ಬಿಸಿ ಬಿಸಿ ಸುದ್ದಿ

ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯ್ ಅಧ್ಯಕ್ಷರಾಗಿ ರಾಜು ಕುಂಬಾರ ನೇಮಕ

ಸುರಪುರ: ರಾಜ್ಯದಲ್ಲಿ ಕೆಜೆಯು ಒಂದು ಮಾದರಿ ಪತ್ರಕರ್ತರ ಸಂಘಟನೆಯಾಗಿದ್ದು, ರಾಜ್ಯದಲ್ಲಿನ ಯಾವುದೇ ಪತ್ರಕರ್ತರಿಗೆ ತೊಂದರೆಯದಲ್ಲಿ ತಕ್ಷಣಕ್ಕೆ ಸ್ಪಂಧಿಸಲಿದೆ.ಅದರಂತೆ ಯಾದಗಿರಿ ಜಿಲ್ಲೆಯಲ್ಲಿಯೂ ಸಂಘಟನೆ ಕಾರ್ಯಾರಂಭವಾಗಿದ್ದು ಇಂದು ಸುರಪುರ ತಾಲ್ಲೂಕು ಘಟಕ ರಚನೆ ಮೂಲಕ ವಿಸ್ತಾರಗೊಂಡಿದೆ ಎಂದು ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಜಿಲ್ಲಾ ಅಧ್ಯಕ್ಷ ಡಿ.ಸಿ.ಪಾಟೀಲ ಮಾತನಾಡಿದರು.

ಕೆಜೆಯು ಸುರಪುರ ತಾಲ್ಲೂಕು ಘಟಕ ರಚನೆಗಾಗಿ ನಗರದ ಟೈಲರ್ ಮಂಜಿಲನಲ್ಲಿ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೆ ಸಂಘಟನೆ ಆರಂಭದಲ್ಲಿ ಕೆಲವೇ ಜನರಿಂದ ಆರಂಭಗೊಂಡು ನಂತರದಲ್ಲಿ ದೊಡ್ಡ ಸಂಘಟನೆಗಳಾಗಿ ಬೆಳೆಯುತ್ತವೆ.ಅದರಂತೆ ತಾಲ್ಲೂಕು ಘಟಕಕ್ಕೆ ನೇಮಕಗೊಂಡ ಎಲ್ಲಾ ಪದಾಧಿಕಾರಿಗಳು ಸಂಘಟನೆಗೆ ಯಾವುದೇ ಕೆಟ್ಟ ಹೆಸರು ಬರದಂತೆ ಮಾದರಿ ಸಂಘಟನೆಯನ್ನಾಗಿಸಿಕೊಂಡು ಕೆಲಸ ಮಾಡುವಂತೆ ತಿಳಿಸಿದರು.

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ದೊರೆ ಮಾತನಾಡಿ,ಇಂದು ಪತ್ರಕರ್ತರೂ ಸಂಘಟಿತರಾಗುವುದು ಅವಶ್ಯವಾಗಿದೆ.ಸಮಾಜದಲ್ಲಿ ನಾಲ್ಕನೆ ಅಂಗವಾಗಿ ಕೆಲಸ ಮಾಡುತ್ತಿರುವ ಮಾದ್ಯಮ ಮಿತ್ರರ ಮೇಲಿನ ಹಲ್ಲೆಗಳು ಖಂಡನಿಯ ಅಂತಹ ಹಲ್ಲೆಗಳನ್ನು ಹತ್ತಿಕ್ಕಲು ಎಲ್ಲರೂ ಒಂದಾಗೋಣ ಎಂದರು.ನಂತರ ನೂತನ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆಗೊಳಿಸಿದರು.

ನೂತನ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ರಾಜಶೇಖರ ಕುಂಬಾರ (ರಾಜು ಕುಂಬಾರ) ಮಾತನಾಡಿ,ಪತ್ರಕರ್ತರ ಬೇಡಿಕೆಗಳಿಗಾಗಿ ಹೋರಾಟ ಮಾಡೋಣ.ಅಲ್ಲದೆ ಯುವ ಪತ್ರಕರ್ತರಿಗೆ ಮಾರ್ಗದರ್ಶನಕ್ಕಾಗಿ ಮಾದ್ಯಮ ಕಮ್ಮಟಗಳನ್ನು ಹಾಗು ವಿದ್ಯಾರ್ಥಿಗಳಲ್ಲಿಯೂ ಮಾದ್ಯಮ ರಂಗದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ.ಕೆಜೆಯು ಸಂಘಟನೆಗೆ ಯಾವುದೆ ಚ್ಯೂತಿ ಬರದಂತೆ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲರೂ ಸೇರಿ ತಾಲ್ಲೂಕಿನಲ್ಲಿ ಮಾದರಿ ಸಂಘಟನೆ ಮಾಡೋಣ ಎಂದರು.

ಪದಾಧಿಕಾರಿಗಳು: ರಾಜಶೇಖರ ಕುಂಬಾರ (ರಾಜು ಕುಂಬಾರ) ಅಧ್ಯಕ್ಷ, ರವಿರಾಜ ಕಂದಳ್ಳಿ ಉಪಾಧ್ಯಕ್ಷ,ಪರಶುರಾಮ ಮಲ್ಲಿಬಾವಿ ಪ್ರಧಾನ ಕಾರ್ಯದರ್ಶಿ ಹಾಗು ಮಲ್ಲಿಕಾರ್ಜುನ ತಳ್ಳಳ್ಳಿಯವರನ್ನು ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಲಾಯಿತು. ವೇದಿಕೆ ಮೇಲೆ ರಾಜ್ಯ ಸಮಿತಿ ಸದಸ್ಯ ಪವನ ಕುಲರ್ಣಿ,ಜಿಲ್ಲಾ ಗೌರವಾಧ್ಯಕ್ಷ ವೀರಣ್ಣ ಕಲಕೇರಿ,ಜಿಲ್ಲಾ ಉಪಾಧ್ಯಕ್ಷ ಬಾಲಪ್ಪ ಕುಪ್ಪಿ ಇದ್ದರು.

ಸಭೆಯಲ್ಲಿ ಪತ್ರಕರ್ತರಾದ ಭೀಮಾಶಂಕರ ಹಸನಾಪುರ,ದುರ್ಗಾಪ್ರಸಾದ ಕೆಂಭಾವಿ, ಬಸವರಾಜ ಕಟ್ಟಿಮನಿ,ಬಾಪುಗೌಡ ಮೇಟಿ, ಹೊನ್ನಪ್ಪ ತೇಲ್ಕರ್,ಕಲೀ ಫರೀದಿ,ರಾಘವೇಂದ್ರ ಮಾಸ್ತಾರ್,ಪುರುಷೋತ್ತಮ ದೇವತ್ಕಲ್,ಗಿರೀಶ ಬ್ಯಾಕೋಡ್ ಸೇರಿದಂತೆ ಅನೇಕರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago