ಚಿತ್ತಾಪುರ: ಗುರುವಿನ ಮಾರ್ಗದರ್ಶನದಲ್ಲಿ ಮಾಡಿದ ಕೆಲಸಕ್ಕೆ ಯಶಸ್ಸು ನಿಶ್ಚಿತ ಎಂದು ಪಾಳದ ಶಿವಮೂರ್ತಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ವೆಂಕಟೇಶ್ ಕಾಲೋನಿಯಲ್ಲಿ ನರಿಬೋಳ ಪರಿವಾರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗುರು ವಂದನಾ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಅಧ್ಯಕ್ಷರಿಗೆ ಹಾಗೂ ಕಾರ್ಯಕಾರಿಣಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು, ಪರಿಶ್ರಮವಿರಬೇಕು ಅದರ ಜೊತೆಗೆ ಗುರುವಿನ ಕೃಪಾಶಿರ್ವಾದ ಇರಬೇಕು ಅಂದಾಗ ಮಾತ್ರ ಮಾಡುವ ಕೆಲಸ ಯಶಸ್ಸು ಕಾಣಲು ಸಾಧ್ಯ ಎಂದರು.
ಗೃಹ ಪ್ರವೇಶ ಎಂದರೆ ಕೇವಲ ಭಾರಿ ಭೋಜನ ವ್ಯವಸ್ಥೆ ಮಾಡಿದರೆ ಮನಸ್ಸಿಗೆ ತೃಪ್ತಿ ಸಿಗುವದಿಲ್ಲ ಎಂಬ ಕಾರಣಕ್ಕೆ ಎಂ.ಎಸ್ ಪಾಟೀಲ್ ಅವರು ಜಿಲ್ಲೆಯಲ್ಲಿರುವ ಮಠಾಧೀಶರನ್ನು ಆಹ್ವಾನಿಸಿ ಗುರು ವಂದನಾ ಕಾರ್ಯಕ್ರಮ ಆಯೋಜಿಸಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಅಧ್ಯಕ್ಷರಿಗೆ ಹಾಗೂ ಕಾರ್ಯಕಾರಿಣಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವದು ತುಂಬಾ ವಿಶೇಷವಾದದ್ದು. ಎಂ.ಎಸ್ ಪಾಟೀಲ್ ಅವರು ಯಾವದೆ ಕೆಲಸ ಮಾಡಲಿ ಅದರಲ್ಲಿ ಯಾವದಾದರೊಂದು ವಿಶೇಷತೆ ಇದ್ದೆ ಇರುತ್ತದೆ. ಅಲ್ಲದೆ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಹುಡುಕಿ ತಂದೆಯ ಹೆಸರಿನ ಶಾಂತಶ್ರೀ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ. ಅವರ ಈ ಸತ್ಕಾರ್ಯ ಹೀಗೆ ಸಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ನಂತರ ದಂಡಗುಂಡಶ್ರೀ, ಹಲಕರ್ಟಿಶ್ರೀ, ಸೇಡಂ ಹಾಲಪಯ್ಯಶ್ರೀ, ಸರಡಗಿ ಅಪ್ಪರಾವದಿವಿ ಮುತ್ಯಾ, ತೊನಸನಳ್ಳಿಶ್ರೀ ಆಗಮಿಸಿ ಆಶಿರ್ವದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರನ್ನು ಆತ್ಮೀಯವಾಗಿ ಸನ್ಮಾನಿ ಸತ್ಕರಿಸಲಾಯಿತು. ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಅಧ್ಯಕ್ಷ ಶರಣುಕುಮಾರ ಮೋದಿ, ಕಾರ್ಯಕಾರಿಣಿ ಸದಸ್ಯರಾದ ಸಿದ್ರಾಮಪ್ಪ ಆಲಗೂಡಕರ್, ಮಚ್ಚೆಂದ್ರನಾಥ ಮೂಲಗೆ, ಗೌರಿಚಿತ್ಕೋಟಿ, ಡಾ. ಶರಣ ಪಾಟೀಲ್, ಡಾ. ರವಿ ಮಲಶೆಟ್ಟಿ, ಶರಣು ಟೆಂಗಳಿ, ವೀರುಪಾಕ್ಷಯ್ಯ ಮಠಪತಿ, ವಿನೋದ ಜನೆವರಿ ಮತ್ತು ನರ್ಸಿಂಗ್ ಕೌನ್ಸಿಂಲ್ ಸ್ಟೇಟ್ ಕಮಿಟಿ ಸದಸ್ಯೆ ದಿವ್ಯಾ ಆರ್ ಹಾಗರಗಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಟೇಷನ್ ಬಬಲಾದ ರೇವಣಸಿದ್ಧ ಶಿವಾಚಾರ್ಯರು, ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪಾ, ಮುಖಂಡರಾದ ಎಸ್.ಕೆ ಕಾಂತಾ, ಅಲ್ಲಮಪ್ರಭು ಪಾಟೀಲ್, ನಾಸೀರ್ ಹುಸೇನ್ ಉಸ್ತಾದ, ಡಾ. ಲಿಂಗರಾಜ ಶಾಸ್ತ್ರಿ, ಡಾ. ಪ್ರಭುರಾಜ ಕಾಂತಾ, ಸೋಮಶೇಖರ ಪಾಟೀಲ್ ಬೆಳಗುಂಪಾ, ಶಿವರಾಜ ಅಂಡಗಿ, ಉದಯ ಪಾಟೀಲ್, ಮಹೇಶ ಕೆ ಪಾಟೀಲ್, ತಾತಾಗೌಡ ಪಾಟೀಲ್, ಸೋಮಶೇಖರ ಹಿರೇಮಠ, ಶಿವರಾಜಗೌಡ ಪಾಟೀಲ್, ಎಂ.ಎಸ್ ಪಾಟೀಲ್ ನರಿಬೋಳ, ಆನಂದ ಪಾಟೀಲ್ ನರಿಬೋಳ, ಕೋಟೇಶ್ವರ ರೇಷ್ಮಿ, ಅಂಬರೀಷ ಸುಲೆಗಾಂವ, ನಾಗರಾಜ ಹೂಗಾರ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…