ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ಟಿಪ್ಪು ಸುಲ್ತಾನನ ಹೆಸರನ್ನು ಇತಿಹಾಸದ ಪಠ್ಯಪುಸ್ತಕದಿಂದ ತೆಗೆದುಹಾಕುವಂತೆ ಹೇಳಿಕೆ ನೀಡಿದ್ದು, ಇತಿಹಾಸದ ಪಠ್ಯಪುಸ್ತಕವನ್ನು ಈ ರೀತಿ ಆಪ್ರಜಾತಾಂತ್ರಿಕವಾಗಿ ಬದಲಾಯಿಸುವ ಹಾಗೂ ಶಿಕ್ಷಣದ ಸ್ವಾಯತ್ತತೆಯ ಮೇಲೆ ಸರ್ಕಾರದ ಈ ದಾಳಿಯನ್ನು ಎ.ಐ.ಡಿ.ಎಸ್.ಓ ಹಾಗೂ ಶಿಕ್ಷಣ ಉಳಿಸಿ ಸಮಿತಿಯು ಅತ್ಯುಗ್ರವಾಗಿ ಖಂಡಿಸಿವೆ.
ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿದ ಸಂಘಟನೆ ಪಠ್ಯದಲ್ಲಿ ಟಿಪ್ಪು ಸುಲ್ತಾನನ್ನು ಬಿಂಬಿಸಿರುವ ರೀತಿಯಲ್ಲಿ ಯಾವುದೇ ಅತಿರೇಕಗಳಿಲ್ಲ. ಆತನನ್ನು ಸ್ವಾತಂತ್ರ್ಯ ಹೋರಾಟಗಾರನಾಗಿ ಚಿತ್ರಿಸಿಲ್ಲ. ಬ್ರಿಟಿಷರ ವಿರುದ್ಧ ತನ್ನ ರಾಜ್ಯವನ್ನು , ಘನತೆಯನ್ನು ಉಳಿಸಿಕೊಳ್ಳಲು ರಾಜೀರಹಿತವಾಗಿ ಹೋರಾಡಿದ್ಧನ್ನೇ ಪಥ್ಯದಲ್ಲಿ ಬರೆಯಲಾಗಿದೆ. ನಮ್ಮ ನಿಲುವು ಕೂಡ ಟಿಪ್ಪು ಸುಲ್ತಾನ ಇಡೀ ದೇಶವನ್ನು ಒಂದುಗೂಡಿಸಿ, ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರನಲ್ಲ, ಆದರೆ ಬ್ರಿಟಿಷರ ಅಟ್ಟಹಾಸಕ್ಕೆ ಸೆಡ್ಡು ಹೊಡೆದು ಮಕ್ಕಳನ್ನೂ ಪಣಕ್ಕಿಟ್ಟು ಹೋರಾಟ ಮಾಡಿದ್ದನ್ನು ವಿದ್ಯಾರ್ಥಿಗಳು ಇತಿಹಾಸದ ಭಾಗವಾಗಿ ಓದುವುದು ಮುಖ್ಯ. ಮಕ್ಕಳಿಗೆ ನೈಜ ಇತಿಹಾಸ ಹಾಗೂ ಭಾರತದ ಹೋರಾಟದ ಪರಂಪರೆಯ ಪಾಠ ಕಲಿಸಬೇಕು ಎಂದು ಒತ್ತಾಯಿಸಿದೆ.
ಪಠ್ಯದಲ್ಲಿ ಯಾವುದು ಇರಬೇಕು ಅಥವಾ ಯಾವುದು ಇರಬಾರದು ಎಂಬುದನ್ನು ಶಿಕ್ಷಣ ತಜ್ಞರು, ಇತಿಹಾಸ ತಜ್ಞರು ಚರ್ಚಿಸಿ ತೀರ್ಮಾನಿಸತಕ್ಕದ್ದು, ಏಕಾಯೇಕಿಯಾಗಿ ಒಬ್ಬ ಶಾಸಕನ ದೂರಿಗೆ ಶಾಲಾ ಪಠ್ಯವನ್ನೇ ಬದಲಿಸಲು ಹೊರಟಿರುವುದು ಅತಿರೇಕ ಎಂದು ಸರಕಾರದ ಕ್ರಮವನ್ನು ಟೀಕಿಸಿದೆ.
ಟಿಪ್ಪು ಒಬ್ಬ ಮುಸಲ್ಮಾನ ಎಂಬ ಒಂದೇ ಕಾರಣಕ್ಕಾಗಿ ಆತನ ಚರಿತ್ರೆಯನ್ನು ಇತಿಹಾಸದ ಪಠ್ಯಪುಸಕ್ತದಿಂದ ಕಿತ್ತುಹಾಕಲು ಹೊರಟಿರುವುದು ಬಿಜೆಪಿಯ ಕೋಮುವಾದಿ ನಿಲುವನ್ನು ಎತ್ತಿ ತೋರಿಸುತ್ತದೆ, ಜಾತ್ಯಾತೀತತೆ, ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟ ಪ್ರತಿಯೊಬ್ಬ ನಾಗರಿಕನೂ ಇದನ್ನು ಧಿಕ್ಕರಿಸಬೇಕು ಎಂದು ಕರೆ ನೀಡಿದೆ
ಅನೇಕ ಇತಿಹಾಸಕಾರರ ಅಭಿಪ್ರಾಯದಂತೆ ಟಿಪ್ಪುವಿನದು ಸಾಮಾನ್ಯವಾದ ವ್ಯಕ್ತಿತ್ವವಲ್ಲ. ಬ್ರಿಟಿಷರ ವಿರುದ್ದ ಅಮೋಘವಾದ ಯುದ್ದ ಸಾರಿದ್ದ, ಬೇರೆಲ್ಲ ರಾಜರುಗಳು ಬ್ರಿಟಿಷರ ಮುಂದೆ ಮೊಣಕಾಲೂರಿದ್ದಾಗ, ಟಿಪ್ಪು ಖಡ್ಗ ಹಿಡಿದಿದ್ದ ಎಲ್ಲಾ ರಾಜರುಗಳರತೆ ತನ್ನ ಧರ್ಮಕ್ಕೆ ಹೆಚ್ಚು ಮಾನ್ಯತೆ ನೀಡಿರುವ ಕೆಲಸಗಳನ್ನು ಮಾಡಿದ್ದರೂ ದೇವಸ್ಥಾನಗಳ ಜೀರ್ಣೋದ್ದಾರ ಮಾಡಿಸಿದ್ದ ವಿಶ್ವದ ಮೊದಲ ಬಾರಿಗೆ ರಾಕೆಟ್ ಶಂತ್ರಜ್ಞಾನಕ್ಕೆ ಅಡಿಪಾಯ ಹಾಕಿ, ಬ್ರಿಟಿಷರ ವಿರುದ್ಧ ಉಪಯೋಗಿಸಿದ್ದ. ವಿಜ್ಞಾನ, ಅಶಶಕ್ತಿ ಆತನ ಕೊಡುಗೆಗಳನ್ನು ಅಳಿಸಿಹಾಕುವುದು ಹೇಗೆ ಸಣ? ಮಕ್ಕಳಿಗೆ ಈ ಪಾಠಗಳ ಅವಶ್ಯಕತೆ ಇದೆ. ಸರ್ಕಾರವು ಆಡಳಿತ ಪಕ್ಷದ ವೈಚಾರಿಕತೆಗೆ ತಕ್ಕಂತೆ ಇತಿಹಾಸವನ್ನು ಅಳಿಸುವುದು, ಬರೆಯುವುದು ಸಲ್ಲದು, ಇದನ್ನು ಎಲ್ಲಾ ಶಿಕ್ಷೆ ಪ್ರಿಯರು ಒಕ್ಕೊರಲಿನಿಂದ ಖಂಡಿಸಬೇಕು, ಶಿಕ್ಷವನ್ನು ಉಳಿಸಬೇಕೆಂದು ಎ.ಐ.ಡಿ.ಎಸ್.ಓ ಹಾಗೂ ಶಿಕ್ಷಣ ಉಳಿಸಿ ಸಮಿತಿಯು ಕರೆ ನೀಡಬೇಕೆಂದು ಒತ್ತಾಯಿಸಿದೆ.
ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…
ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…
ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…
ಕಲಬುರಗಿ : ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಎನ್.ಎಸ್.ಎಸ್, ರೆಡ್‍ಕ್ರಾಸ್, ಸ್ಕೌಟ್ಸ್ ಆಂಡ್ ಗೈಡ್ಸ್, ಐ.ಕ್ಯೂ.ಎ.ಸಿ ಮತ್ತು ಸಾಂಸ್ಕøತಿಕ ಘಟಕಗಳ…
ಕಲಬುರಗಿ; ಶಿಶು ಮಗುವಿಗೆ ಅಪಹರಣಕಾರರನ್ನು ಬಂಧಿಸಿದ ಕಲಬುರಗಿ ಪೆÇೀಲೀಸ್ ಇಲಾಖೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಅಭಿನಂದನೆ ವ್ಯಕ್ತಪಡಿಸಿದೆ.…
ಕಲಬುರಗಿ; ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ, ಯಡ್ರಾಮಿ, ಅಫಜಲಪೂರ, ಸೇಡಂ, ಆಳಂದ, ಚಿಂಚೋಳಿ ತಾಲೂಕಿನಲ್ಲಿ ಜಂಗಲ್ ಕಟಿಂಗ್ ಹಾಗೂ ಮೆಂಟನೆನ್ಸ್…