಮಳ ಯಶಸ್ಸಿನ ಗುಟ್ಟು.

ಕೊಟ್ರಮ್ಮ ೨೦೧೭-೧೮ನೇ ಸಾಲಿನ ರೇಷ್ಮೆ ಇಲಾಖೆಯಿಂದ ನೀಡಲಾಗುವ ರಾಜ್ಯ ಮಟ್ಟದ ಮಹಿಳಾ ವಿಭಾಗದಲ್ಲಿ ಮೂರನೇ ಬಹುಮಾನದೊಂದಿಗೆ ಪ್ರಶಸ್ತಿಪತ್ರ ಮತ್ತು ೧೫೦೦೦ರೂ. ನಗದು ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆ ಮುತ್ತಿಗಾರಹಳ್ಳಿಯ ಸಿ.ವಿ.ವೀರಮ್ಮ ೨೫೦೦೦ರೂ.ಗಳ ಪ್ರಥಮ ಮತ್ತು ಮಂಡ್ಯ ಜಿಲ್ಲೆಯ ಹೆಮ್ಮಿಗೆಯ ದೇವಮ್ಮ ೨೦೦೦೦ರೂ.ಗಳ ದ್ವಿತೀಯ ಬಹುಮಾನ ಗಳಿಸಿರುತ್ತಾರೆ. ಕೊಟ್ರಮ್ಮಳ ಕಿರಿಯ ಮಗ ಕೃಷ್ಣ ೨೦೧೪ ರಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಸಂಪನ್ಮೂಲ ಬೆಳೆಗಾರರೆಂದು ವಿಶೇಷ ತರಬೇತಿ ಪಡೆದಿದ್ದು, ವಿವಿಧ ರೈತರ ತರಬೇತಿ ಕಾರ್ಯಕ್ರಮಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಹಾಗೂ ತರಬೇತಿದಾರರಾಗಿ ಭಾಗವಹಿಸುತ್ತಿದ್ದಾರೆ.

ರೇಷ್ಮೆ ಕೃಷಿಯೇ ಕುಟುಂಬ ನಿರ್ವಹಣೆಯ ಮೂಲಾಧಾರವಾಗಿದೆ. ರೇಷ್ಮೆಯಿಂದ ವರ್ಷದಿಂದ ವರ್ಷಕ್ಕೆ ಕುಟುಂಬದ ಆದಾಯ ದ್ವಿಗುಣಗೊಳ್ಳುತ್ತಿದೆ.ಎನ್ನುತ್ತಾರೆ ಕೊಟ್ರಮ್ಮ. ಕೃಷ್ಣನ ಮೊಬೈಲ್ ಸಂಖ್ಯೆ 8722126607.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

10 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

13 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

13 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

13 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

13 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420