ಕಲಬುರಗಿ: ಇಲ್ಲಿಯ ಬಿದ್ದಾಪುರ ಕಾಲೋನಿಯ ಜಾಧವ ಲೇಔಟ್, ಶಿವನಗರಗಳಲ್ಲಿ ನಿರಂತರವಾಗಿ ಕಳ್ಳತನಗಳು ನಡೆಯುತ್ತಿರುವ ವಿಷಯವನ್ನು ಅರಿತುಕೊಂಡು ಪೊಲೀಸ್ ಆಯುಕ್ತರಾದ ಎಂ.ಎನ್.ನಾಗರಾಜ ಅವರು ಸಂಬಂಧಪಟ್ಟ ಪೊಲೀಸ್ ಠಾಣೆಯ ಪಿಐ ಅವರಿಗೆ ಔಟ್ ಪೊಲೀಸ್ ಠಾಣೆ ಸ್ಥಾಪನೆಗೆ ಸೂಚನೆ ನೀಡಿದರು.
ಬಿದ್ದಾಪುರ ಕಾಲೋನಿ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೆಲ್ಲರೂ ಸೇರಿಕೊಂಡು ಪೊಲೀಸ್ ಆಯುಕ್ತರ ಕಾರ್ಯಾಲಯಕ್ಕೆ ಸೋಮವಾರ ಇಂದು ತೆರಳಿ ಮನವಿ ಪತ್ರ ಸಲ್ಲಿಸಿದ ನಂತರ ಗ್ರಾಮೀಣ ಪೊಲೀಸ ಠಾಣೆಯ ಪಿಐ ಸೋಮಲಿಂಗ ಕಿರೆದಳ್ಳಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕಳ್ಳತನ ತಡೆ ನಿಯಂತ್ರಣಕ್ಕೆ ಹೆಚ್ಚು ಗಸ್ತು ಹಾಕಿ, ಸಾಧ್ಯವಾದರೆ ಹನುಮಾನ ಗುಡಿ ಬಳಿ ಔಟ್ ಪೊಲೀಸ ಠಾಣೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಹಾಡಹಗಲೇ ಕಳ್ಳತನಗಳು ನಡೆದಿರುವ ಸಂದರ್ಭದಲ್ಲಿ ನಿವಾಸಿಗಳು ಮನೆಗೆ ಕೀಲಿ ಹಾಕಲು ಹೆದರುತ್ತಿದ್ದಾರೆ. ಇನ್ನೂ ರಾತ್ರಿ ಹೊತ್ತು ಕಳ್ಳರ ಹಾವಳಿಯಿಂದ ಎಚ್ಚೆತ್ತುಕೊಂಡು ಕಾವಲು ಕಾಯುವಂತಾಗಿದೆ. ಇದರಿಂದ ಬಿದ್ದಾಪುರ ಕಾಲೋನಿ ನಿವಾಸಿಗಳಿಗೆ ಕಳ್ಳತನದಿಂದ ನೆಮ್ಮದಿ ಹಾಳಾಗಿದೆ. ಬಡಾವಣೆಯಲ್ಲಿ ಹೆಚ್ಚು ಜನ ಪೊಲೀಸರ ಗಸ್ತು ಹಾಕುವಂತೆ ಅನೇಕ ಸಲ ಮನವಿ ಮಾಡಲಾಗಿದ್ದರೂ, ಕಳ್ಳತನ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. ಬಿದ್ದಾಪುರ ಕಾಲೋನಿಯ ಒಂಬತ್ತನೆ ತರಗತಿಯ ವಿದ್ಯಾರ್ಥಿ ಬಸವರಾಜ ಎಂಬಾತನನ್ನು ಕೆಲ ದಿನಗಳ ಹಿಂದೆ ಅಪಹರಣ ನಡೆಸಿದ್ದರು. ಅಪಹರಣಕ್ಕೊಳಗಾದ ವಿದ್ಯಾರ್ಥಿ ತುಮಕೂರಲ್ಲಿ ಪತ್ತೆಯಾಗಿದ್ದನ್ನು ಮನವಿಯಲ್ಲಿ ನಿವಾಸಿಗಳು ಸ್ಮರಿಸಿದ್ದಾರೆ.
ಬಿದ್ದಾಪುರ ಬಡವಾಣೆಯ ನಾಗರಿಕರು ದೂರನ್ನು ಸಲ್ಲಿಸಬೇಕಾದರೆ, ದೂರದ ಗಂಜ್ ಪ್ರದೇಶದ ಎಪಿಎಂಸಿ ಬಳಿಯ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಬೇಕಾಗುತ್ತದೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿದ್ದಾಪುರ ಕಾಲೋನಿ ಬರುತ್ತಿರುವುದರಿಂದ ನಿವಾಸಿಗಳಿಗೆ ಮತ್ತು ಪೊಲೀಸರಿಗೂ ಕಷ್ಟದ ಕೆಲಸವಾಗಿದೆ. ಕೂಡಲೇ ಔಟ್ ಪೊಲೀಸ್ ಠಾಣೆ ಸ್ಥಾಪನೆ ಮಾಡುವುದರಿಂದ ಕಳ್ಳತನ ತಡೆ ಸಾಧ್ಯವಾಗಲಿದೆ ಎಂದು ನಿವಾಸಿಗಳು ಮನವಿ ಪತ್ರದಲ್ಲಿ ಹೇಳಿದ್ದಾರೆ.
ಬಿದ್ದಾಪುರ ಕಾಲೋನಿ ಹನುಮಾನ ಗುಡಿ ಮುಖ್ಯರಸ್ತೆ ಬಳಿ ಬಾಡಿಗೆಗೆ ಯಾರಾದರೂ ಮನೆ ಅಥವಾ ಕಟ್ಟಡ ಕೊಟ್ಟರೆ ಔಟ್ ಪೊಲೀಸ್ ಠಾಣೆಗೆ ಅನುಕೂಲವಾಗಲಿದೆ ಎಂದು ಗ್ರಾಮೀಣ ಪೊಲೀಸ ಠಾಣೆಯ ಪಿಐ ಸೋಮಲಿಂಗ ಅವರು ಕೋರಿದ್ದಾರೆ. ಸಂಘದ ಅಧ್ಯಕ್ಷ ಸಿ.ಎನ್.ಬಾಬಳಗಾಂವ, ಶಿವಶರಣಪ್ಪ ಕರೂಟಿ, ಈರಣ್ಣ ಪಾಟೀಲ, ವಿಜಯಕುಮಾರ ಡಿ, ಬಸವರಾಜ, ಕಲಶೆಟ್ಟಿ, ಸತೀಶ ಪತ್ತಾರ, ಕುಲಕರ್ಣಿ ಮುಂತಾದವರು ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…