ಚಿಂಚೋಳಿ ಉಪಚುನಾವಣೆ: ಅವಿನಾಶ ಜಾಧವ್ ಗೆ ಒಲಿದ ಕಮಲ, ಕೈ ಹಿಡಿತಾರ ರಾಠೋಡ್!

ಕಲಬುರಗಿ: ಇತ್ತೀಚಿಗಷ್ಟೆ ಲೋಕ ಸಭೆ ಚುನಾವಣೆ ಮುಗಿಸಿ ಸಮಾಧನ ಗೊಂಡ ರಾಜಕೀಯ ಪಕ್ಷಗಳ ಮುಖಂಡರಿಗೆ ಚುನಾವಣೆ ಆಯೋಗ ತೆರವಾದ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿ, ಪಕ್ಷಗಳಲ್ಲಿ ಸಂಚಲನ ಮೂಡಿಸಿದೆ. ಲೋಕ ಸಭೆ ಚುನಾವಣೆಯ ಮತದಾನ ಮುಗಿದು ಮೂರದಿನಗಳಿಂದ ಕಂದಗೊಳ ಹಾಗೂ ಚಿಂಚೋಳಿ ಕ್ಷೇತ್ರಗಳ ಉಪಚುನಾವಣೆಗಳ ಕುರಿತು ಎರಡು ಕ್ಷೇತ್ರಗಳ ಅಭ್ಯರ್ಥಿಗಳು ಯಾರು ಎಂಬುದು ಜನರಲ್ಲಿ ಬಾರಿ ಕುತುಹಲ ಇತ್ತು. ಮತದಾರರ ಎಲ್ಲಾ ಕುತುಗಲಗಳಿಗೆ ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಜನರ ತೀರ್ಮಾನಕ್ಕೆ ಕಳುಹಿಸುವ ಹಂತದಲ್ಲಿ ಇದ್ದಾರೆ.

ಚಿಂಚೋಳಿ ಕ್ಷೇತ್ರ ಭಾರಿ ಕುತುಹಲ ಕ್ಷೇತ್ರವಾಗಿತ್ತು, ಡಾ. ಉಮೇಶ ಜಾಧವ್ ಕಾಂಗ್ರೆಸ್ ಪಕ್ಷದಲ್ಲಿ ಖರ್ಗೆ ಅವರು ಕುಟುಂಬ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪಕ್ಷ ತೊರೆದು ಬಿಜೆಪಿಗೆ ಜಂಪಾಗಿದರು. ಡಾ. ಜಾಧವ ಬಿಜೆಪಿಯಿಂದ ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ನ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಪ್ರಬಲ ಅಭ್ಯರ್ಥಿಗಿ ಕಣಕಿಳಿದ್ದು ಇಲಿ ನೋಡಬಹುದು. ಆದರೆ ಜಾಧವ ಹಲವು ಅಡೆತಡೆಗಳ ಮಧ್ಯೆ ಕಾಂಗ್ರೆಸ್ ತೊರೆದಿರುವುದರಿಂದ ಚಿಂಚೋಳಿ ಕ್ಷೇತ್ರದ ಉಪಚುನಾವಣೆ ಕುರಿತು ಮತದಾರರಲ್ಲಿ ಭಾರಿ ಕ್ರೇಜ್ ಇದೆ. ಈ ಕಾರಣದಿಂದ ಉಮೇಶ್ ಜಾಧವ  ಅವರ ರಾಜಕೀಯ ನಡೆಗಳ ಕುರಿತು ಮತದಾರರ ಕಣ್ಣು ಇಟ್ಟಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಚಿಂಚೋಳಿ ಕ್ಷೇತ್ರದಿಂದ ಟಿಕೆಟ್ ಪಡೆಯಲು ಪಕ್ಷದ ಪ್ರಮುಖರು ಅಂಕಾಕ್ಷಿಗಳ ಮಧ್ಯೆ, ಡಾ. ಉಮೇಶ್ ಜಾಧವ್ ಅವರು ತಮ್ಮ ಮಗನಿಗೆ ಚಿಂಚೋಳಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕುಡಿಸುವುರಲ್ಲಿ ಯಸಶ್ವಿಯಾಗಿದ್ದಾರೆ. ಬಿಜೆಪಿ ಜಾಧವ ಅವರ ಪುತ್ರ ಅವಿನಾಶ ಜಾಧವ್ ಗೆ ಚಿಂಚೋಳಿ ಕ್ಷೇತ್ರದ ಉಪಚುನಾವಣೆಗೆ ತಮ್ಮ ಅಭ್ಯರ್ಥಿಯಾಗಿ ಘೋಷಿಸಿ, ಕುಟುಂಬ ರಾಜಕಾರಣ ಜೈ ಎಂದಿದೆ.

