ಬಿಸಿ ