ವಾಡಿ: ಶಿಕ್ಷಣ ಇಲಾಖೆಯಿಂದ ಪರವಾನಿಗೆ ಪಡೆಯದೆ ಕಳೆದ ಏಳು ವರ್ಷಗಳಿಂದ ಎಲ್‍ಕೆಜಿಯಿಂದ ಐದನೇ ತರಗತಿ ವರೆಗೆ ಅನಧಿಕೃತವಾಗಿ ನಡೆಸಲಾಗುತ್ತಿದ್ದ ನಾಲವಾರ ವಲಯದ ಕುಂಬಾರಹಳ್ಳಿ ಗ್ರಾಮದ ಶಾರದಾ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಗೆ ಕ್ಷೇತ್ರಶಿಕ್ಷಣಾಧಿಕಾರಿ ಶಂಕ್ರೆಮ್ಮಾ ಢವಳಗಿ ಅವರು ಮಂಗಳವಾರ ಬೀಗ ಜಡಿದು ಕಾನೂನು ಪಾಲಿಸಿದ ಪ್ರಸಂಗ ನಡೆಯಿತು.
ನಾಲವಾರ ವಲಯದ ಸಿಆರ್‍ಪಿ, ಬಿಆರ್‍ಪಿ ಹಾಗೂ ಪೊಲೀಸರ ಸಮ್ಮುಖದಲ್ಲಿ ಕುಂಬಾರಹಳ್ಳಿ ಗ್ರಾಮದ ಶಾರದಾ ಎಂಬ ಹೆಸರಿನ ಖಾಸಗಿ ಶಾಲೆಯ ಮೈದಾನದಲ್ಲಿ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಸದಸ್ಯರ ಸಭೆ ನಡೆಸಿದ ಬಿಇಒ ಶಂಕ್ರೆಮ್ಮಾ ಢವಳಗಿ, ಶಿಕ್ಷಣ ಇಲಾಖೆಯಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಪಿಯುಸಿ, ಎಸ್‍ಎಸ್‍ಎಲ್‍ಸಿ ಓದಿದವರನ್ನು ಶಿಕ್ಷಕರನ್ನಾಗಿ ನೇಮಿಸಿಕೊಂಡು ಶಾಲೆ ನಡೆಸುತ್ತಿರುವುದು ಅಪರಾಧವಾಗಿದೆ. ಶಾಲೆಯ ಪರವಾನಿಗೆ ಪಡೆದುಕೊಳ್ಳುವಂತೆ ಪ್ರತಿ ವರ್ಷವೂ ತಿಳಿಸಲಾಗುತ್ತಿದೆ. ಆದರೂ ನಿರ್ಲಕ್ಷ್ಯ ವಹಿಸುವ ಮೂಲಕ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ್ದೀರಿ. ಅಧಿಕೃತ ದಾಖಲಾತಿಗಳನ್ನು ಹೊಂದುವಂತೆ ಸಂಸ್ಥೆಗೆ ಒಟ್ಟು ಮೂರು ನೊಟೀಸ್ ನೀಡಲಾಗಿದೆ. ಆದರೂ ಶಾಲಾ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿಲ್ಲ ಎಂದು ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಣಮಂತ ಅವರನ್ನು ತರಾಟೆಗೆ ತೆಗೆದುಕೊಂಡರು.
