ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದಅದ್ವಿತಿಯ 2019 ತಾಂತ್ರಿಕ ಉತ್ಸವ ಕಾರ್ಯಕ್ರಮವನ್ನು ಶಿರಿಶ್ ಪಲ್ಲಿಕೊಂಡ, ಡೈರೆಕ್ಟರ್, ಇಸಿಆಯ್‌ಎಲ್, ಹೈದರಾಬಾದ್ ಮತ್ತು ರವಿಕುಮಾರ ಆರ್. ಸಿನಿಯರ್ ಅಡ್ವೈಸರ್, ಡೆಸ್ಮೆಕ್ ಕಾಂಪೆಟೆನ್ಸಿ ಪೈ.ಲಿ. ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ವನ್ನು ಉದ್ದೇಶಿಸಿ ಶಿರಿಶ್ ಪಲ್ಲಿಕೊಂಡ ಮಾತನಾಡಿ, ಅದ್ವಿತೀಯ ತಾಂತ್ರಿಕ-ಉತ್ಸವನ್ನು ಆಯೋಜಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಾಂತ್ರಿಕ ಶಿಕ್ಷಣದಲ್ಲಿ ಉನ್ನತಿಗೆ ಈ ರೀತಿ ಕಾರ್ಯಕ್ರಮ ಮುಖ್ಯ ಪಾತ್ರವಹಿಸುತ್ತವೆ ಹಾಗೂ ವಿದ್ಯಾರ್ಥಿಗಳೆಲ್ಲರು ತಾಂತ್ರಿಕವಾಗಿ ತಮ್ಮನ್ನು ತೋಡಗಿಸಿಕೋಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕಾರ್ಯದಶಿ ಶರಣಬಸಪ್ಪ ವಿ. ನಿಷ್ಠಿ ಅವರು ಮಾತನಾಡಿ, ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದಿಸಿದರು. ಪ್ರಾಂಶುಪಾಲರಾದ ಡಾ. ರವಿಂದ್ರಕುಮಾರ ಎಮ್ ನಾಗರಾಳೆ ಪ್ರಾಸ್ತಾವಿಕವಾಗಿ ಮಾತನಾಡಿಅದ್ವಿತಿಯ-2019 ತಾಂತ್ರಿಕ-ಉತ್ಸವ ಕಾರ್ಯಕ್ರಮವು ಮೂರುದಿನಗಳಕಾಲ ನಡೆಯಲ್ಲಿದ್ದು ಕಾರ್ಯಕ್ರದ ಸದುಪಯೋಗ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಿದರು.
ಎಮ್ ಎಸ್ ಎಮ್ ಇ (ಮೈಕ್ರೋ ಸ್ಮಾಲ್ ಮಿಡಿಯಮ್ ಎಂಟರಪ್ರೈಸಸ್) ಕುರಿತು ರವಿಕುಮಾರ ಆರ್. ಸಿನಿಯರ್ ಅಡ್ವೈಸರ್, ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪ್ರೋಜೆಕ್ಟ್ ಎಕ್ಸಿಬಿಶನ್ ಕಾರ್ಯಕ್ರಮ ಜರಿಗಿತು. ಕಾರ್ಯಕ್ರಮದಲ್ಲಿ ದೊಡ್ಡಪ್ಪ ನಿಷ್ಠಿ,ಪ್ರಾಂಶುಪಾಲ ರವೀಂದ್ರಕುಮಾರ ನಾಗರಾಳೆ,ಸಾಹೇಬಗೌಡ ಪಾಟೀಲ,ಪ್ರೋ ಸೋಮನಾಥ ಪಾಟೀಲ ಹಾಗು ಕಾಲೇಜಿನ ಎಲ್ಲಾ ವಿಭಾಗ ಮುಖ್ಯಸ್ಥರು, ಬೋದಕ ಬೋದಕೇತರ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…