ಕಲಬುರಗಿ: ಎರಡು ಲಕ್ಷ ರೂ.ಗಳಲ್ಲಿ ಕಾರು ಕೊಡುವುದಾಗಿ ನಂಬಿಸಿ ಹಣ ಪಡೆದುಕೊಂಡು ಕಾರು ಕೊಡದೇ ಸುಮಾರು ೬೦ ಕೋಟಿ ರೂ.ಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಯೆಲ್ಲೋ ಎಕ್ಸ್‌ಪ್ರೆಸ್ ಲಾಜಿಸ್ಟಿಕ್ ಲಿಮಿಟೆಡ್ ವಂಚಿಸಿದ್ದು, ಕೂಡಲೇ ತಾವು ಹೂಡಿದ ಹಣವನ್ನು ಮರಳಿ ಕೊಡಿಸಲು ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳಬೇಕೆಂದು ವಂಚನೆಗೆ ಒಳಗಾದ ಶೇರುದಾರ ಹಾಗೂ ನಗರದ ಹಳೆ ರಾಘವೇಂದ್ರ ಕಾಲೋನಿಯ ಒಂಟಿಖಾನಿ ನಿವಾಸಿ ವೆಂಕಟೇಶಕುಮಾರ್ ಕುಲಕರ್ಣಿ ಅವರು ಇಲ್ಲಿ ಆಗ್ರಹಿಸಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಂದಾಯ ಸಚಿವ ಆರ್. ಅಶೋಕ್ ಅವರು ಐಎಂಎ ರೀತಿಯಲ್ಲಿ ದೊಡ್ಡ ಹಗರಣವನ್ನು ಕಂಪೆನಿ ಮಾಡಿದೆ ಎಂದು ಹೇಳಿ ಸಿಐಡಿ ತನಿಖೆಗೆ ಒಪ್ಪಿಸಿದ್ದಾರೆ. ಈಗಾಗಲೇ ತನಿಖೆ ಆರಂಭವಾಗಿದೆ. ಆದಾಗ್ಯೂ, ಶೇರುದಾರರಿಗೆ ಸರ್ಕಾರದಿಂದಾಗಲೀ, ಕಂಪೆನಿಯಿಂದಾಗಲಿ ತನಿಖೆಯ ಮಾಹಿತಿ ಸಿಗುತ್ತಿಲ್ಲ. ಕಂಪೆನಿಯವರೂ ಸಹ ಯಾರ ಕೈಗೂ ಸಿಗುತ್ತಿಲ್ಲ. ಕೂಡಲೇ ಶೇರುದಾರರ ಹಣವನು ಮರಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಖಚಿತ ಮೂಲಗಳಿಂದ ಕಂಪೆನಿಯ ಬ್ಯಾಂಕ್ ಖಾತೆಗಳನ್ನು ಕಳೆದ ಸೆಪ್ಟೆಂಬರ್ ೨೬ರಂದು ಸರ್ಕಾರ ಜಪ್ತಿ ಮಾಡಿಕೊಳ್ಳುವ ಮೊದಲೇ ಹಲವಾರು ಜನರು ಹಣ ವಾಪಾಸ್ಸು ಪಡೆದಿದ್ದಾರೆ. ಮಾಜಿ ಪೋಲಿಸ್ ಅಧಿಕಾರಿಗಳೂ ಸಹ ಹೂಡಿಕೆ ಮಾಡಿದ್ದು, ಕೆಲವರು ತಮ್ಮ ಹಣವನ್ನು ಮರಳಿ ಪಡೆದುಕೊಂಡಿದ್ದಾರೆ. ಪ್ರಭಾವಿ ವ್ಯಕ್ತಿಗಳ ಹೊರತಾಗಿ ಸಾಮಾನ್ಯರ ಹಣ ಇನ್ನೂ ಹಾಗೆಯೇ ಇದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಿಂದ ಸುಮಾರು ತಲಾ ೨ರಿಂದ ಮೂರು ಕೋಟಿ ರೂ.ಗಳನ್ನು, ಅಂದರೆ ಸುಮಾರು ೬೦ ಕೋಟಿ ರೂ.ಗಳನ್ನು ಸಾಮಾನ್ಯ ಜನರಿಂದ ಹೂಡಿಕೆ ಮಾಡಿಕೊಳ್ಳಲಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಸುಮಾರು ೪೫ ಜನರಿಂದ ೨.೧೦ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೂ ದೂರು ಸಲ್ಲಿಸುವುದಾಗಿ ಅವರು ಹೇಳಿದರು.
ಕಂಪೆನಿಯು ಪ್ರತಿ ಶೇರುದಾರರಿಂದ ಪ್ರತಿ ಕಾರಿಗೆ ೨ ಲಕ್ಷ ರೂ.ಗಳಂತೆ ಪಡೆದು ಉಳಿದ ಕಾರಿನ ಮೊತ್ತವನ್ನು ಬ್ಯಾಂಕ್, ಫೈನಾನ್ಸ್ ವತಿಯಿಂದ ಸಾಲ ಪಡೆದು ಶೇರುದಾರರಿಗೆ ಆರ್‌ಸಿ ಮಾಡಿಸಿ ಅದನ್ನು ಲೀಜ್‌ಗೆ ಪಡೆದು ಶೇರುದಾರರಿಗೆ ತಿಂಗಳಿಗೆ ೯೮೦೦ರೂ.ಗಳಂತೆ (೨೦೦ರೂ.ಗಳ ಟಿಡಿಎಸ್ ಕಡಿತಗೊಳಿಸಿ) ಅವರ ಖಾತೆಗೆ ಜಮಾ ಮಾಡುವುದಾಗಿ ಹೇಳಿ ಪ್ರತಿ ಶೇರುದಾರರಿಂದ ಪ್ರತಿ ಕಾರಿಗೆ ೨ ಲಕ್ಷ ರೂ.ಗಳಂತೆ ಚೆಕ್, ಆರ್‌ಟಿಜಿಎಸ್, ನಗದು ಮೂಲಕ ಕಂಪೆನಿಯ ಖಾತೆಗೆ ಜಮೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಗಮೇಶ್ ಜೊತೆಪ್ಪ, ಅಬ್ದುಲ್ ನಹೀಮ್ ಖಲೀಪ್, ಸತೀಶ್ ಜಾನೆ, ಯಾಕೂಬ್ ಅಲಿ ಮುಂತಾದವರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…