“ಅನಧಿಕೃತ ಶಾಲೆಗೆ ಬೀಗ ಹಾಕಿದ್ದರ ಪರಿಣಾಮ ಅತಂತ್ರಗೊಂಡ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಲು ಬಿಡುವುದಿಲ್ಲ. ಶಾರದಾ ಶಾಲೆಯ 130 ಮಕ್ಕಳಿಗೆ ಸಮೀಪದ ಶಾಲೆಗಳಿಗೆ ಸೇರಿಸುವ ಜವಾಬ್ದಾರಿ ನನಗಿದೆ. ಪೋಷಕರು ಬಯಸುವ ಸಮೀಪದ ಸರಕಾರಿ ಶಾಲೆಗೆ ಅಥವ ಅಧಿಕೃತ ಖಾಸಗಿ ಶಾಲೆಗಳಲ್ಲಿ ಮಧ್ಯಂತರ ಪ್ರವೇಶಾತಿ ಪಡೆಯಲು ಅವಕಾಶ ಒದಗಿಸಲಾಗುವುದು. ಮಕ್ಕಳ ಹಿಂದಿನ ಶಾಲಾ ದಾಖಲಾತಿಗಳನ್ನು ಬಿಇಒ ಕಚೇರಿಯಿಂದ ಒದಗಿಸಲು ಅನುಕೂಲ ಮಾಡಿಕೊಡುತ್ತೇವೆ. ಯಾವೂದೇ ಮಗು ಶಾಲೆಯಿಂದ ಹೊರಗುಳಿಯದಂತೆ ಕ್ರಮಕೈಗೊಳ್ಳಲಾಗುವುದು.” – ಶಂಕ್ರೆಮ್ಮಾ ಢವಳಗಿ. ಕ್ಷೇತ್ರಶಿಕ್ಷಣಾಧಿಕಾರಿ ಚಿತ್ತಾಪುರ
ಕಣ್ಣೀರಿಟ್ಟ ಮಕ್ಕಳು: ಪೊಲೀಸರು ಮತ್ತು ಅಧಿಕಾರಿಗಳು ಏಕಾಏಕಿ ತಾವು ಅಕ್ಷರಾಭ್ಯಾಸ ಮಾಡುತ್ತಿದ್ದ ಶಾಲೆಗೆ ಬಂದು ತರಗತಿ ಕೋಣೆಗಳಿಗೆ ಬೀಗ ಹಾಕುತ್ತಿದ್ದ ದೃಶ್ಯ ಕಂಡು ಹೌಹಾರಿದ ಅಮಾಯಕ ವಿದ್ಯಾರ್ಥಿಗಳು, ಇನ್ನುಮುಂದೆ ಶಾಲೆ ತೆರೆಯುವುದಿಲ್ಲ. ಶಿಕ್ಷಕರು ಬರುವುದಿಲ್ಲ ಎಂಬ ವಿಷಯ ತಿಳಿದು ಮಕ್ಕಳು ಪೋಷಕರ ಸಭೆಯಲ್ಲಿಯೆ ಸಾಮೂಹಿಕವಾಗಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು. ಅನಧಿಕೃತ ಶಾಲೆಗೆ ಮಕ್ಕಳನ್ನು ಸೇರಿಸಿ ಹಣ ಸುರಿದ ಪೋಷಕರ ಮುಖದಲ್ಲಿ ತಪಿತಸ್ಥ ಭಾವ ಮೂಡಿತ್ತು. ಶಾಲಾ ಆಡಳಿತ ಮಂಡಳಿಯ ಮೋಸದಿಂದ ಹಾಗೂ ಶಾಲೆಯ ವಾಸ್ತವ ಸ್ಥಿತಿಗತಿ ತಿಳಿಯದೆ ಮಕ್ಕಳನ್ನು ಸೇರಿಸಿದ ಪೋಷಕರ ಎಡವಟ್ಟಿನಿಂದ ಒಟ್ಟು 130 ವಿದ್ಯಾರ್ಥಿಗಳ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ.
ಕಲಬುರಗಿ ಸಬ್ಜಕ್ಟ್ ಇನ್ಸ್‍ಪೆಕ್ಟರ್ ಹೃಶಿಕೇಶ, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಅಕ್ಷರ ದಾಸೋಹ ತಾಲೂಕು ನಿರ್ದೇಶಕ ಪ್ರಕಾಶ ನಾಯ್ಕೋಡಿ, ನಾಲವಾರ ವಲಯ ಶಿಕ್ಷಣ ಸಂಯೋಜಕ ಸಂತೋಷಕುಮಾರ, ನಾಲವಾರ ವಲಯ ಬಿಆರ್‍ಪಿ ದತ್ತಪ್ಪಾ ಡೊಂಬಳೆ, ಸಿಆರ್‍ಪಿ ವೆಂಕಟೇಶ, ಸರಕಾರಿ ಶಾಲೆಯ ಮುಖ್ಯಶಿಕ್ಷಕ ಬುದ್ದಿವಂತಪ್ಪ ಈ ಸಂದರ್ಭದಲ್ಲಿ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…