ಬಿಸಿ ಬಿಸಿ ಸುದ್ದಿ

ಜಾನಪದ ಉಳಿದರೆ ಸಂಸ್ಕೃತಿಯ ಉಳಿದಂತೆ: ವೀರಂತೇಶ್ವರ ಸ್ವಾಮೀಜಿ

ಆಳಂದ: ಜಾನಪದ ಸಂಸ್ಕೃತಿ ಉಳಿದರೇ ಮಾತ್ರ ನಮ್ಮ ದೇಶದ ಭವ್ಯ ಸಂಸ್ಕೃತಿ ಉಳಿದಂತಾಗುತ್ತದೆ ಎಂದು ಕೇಸರ ಜವಳಗಾದ ಮ.ನಿ.ಪ್ರ..ಸ್ವ ವೀರಂತೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಆಳಂದ ತಾಲೂಕಿನ ಗಡಿಗ್ರಾಮ ಖಂಡಾಳ ಗ್ರಾಮದಲ್ಲಿ ಲೋಕ ಸೇವಾ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸೌರಭ ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಅನ್ನ ನೀಡುವ ರೈತ, ಗಡಿ ಕಾಯುವ ಸೈನಿಕ ಮತ್ತು ಸಾಹಿತ್ಯವನ್ನು ಪಸರಿಸುವ ಕಲಾವಿದ ಯಾವತ್ತೂ ಉಪವಾಸವಿರಬಾರದು ಹೀಗಾಗಬಾರದು ಎಂದರೆ ಕಲೆಯನ್ನು ಕಲಾವಿದರನ್ನು ಪೋಷಿಸುವ ಉದಾತ್ತ ಗುಣಗಳು ಮನುಷ್ಯನಲ್ಲಿ ಬರಬೇಕು ಎಂದು ಹೇಳಿದರು. ಗಡಿ ಭಾಗದಲ್ಲಿ ಸಾವಿರಾರು ಜನ ಕಲಾವಿದರು ಎಲೆಮರೆಯ ಕಾಯಿಯಂತೆ ಇದ್ದಾರೆ ಅವರನ್ನು ಮುಖ್ಯ ವಾಹಿನಿಗೆ ಕರೆ ತರುವ ಕೆಲಸವನ್ನು ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ಅವರಿಗೆ ವೇದಿಕೆಗಳನ್ನು ಕೊಡುವುದು ಹಾಗೂ ಧನ ಸಹಾಯ ಮಾಡುವುದು ಈಗಿನ ತುರ್ತು ಅವಶ್ಯಕತೆಯಾಗಿದೆ ಎಂದು ನುಡಿದರು.

ವೇದಿಕೆಯ ಮೇಲೆ ಸಿದ್ದಾರಾಮ ಹೀರೆಮಠ, ರತನ ಸೂರ್ಯವಂಶಿ, ಬಾಲಚಂದ್ರ ಸೂರ್ಯವಂಶಿ, ಬಸವಂತರಾವ ಪೊಲೀಸ ಪಾಟೀಲ, ಶಿವಾನಂದ ಜಮಾದಾರ, ಉಲ್ಲಾಸ ಠಾಕೂರ, ಪ್ರಭು ಜೀರೊಳ್ಳಿ, ಗುರುನಾಥ ಬಿರಾದಾರ, ರಾಮಲಿಂಗ ಬೆಲ್ಲೆ, ಚಂದ್ರಕಾಂತ ಕಮಲಾಪುರೆ, ಲಕ್ಷ್ಮಣ ಜಮಾದಾರ ಇದ್ದರು.

ಕಲಾವಿದರಾದ ಉದಯಕುಮಾರ ಶಾಸ್ತ್ರೀ, ಗುರುಶಾಂತಯ್ಯ ಸ್ಥಾವರಮಠ, ಶಾಂತಕುಮಾರ ಮಂಗಲಗಿ, ಶ್ವೇತಾ ಜಾಧವ, ಸೈದಪ್ಪ ಸಪ್ಪನಗೋಳ, ಶಿವರಾಜ ಪಾಟೀಲ ಕಲಬುರಗಿ, ರಾಚಯ್ಯ ಸ್ವಾಮಿ, ತೇಜು ನಾಗೋಜಿ, ವೀರಭದ್ರಯ್ಯ ಸ್ಥಾವರಮಠ, ರೇವಣಯ್ಯ ಸ್ವಾಮಿ ಸುಂಟನೂರ, ಮಹಾಲಿಂಗಯ್ಯ ಸ್ಥಾವರಮಠ, ನಾಗಿಂದ್ರ ಸಪ್ಪನಗೋಳ, ಚನ್ನಯ್ಯ ಸಿದನೂರ, ಶಾಂತಯ್ಯ ಹಿರೇಮಠ, ಶಿವಶರಣಯ್ಯ ಮಠ, ಶರಣು ಸಾಗನೂರ, ಮಲ್ಲಯ್ಯ ಸುಂಟನೂರ, ಇಸ್ಮಾಯಿಲಸಾಬ್ ನದಾಫ್, ಶ್ರೀಮಂತ ಚಿಂಚನಸೂರ, ಶ್ರಾವಣ ಬಿರಾದಾರ, ಹಣಮಂತ್ರಾವ ಗುರವ, ದೇವು ರಾಠೋಡ ಸಂಗೀತ ಸೇವೆ ಸಲ್ಲಿಸಿದರು. ಶಿಕ್ಷಕ ದೇವಿದಾಸ ಪೊದ್ದಾರ ಕಾರ್ಯಕ್ರಮ ನಿರ್ವಹಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago