ಬಿಸಿ ಬಿಸಿ ಸುದ್ದಿ

ಶರಣಬಸವ ವಿಶ್ವವಿದ್ಯಾಲಯದಲ್ಲಿ ನ. 13 ರಿಂದ ಯುವಜನೋತ್ಸವ

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯವು ನ.೧೩ ಮತ್ತು ೧೪ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇರಿದಂತೆ ವಿವಿಧ ಸ್ಪರ್ಧೆಗಳನ್ನೊಳಗೊಂಡ ಯುವಜನೋತ್ಸವ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಕುಲಾಧಿಪತಿಯಾದ ಪರಮ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಉದ್ಘಾಟಿಸಲಿದ್ದಾರೆ.

ನಗರದ ಶತಮಾನೋತ್ಸವ ಸಭಾಂಗಣದಲ್ಲಿ ನ.೧೪ರಂದು ಸಂಜೆ ಡಾ. ಅಪ್ಪಾಜೀಯವರ ೮೫ನೇ ಜನ್ಮದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಸುಲಫಲ ಮಠದ ಶ್ರೀಶೈಲಂ ಜಗದ್ಗುರು ಪೂಜ್ಯ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹಾಗೂ ಚೌದಾಪೂರ ಮಠದ ಪೂಜ್ಯ ರಾಜಶೇಖರ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದ ನಂತರ ಯುವಜನೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದರು.

ಯುವಜನೋತ್ಸವ ಮತ್ತು ಜನ್ಮದಿನಾಚರಣೆಯ ಬಗ್ಗೆ ನ. ೮ರಂದು ಬಹುಭಾಷಾ ಕವಿಗಳ ಸಭೆಯನ್ನು ಪೂಜ್ಯ ಅಪ್ಪಾಜಿಯವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದೆ. ವಿಶ್ವವಿದ್ಯಾಲಯದ ಕುಲಪತಿಯಾದ ಡಾ.ನಿರಂಜನ್ ನಿಷ್ಠಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರೊ.ವಸಂತ ಕುಷ್ಟಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭಂದ್ರ ಸಿಂಪಿ ಹಾಗೂ ಖ್ಯಾತ ಶಸ್ತ್ರ ಚಿಕಿತ್ಸಕ ಡಾ. ಮಲ್ಲಿಕಾರ್ಜುನ್ ವಿ. ನಿಷ್ಠಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ, ಸಂಸ್ಕೃತ, ಇಂಗ್ಲೀಷ, ಉರ್ದು, ಹಿಂದಿ ಮತ್ತು ಮರಾಠಿ ಭಾಷೆಗಳ ಕವಿಗಳು ಭಾಗವಹಿಸಲಿದ್ದಾರೆ.

ಡಾ. ಅಪ್ಪಾಜೀಯವರ ಸಾನ್ನಿಧ್ಯದಲ್ಲಿ ಸಂಗೀತ ವಿಭಾಗವು ಆಯೋಜಿಸಿದ್ದ ’ದಾಸೋಹ ಸೂತ್ರ ಗಾಯನ ವ್ಯಾಖ್ಯಾನ’ ಕಾರ್ಯಕ್ರಮವನ್ನು ಕುಲಪತಿ ಡಾ. ನಿರಂಜನ್ ನಿಷ್ಠಿ ಉದ್ಘಾಟಿಸಲಿದ್ದಾರೆ. ವಿವಿ ಕುಲಸಚಿವ ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಲಿಂಗರಾಜ ಶಾಸ್ತ್ರಿ ಉಪಸ್ಥಿತಿ ವಹಿಸಲಿದ್ದಾರೆ. ಮಹಾದಾಸೋಹ ಸೂತ್ರಗಳ ವಾಖ್ಯಾನ ಮತ್ತು ಮಹಾ ದಾಸೋಹ ಸೂತ್ರಗಳ ವಿವರಣೆ ನಡೆಸಲಾಗುತ್ತದೆ.  ಕರ್ನಾಟಕ ಸಂಗೀತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕ ಡಾ.ಹನುಮಣ್ಣ ನಾಯಕ ದೊರೆ ಅವರು ಬೆಳಗನೆ ಬೆಳಗುವೆ ಮತ್ತು ಕೊಡುವದನ್ನೇ ಕಲಿಯಿರಿ ಎಂಬ ಎರಡು ಮಹಾದಾಸೋಹ ಸೂತ್ರಗಳನ್ನು ನಿರೂಪಿಸಲಿದ್ದಾರೆ. ಈ ಎರಡು ಸೂತ್ರಗಳ ನಿಖರವಾದ ಅರ್ಥಗಳನ್ನು ಪ್ರೊ.ಶಿವರಾಜ್ ಶಾಸ್ತ್ರಿ ಹೇರೂರ ಅವರು ವಿವರಿಸುತ್ತಾರೆ.

ಪ್ರೊ.ರೇವಯ್ಯ ವಸ್ತ್ರದ ಮಠ ಅವರು ಗುರು ಲಿಂಗ ಜಂಗಮಕ್ಕೆ ಮತ್ತು ಗುರುವಿಗೆ ಶರಣು ಶರಣಾರ್ಥಿ ಎಂಬ ಎರಡು ಸೂತ್ರಗಳ ಗಾಯನ ಮಾಡಲಿದ್ದು, ಅದರ ನಿಖರವಾದ ಅರ್ಥವನ್ನು ಡಾ.ಲಿಂಗರಾಜ ಶಾಸ್ತ್ರಿ ಅವರು ವಿವರಿಸಲಿದ್ದಾರೆ.
ಮತ್ತೊಬ್ಬ ಹಿಂದೂಸ್ತಾನಿ ಗಾಯಕಿ ಡಾ.ಕಲಾವತಿ ದೊರೆ ಅವರು ಹೇಳುವ ’ಗುರುಲಿಂಗ ಜಂಗವೇ ಪತಿಯಾಗಿ’ ಮತ್ತು ’ದಾಸೋಹಕ್ಕಾಗಿ ಮಾಡುವ ಕೆಲಸವೇ’ ಎಂಬ ಎರಡು ಸೂತ್ರಗಳ ಸಾರಾಂಶವನ್ನು ಡಾ. ನೀಲಾಂಬಿಕಾ ಶೇರಿಕಾರ ಅವರು ಅರ್ಥದೊಂದಿಗೆ ತಮ್ಮದೇ ಪರಿ ಭಾಷೆಯಲ್ಲಿ ವ್ಯಾಖ್ಯಾನಿಸಲಿದ್ದಾರೆ. ಮತ್ತೋರ್ವ ಗಾಯಕಿ ಕವಿತಾ ಮಠಪತಿ ’ತಾಯಿ ದೇವರು’ ಮತ್ತು ’ಶಿವಪಥ’ ಎಂಬ ಎರಡು ಸೂತ್ರಗಳನ್ನು ಮಂಡಿಸಲಿದ್ದಾರೆ. ಈ ಸೂತ್ರಗಳ ಅರ್ಥಗಳನ್ನು ಡಾ.ವಿಶ್ವನಾಥ ಮಠ ಅವರು ವಿವರಿಸಲಿದ್ದಾರೆ.

ಡಾ.ಅಪ್ಪಾಜಿ ಅವರ ಜನ್ಮದಿನಾಚರಣೆಯ ಅಂಗವಾಗಿ ಡಾ.ಪೂಜ್ಯ ಅಪ್ಪಾಜಿ ಬರೆದ ಮಹಾದಾಸೋಹ ಸೂತ್ರಗಳ ರಾಷ್ಟ್ರೀಯ ವಿಚಾರ ಸಂಕಿರಣ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಈ ವಿಚಾರ ಸಂಕಿರಣವನ್ನು ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವಿ ಮಹೇಶ್ವರಯ್ಯ ಅವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಉತ್ತರ ಪ್ರದೇಶ, ತಮಿಳು ನಾಡು ಸೇರಿದಂತೆ ವಿವಿಧ ರಾಜ್ಯಗಳ ತಜ್ಞರು, ಭಾಷಣಕಾರರು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ವಿಶ್ವವಿದ್ಯಾಲಯದ ಅಡಿಯಲ್ಲಿ ಜರಗುವ ಯುವ ಜನೋತ್ಸವದಲ್ಲಿ ಸಂಗೀತ, ನೃತ್ಯ, ಕ್ವಿಕ್, ಡ್ರಾಮಾ, ಚರ್ಚೆ, ಫೋಟೋಗ್ರಾಫಿ, ಸ್ಕಿಟ್, ಮೈಮ್, ಆನ್ ದ ಸ್ಪಾಟ್ ಪೆಂಟಿಂಗ್, ಕಾಲೇಜು ಪೋಸ್ಟರ್ ಮೇಕಿಂಗ್, ರಂಗೋಲಿ, ಮೆಹಂದಿ ಸೇರಿದಂತೆ ಒಟ್ಟು ೨೮ ವಿವಿಧ ಸ್ಪರ್ಧೆಗಳು ನಡೆಯಲಿವೆ. ಮುಂದೆ ನಡೆಯಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯದ ಯುವ ಉತ್ಸವದಲ್ಲಿ ವಿಶ್ವವಿದ್ಯಾಲಯ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಅನೀಲಕುಮಾರ ಬಿಡವೆ ತಿಳಿಸಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago