ಬಿಸಿ ಬಿಸಿ ಸುದ್ದಿ

ರೈತರ ಸಮಸ್ಯೆ ಹಾಗೂ ರೈತರ ಸಲಹೆಗಾರರ ಹುದ್ದೆ ಪ್ರಾರಂಭಿಸಿಲು ಶ್ರಮ ಜೀವಿಗಳ ವೇದಿಕೆ ಆಗ್ರಹ

ಕಲಬುರಗಿ: ರಾಜ್ಯ ಕೃಷಿ ಇಲಾಖೆಯಲ್ಲಿ ರೈತರಿಗೆ ಸರಕಾರದ ಯೋಜನೆಗಳ ತಿಳುವಳಿಕೆ ಮತ್ತು ಕೃಷಿ ಚಟುವಟಿಕೆಯಲ್ಲಿ ತಾಂತ್ರಜ್ಞಾನ ಅಳವಡಿಕ್ಕೆ, ಬೆಳೆಗಳ ಬಗ್ಗೆ ಮಾಹಿತಿ ಸೇರಿದಂತೆ ಮುಂತಾದ ರೈತ ಪರ ಕೆಲಸಗಳಿಗೆ ತಿಳುವಳಿಕೆ ನೀಡಲು ಸಹಾಯ ಕೇಂದ್ರದ ನೇಮಕಾತಿ ಮಾಡಿಕೊಳ್ಳಲು ಒತ್ತಾಯಿಸಿ 12 ರಂದು ಬೃಹತ್ ಮೆರವಣಿಗೆ ನಡೆಸಲಾಗುವುದೆಂದು ಶ್ರಮ ಜೀವಿಗಳ ಅಧ್ಯಕ್ಷ ಚಂದ್ರಶೇಖರ ಎಸ್. ಹಿರೇಮಠ ತಿಳಿಸಿದರು.

ಅವರು ಪತ್ರಿಕಾ ಭವನದಲ್ಲಿ ಮಾತನಾಡಿ, ರಾಜ್ಯದ ಗ್ರಾಮ ಪಂಚಾಯತಿಗೆ ಒಬ್ಬರಂತೆ ಒಟ್ಟು ರಾಜ್ಯದಲ್ಲಿ 10 ವರ್ಷದಿಂದ, ಕಾರ್ಯನಿರ್ವಹಿಸುತ್ತಿರುವ ಸುಮಾರು 6500 ರೈತ ಅನುವುಗಾರರನ್ನು ಮಾಸಿಕ ರೂ.10,000/-, ಗೌರವಧನ ನಿಗದಿಪಡಿಸಿ ಪುನರ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಲಾಗುವುದು. ಸರಕಾರಕ್ಕೆ, ಒಂದು ತಿಂಗಳ ಕಾಲ ಅವಕಾಶ ನೀಡಿ ಬೇಡಿಕೆ ಈಡೇರದಿದ್ದರೆ ರಾಜ್ಯದ ಎಲ್ಲ ಅನುವುಗಾರರು, ಡಿಸೆಂಬರ 15 ರಿಂದ 9 ಆಕೆಗೆ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ನಿರ್ಧಿಷ್ಟ ಸತ್ಯಾಗ್ರಾಹ ನಡೆಸಲು, ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರಕಾರದ ಕೃಷಿ ಇಲಾಖೆಯಲ್ಲಿ ಸದ್ಯದ ವ್ಯವಸ್ಥೆಯಲ್ಲಿ ಅಧಿಕಾರಿಗಳ ಮಟ್ಟದ, ಅಧಿಕಾರಿಗಳೇ ಹೆಚ್ಚಾಗಿದ್ದು, ಗ್ರಾಮೀಣ ಮಟ್ಟದಲ್ಲಿ ನೇರವಾಗಿ ರೈತರಿಗೆ ತಿಳುವಳಿಕೆ ನೀಡಲು ವ್ಯವಸ್ಥೆ, ಇರುವುದಿಲ್ಲ. ಸದ್ಯ ವಿವಿಧ ಯೋಜನೆಗಳಲ್ಲಿ ರೈತ ಅನುವುಗಾರರನ್ನ ಬಳಸಿಕೊಂಡು ಇಲಾಖೆ ತನ್ನ, ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಮೊದಲು ಕೃಷಿ ಇಲಾಖೆಯಲ್ಲಿ ಗ್ರಾಮ ಸೇವಕ ಹುದ್ದೆಗಳಿದ್ದು ಇವರುಗಳು ನೇರವಾಗಿ ರೈತರ ಜೊತೆ ಸಂಪರ್ಕದಲ್ಲಿ ಇರುತಿದ್ದರು. ಈ ಹುದ್ದೆಗಳು ರದ್ದುಪಡಿಸಿರುವುದರಿಂದ ಸದ್ಯದ, ವ್ಯವಸ್ಥೆಯಲ್ಲಿ ಕೃಷಿ ಇಲಾಖೆಯಲ್ಲಿ ಕೆಳಮಟ್ಟ ಸಿಬ್ಬಂದಿಗಳೇ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಕೃಷಿ ಇಲಾಖೆಯಲ್ಲಿ ಒಣ ಬೇಸಾಯದಲ್ಲಿ ತಾಂತ್ರಜ್ಞಾನ ಅಳವಡಿಸಿ ಉತ್ಪಾದನೆ, ಹೆಚ್ಚಿಸುವ ಉದ್ದೇಶ ಹೊಂದಿದ ಭೂಚೇತನ ಯೋಜನೆ 2008-09 ರಲ್ಲಿ ಜಾರಿಗೆ ತಂದು 2017ರ, ವರೆಗೂ ಜಾರಿಯಲ್ಲಿತ್ತು. ಇದರ ಅನುಷ್ಠಾನಕ್ಕೆ ರಾಜ್ಯದ ಪ್ರತಿ ಗ್ರಾಮ ಪಂಚಯತಿಗೆ ಒಬ್ಬರಂತೆ ಈ, ರೈತ ಅನುಗಾರರನ್ನು ನೇಮಕ ಮಾಡಿಕೊಳ್ಳಲಾಯಿತು. ನಂತರ ಈ ಯೋಜನೆ ಮುಂದುವರಿಸದೆ, ಬೇರೆ ಯೋಜನೆಗಳಾದ ಕೃಷಿ ಭಾಗ್ಯ ಯೋಜನೆ, ಮಣ್ಣು ಪರಿಶೀಲನೆ ಎನ್.ಎಫ್.ಎಸ್.ಎಮ್ (NFSM) ಯೋಜನೆ ಬೀಜ ಉಪಚಾರ, ಶ್ರೀಧಾನ್ಯ ಮುಂತಾದ ಯೋಜನೆಗಳಲ್ಲಿ ಯೋಜನೆ, ಅನುಷ್ಠಾನಕ್ಕೆ ಇವರುಗಳನ್ನೇ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಸದ್ಯದ ವ್ಯವಸ್ಥೆಯಲ್ಲಿ ರೈತ ಅನುವುಗಾರರಿಗೆ ಮಾಸಿಕ ನಿರ್ಧಿಷ್ಟ ವೇತನವಿಲ್ಲ ಕಡ್ಡಾಯವಾಗಿ, ಇವರನ್ನೇ ಮುಂದುವರಿಸುವ ಆದೇಶವಿಲ್ಲದಿರುವುದರಿಂದ ಇವರುಗಳು ಅತಂತ್ರ ಸ್ಥಿತಿಯಲ್ಲಿ, ಕಾರ್ಯನಿರ್ವಹಿಸುತ್ತಿದ್ದು, ರೈತ ಅನುವುಗಾರರವೆನ್ನುವ ಹುದ್ದೆ ಸೃಷ್ಟಿಸಿ ಮಾಸಿಕ ನಿರ್ಧಿಷ್ಟ ವೇತನ ನೀಡುವಂತೆ ಸರಕಾರಕ್ಕೆ ಮನವಿ ಮಾಡಿಕೊಂಡಾಗ ಅಂದಿನ ಕೃಷಿ, ಸಚಿವರಾದ ಶಿವಶಂಕರ ರೆಡ್ಡಿರವರು ಹಲವು ಬಾರಿ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳ ಒಪ್ಪಿಗೆ ಪಡೆದು ಪಡೆಯುವ ಪ್ರಕ್ರಿಯೆ ಸರಕಾರ ಬದಲಾವಣೆಯಾದಾಗ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಇದನ್ನು ಬಹುಬೇಗ ಜಾರಿಗೆಗೊಳಿಸುವಂತೆ ಒತ್ತಾಯಿಸಲಾಗುವುದು. 12 ಮಂಗಳವಾರ ಬೆಳಿಗ್ಗೆ 11ಕ್ಕೆ ನಗರದ ಜಗತ ವೃತದಿಂದ ಹತ್ತಿರದಿಂದ ಬೃಹತ ಬೃಹತ್ ಮೆರವಣಿಗೆಯ ಮೂಲಕ ಜಿಲ್ಲಾ ಅಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದೆಂದು ಅವರು ತಿಳಿಸಿದರು.

ಈ ಹೋರಾಟದಲ್ಲಿ ಜಿಲ್ಲೆಯ ರೈತ ಅನುವುಗಾರರು ಭಾಗವಹಿಸುವಂತೆ ಕೋರಲಾಗಿದೆ ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

1 hour ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

1 hour ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

4 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

4 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

4 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

4 hours ago