ಬಿಸಿ ಬಿಸಿ ಸುದ್ದಿ

ಮಹದಾಯಿ ನದಿ ರಕ್ಷಣೆ ಅಗತ್ಯ : ಗೋವಾ ಸಿಎಂ

ಜೇವರ್ಗಿ(ಪಣಜಿ): ಉತ್ತರ ಗೋವಾ ಸಂಪೂರ್ಣವಾಗಿ ಮಹದಾಯಿ ನದಿ ನೀರನ್ನೇ ಅವಲಂಬಿಸಿದ್ದು, ಪಶ್ಚಿಮ ಘಟ್ಟ ಅಭಯಾರಣ್ಯ ಪ್ರದೇಶದ ಮಹದಾಯಿ ಕಣಿವೆ ಉಳಿವಿನ ದೃಷ್ಟಿಯಿಂದ ಮಹದಾಯಿ ನದಿ ರಕ್ಷಣೆ ಅಗತ್ಯವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.

ನೆರೆಯ ಗೋವಾದ ಸಾಂಖಳಿ ನಗರದ ರವೀಂದ್ರ ಭವನದಲ್ಲಿ ಸಿರಿಗಂಧ ಕನ್ನಡ ಸಂಘ, ಕರ್ನಾಟಕ ಜಾಗೃತಿ ವೇದಿಕೆ ಹಾಗೂ ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಹೊರನಾಡ ಕನ್ನಡಿಗರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಮತ್ತು ಗೋವಾ ರಾಜ್ಯಗಳ ಬಾಂಧವ್ಯ ಉತ್ತಮವಾಗಿರಬೇಕು, ಆದರೆ ನನಗೆ ಗೋವಾ ರಾಜ್ಯದ ಹಿತವೇ ಬಹಳ ಮುಖ್ಯವಾಗಿದೆ. ಮಹದಾಯಿ ನದಿ ನೀರು ಗೋವಾ ಜನರಿಗೆ ಬಹಳ ಅನಿವಾರ್ಯವಾಗಿದೆ ಎಂಬುದು ಪ್ರಭಾಕರ ಕೋರೆ ಕರ್ನಾಟಕದ ಜನತೆಗೆ ತಿಳಿಸಬೇಕು. ಗೋವಾದಲ್ಲಿ ಕನ್ನಡಿಗರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಸೌಲಭ್ಯ ನೀಡುವುದರ ಜೊತೆಗೆ ಕನ್ನಡ ಭವನ ನಿರ್ಮಾಣಕ್ಕೆ ಜಾಗ ನೀಡಲು ಸ್ಥಳಿಯ ಸಂಘ-ಸಂಸ್ಥೆಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಇಲ್ಲಿನ ಸರ್ಕಾರ ಜಾಗ ನೀಡಬೇಕು, ಜಾಗ ನೀಡಿದ್ದೇ ಆದಲ್ಲಿ ಕೆಎಲ್‌ಇ ಸಂಸ್ಥೆಯಿಂದ ೧೦ ಲಕ್ಷ ರೂ.ನೆರವು ನೀಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಗೋವಾ ಸಿಎಂ ಪ್ರಮೋದ್ ಸಾವಂತ್,ಜೇವರ್ಗಿಯ ಉದಯವಾಣಿ ವರದಿಗಾರ ವಿಜಯಕುಮಾರ ಕಲ್ಲಾ, ಖ್ಯಾತ ವೈದ್ಯ ಡಾ.ಸಯ್ಯದ್ ಅಬ್ದುಲ್ ಖಾದರ, ತಹಶೀಲ್ದಾರ್ ಶಾಹೀದ್ ಹುಸೇನ, ಸಂಗೀತ ಕಲಾವಿದೆ ಪೂಜಾ ವಿಭೂತಿಮಠ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಕರುನಾಡ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು.

ಸಿರಿಗಂಧ ಕನ್ನಡ ಸಂಘದ ಅಧ್ಯಕ್ಷ ಎಸ್.ಹೆಚ್.ಪಾಟೀಲ, ಕರ್ನಾಟಕ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಶಬಾಬು ಸುರವೆ, ಸಮ್ಮೇಳನಾಧ್ಯಕ್ಷ ಪ್ರಭು ರತ್ನಾಕರ, ನ್ಯಾಯವಾದಿ ಕೆ.ಎಲ್.ಕುಂದರಗಿ, ಸಾಂಖಳಿಯ ಮುನ್ಸಿಪಲ್ ಕೌನ್ಸಿಲ್ ಮುಖ್ಯಸ್ಥ ಧರ್ಮೇಶ, ಜಿಪಂ ಮಾಜಿ ಸದಸ್ಯ ಪಾಂಡುರಂಗ ಸಾವಂತ, ಗೋವಾ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸುಲಕ್ಷಣಾ ಪ್ರಮೋದ ಸಾವಂತ್, ರಶ್ಮಿ ದೇಸಾಯಿ, ಹನುಮಂತರೆಡ್ಡಿ ಶಿರೂರ, ಮಲ್ಲಿಕಾರ್ಜುನ ಬದಾಮಿ, ವೀರೇಶ ಗಣಾಚಾರಿ ಸೇರಿದಂತೆ ಮತ್ತೀತರರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago