ಉನ್ನತ ಆಲೋಚನೆ, ದಣಿವರಿಯದ ದುಡಿಮೆ, ಸಾದಾ ಇರುವಿಕೆ, ಭವಿಷ್ಯದ ಕನಸುಗಾರಿಕೆ, ಪಾದರಸದ ಚಟುವಟಿಕೆಗೆ ಹೆಸರಾಗಿದ್ದ ಪ್ರೊ. ಸಿ. ಆರ್. ಬಡಾ (ಶ್ರೀ ಚೆನ್ನಪ್ಪ ರೇವಣಸಿದ್ದಪ್ಪ ಬಡಾ) ಅವರು ಇಂದು ದಿನಾಂಕ: ೧೧.೧೧.೨೦೧೯ ರ ಸೋಮವಾರ ಮಧ್ಯಾಹ್ನ ೩. ೩೦ ಗಂಟೆಗೆ ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆ.
ಅಪರೂಪದ ಶಿಕ್ಷಣ ತಜ್ಞರೂ, ಶಿಸ್ತು ಮತ್ತು ಅಚ್ಚುಕಟ್ಟುತನಕ್ಕೆ ಮಾದರಿಯಾಗಿದ್ದು ಇವರು ; ದಕ್ಷ ಆಡಳಿತಗಾರರಾಗಿ ಹೆಸರು ಮಾಡಿದ್ದರು.
ಆರಂಭದಲ್ಲಿ ಎಚ್.ಕೆ.ಇ. ಸಂಸ್ಥೆಯ ಶ್ರೀ ಪ್ರಭು ಕಾಲೇಜು ಸುರಪುರದಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿಕೊಂಡರು. ಅನಂತರ ಶ್ರೀಮತಿ ವಿಜಿ ಮಹಿಳಾ ಕಾಲೇಜಿಗೆ ವರ್ಗವಾಗಿ ಬಂದರು. ಮುಂದೆ
ಎಚ್. ಕೆ. ಇ. ಸಂಸ್ಥೆಯ ಶ್ರೀ ಎ. ವಿ. ಪಾಟೀಲ ಡಿಗ್ರಿ ಕಾಲೇಜು, ಆಳಂದ, ಶ್ರೀಮತಿ ಸಿ.ಬಿ.ಪಾಟೀಲ ಡಿಗ್ರಿ ಕಾಲೇಜು, ಚಿಂಚೋಳಿ, ಮ್ಯಾನೇಜ್ ಮೆಂಟ್ ಕಾಲೇಜು, ಕಲಬುರ್ಗಿ ಹಾಗೂ ಶ್ರೀಮತಿ ವಿಜಿ ಮಹಿಳಾ ಕಾಲೇಜುಗಳ ಪ್ರಾಚಾರ್ಯರಾಗಿ ಅವರು ಸಲ್ಲಿಸಿದ ಸೇವೆಯು ಅನನ್ಯವಾದುದು.
ಶಿಕ್ಷಣದ ಮೂಲಕ ದೇಶವನ್ನು ಕಟ್ಟಿದ ಶಿಲ್ಪಿಗಳಲ್ಲಿ ಒಬ್ಬರಾಗಿದ್ದ ಪ್ರೊ.ಸಿ.ಆರ್.ಬಡಾ ಅವರು
ಅಪಾರವಾದ ಅನುಭವ, ಪ್ರಬಲವಾದ ಇಚ್ಛಾಶಕ್ತಿ, ಅದಮ್ಯವಾದ ಉತ್ಸಾಹ ಅಮಿತವಾದ ಕಾರ್ಯತತ್ಪರತೆಯನ್ನು ಮೈಗೂಡಿಸಿಕೊಂಡಿದ್ದರು. ಬೆಳೆಯಬಲ್ಲ ಯುವಸಮುದಾಯಕ್ಕೆ ಯಾವತ್ತೂ ಮಾರ್ಗದರ್ಶಕ ಮಾದರಿಯಾಗಿದ್ದರು.
ಅವರಿಗೆ ಗೌರವ ಮತ್ತು ಅಭಿಮಾನಪೂರ್ವಕವಾದ ಅಶ್ರುತರ್ಪಣ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…