ಕಲಬುರಗಿ: ಅತ್ತುನ್ನತ ಸಾಧನೆ ಮಾಡಿದವರಿಗೆ ಯಾವುದೇ ಜಾತಿˌ ಮತˌ ಕುಲಗಳಿಲ್ಲ. ಜ್ಞಾನವೊಂದೇ ಅವರನ್ನು ಗುರುತಿಸುವ ಸಾಧನವಾಗಿದೆ ಎಂದು ವಿಜಯಪುರದ ಹಿರಿಯ ಸಾಹಿತಿ ಡಾ. ಕೃಷ್ಣಾ ಕೊಲ್ಹಾರ ಕುಲಕರ್ಣಿ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಶಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ಡ ಕನಕದಾಸರ 537ನೇ ಜಯಂತ್ಶುತ್ಸವ ಕಾರ್ಯಕ್ರಮದಲ್ಲಿ ಮುಖ್ಶ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಜ್ಞಾನ ಎಂಬುವುದು ಯಾವುದೇ ಶ್ರೇಣಿಕೃತ ಜಾತಿಗೆ ಸೀಮಿತವಾಗಿಲ್ಲ ಎಂಬುವುದನ್ನು ತೋರಿಸಿಕೊಟ್ಟವರು ಕನಕದಾಸರು. ವೇದˌ ಉಪನಿಷತ್ತುˌ ಭಾಗವತಗಳಿಂದ ಮಾತ್ರ ದೇವರು ಒಲಿಯುವುದಿಲ್ಲˌ ಭಕ್ತಿಗೂ ದೇವರು ಒಲಿಯುತ್ತಾನೆ ಎಂದವರು ಕನಕರು. ಭಕ್ತಿಯೊಂದಿದ್ದರೆ ಸಾಕು. ದೇವರಿಗೆ ಬೇಡಿಕೊಳ್ಳುವ ಸಂದರ್ಭ ಬಂದಾಗ ನನಗೆ ಜ್ಞಾನ ಮತ್ತು ಭಕ್ತಿಗಳು ಮಾತ್ರ ಸಾಕು. ಜ್ಞಾನˌ ಭಕ್ತಿ ಇದ್ದರೆ ವೈರಾಗ್ಶ ತಾನಾಗೆ ಬರುತ್ತದೆ. ನನಗೆ ನಿಂದಿಸಿದವರಿಗೆ ಹಣˌ ಹೊನ್ನುˌ ಮಣ್ಣು ಮತ್ತು ಮಕ್ಕಳು ಕೊಟ್ಟು ಕಾಪಾಡು ಎಂದು ಬಯಸಿದ ಸಂತ ಕನಕದಾಸರಾಗಿದ್ದಾರೆ. ಕಲಿಯುಗದ ಬಗ್ಗೆ 5 ನೂರು ವರ್ಷಗಳ ಹಿಂದೆಯೇ ಮಾತನಾಡಿದ ಕನಕದಾಸˌ ಹರಿಹರ ಪೂಜೆಗಳು ಹಗರಣಗಳಾಗುತ್ತವೆ. ಸುಳ್ಳರುˌ ಕಳ್ಳರು ಸಂಪತ್ತು ಸಂಗ್ರಹಿಸಿ ಮೆರೆಯುತ್ತಾರೆ. ನುಡಿಯುವ ಕಾರ್ಯಗಳು ನಡೆಯುವುದಿಲ್ಲ ಎಂದು ಮೊದಲೇ ಹೇಳಿದ್ದರು. ನಿಂದಿಸಿದವರಿಗೆ ಹಾಲುˌ ತುಪ್ಪˌ ಸಕ್ಕರೆಯ ಊಟ ಸಿಗಲಿ ಎಂದು ಹರಿಸುವ ಗುಣ ಕನಕನಲ್ಲಿತ್ತು ಎಂದರು.
ನಂತರ ಮಾತನಾಡಿದ ಕುಲಪತಿ ಪ್ರೊ.ಪರಿಮಳಾ ಅಂಬೇಕರ್ˌ ಕಬೀರದಾಸರ ಹತ್ತಿರದ ವ್ಶಕ್ತಿ ಕನಕದಾಸರಾಗಿದ್ದಾರೆ. ಜಾತಿಯನ್ನು ಮೀರಿದ ಅತ್ಶಂತ ಸಂವೇಧನಾಶೀಲ ಕವಿ. ಸ್ರಜನರಿಗೆ ಕುಲವೇ ಇಲ್ಲ ಎಂಬುವುದನ್ನು ತೋರಿಸಿಕೊಟ್ಟವರು ಕನಕದಾಸರಾಗಿದ್ದಾರೆ ಎಂದರು.
ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಅಧ್ಶಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ ಪೋತೆˌ ಸ್ವಾತಂತ್ರಭಾತ್ರತ್ವ ಮತ್ತು ಸಮಾನತೆಯನ್ನು ನಾವು ಕನಕದಾಸರಿಂದ ಕಲಿಯಬೇಕಾಗಿದೆ. ಡಾ.ಅಂಬೇಡ್ಕರ್ ಮತ್ತು ಕನಕದಾಸ ಇಬ್ಬರೂ ಸಹ ಯೋಧರ ಕುಟುಂಬದಿಂದ ಬಂದವರು ಎಂಬುವುದನ್ನು ಮರೆಯಬಾರದು. ಈ ಇಬ್ಬರು ಮಹನಿಯರು ಜಾತಿˌ ಶೋಷಣಿಯ ವಿರುದ್ಧ ಧ್ಶನಿ ಎತ್ತಿದ್ದಾರೆ ಎಂದರು.
ಕನಕದಾಸ ಒಬ್ಬ ಕವಿˌ ಸಾಮಾಜಿಕ ಚಿಂತಕ ಎನ್ನುವುದನ್ನು ನಾವು ಮರೆಯಬಾರದು. ಸಮಾಜವನ್ನು ಸರಿ ದಾರಿಗೆ ತರಲು ತಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದಾರೆ. ಇವರ ಆದರ್ಶಮಯ ಬದುಕು ನಮ್ಮೆಲ್ಲರಿಗೂ ಸ್ಪೂರ್ತಿಯಾಗಬೇಕು ಎಂದರು. ನಂತರ ಅತಿಥಿಗಳಾದ ಡಾ.ಚಂದ್ರಕಲಾ ಬಿದರಿ ಮಾತನಾಡಿದರು. ಕುಲಸಚಿವ ಪ್ರೊ.ಸಿ.ಸೋಮಶೇಖರˌ ಮೌಲ್ಶಮಾಪನ ಕುಲಸಚಿವ ಪ್ರೊ.ಸಂಜೀವಕುಮಾರ ಕೆ.ಎಂˌˌ ವಿತ್ತಾಧಿಕಾರಿ ಪ್ರೊ.ಬಿ.ವಿಜಯˌ ಪ್ರೊ.ಎಂ.ಎಸ್.ಪಾಸೋಡಿˌ ಪತ್ರಿಕೋದ್ಶಮ ವಿಭಾಗದ ಮುಖ್ಶಸ್ಥ ಪ್ರೊ.ಡಿ.ಬಿ. ಪಾಟೀಲ್ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…