ಒಂದೆಡೆ ಕಾಂಗ್ರೆಸ್ ನಲ್ಲಿ ಜೆಡಿಎಸ್ ನ ರೇವೂರನಾಯಕ ಬೆಳಮಗಿ ಸೇರಿದಂತೆ ಕಾಂಗ್ರೆಸ್ ನಾಯಕರಲ್ಲಿ ಮಾಜಿ ಸಚಿವ ಬಾಬುರಾವ ಚವ್ಹಾಣ ಚಿಂಚೋಳಿ ಉಪಚುನಾವಣೆಯ ಟಿಕೆಟ್ ಗೆ ಭಾರಿ ಪೈಪೂಟಿ ನಡೆಸಿದ್ದು, ಆದರೆ ಬಿಜೆಪಿ ಯಾವ ಸಮುದಾಯದ ಯಾವು ಅಭ್ಯರ್ಥಿಗೆ ಟಿಕೆಟ್ ನೀಡುತ್ತೆ ಎಂಬುದನ್ನು ಖಚಿತ ಪಡೆಸಿಕೊಂಡು ತಮ್ಮ ಅಭ್ಯರ್ಥಿ ಘೋಷಿಸುತ್ತದೆ ಎಂದು ಕೇಳಿ ಬಂದಿತ್ತು.

ಈ ಮದ್ಯೆ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಬಾಬುರಾವ ಚವ್ಹಾಣ ಅವರು ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ಅವರು ಈಚೆಗೆ ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು.

ಆದರೆ ಸುಭಾಷ ರಾಠೋಡ್ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ ಎಂದು ಬಲ್ಲ ಮೂಲಗಳಿಂದ ಕೇಳಿಬರುತ್ತಿದ್ದು, ಇನ್ನೂ ತಡ ರಾತ್ರಿ ಪಕ್ಷದಿಂದ ಅಧಿಕೃತವಾಗಿ ಅಂತಿಮ ಹೆಸರು ಘೋಷಣೆ ಬಾಕಿ ಇದೆ.

ರಾಷ್ಟ್ರೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಸಮುದಾಯಕ್ಕೆ ತಕ್ಕಂತೆ  ಘೋಷಿಸಿದ್ದರು ಬಹುಸಂಖ್ಯಾತ ಲಿಂಗಾಯತ ಸಮುದಾಯದವರು ಈ ಕ್ಷೇತ್ರದಲ್ಲಿ ಹೆಚ್ಷಿದ್ದು, ಎಸ್.ಸಿ., ಎಸ್ಟಿ ಮತಗಳೇ ನಿರ್ಣಾಯಕ ಆಗಲಿವೆ.

ಟಿಕೆಟ್ ಕೈತಪ್ಪಿದ್ದರಿಂದ ಬಿಜೆಪಿ ವಿರುದ್ಧ ಸೆಟೆದು ನಿಂತಿದ್ದ ಸುನಿಲ್ ವಲ್ಯಾಪುರೆ ಮತ್ತೆ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ ಜಾಧವ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ. ಅಂತೂ ಇಂತೂ ಚಿಂಚೋಳಿ ಚುನಾವಣಾ ಕಣ ರಂಗೇರುತ್ತಿದೆ.

 

emedialine

View Comments

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

24 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago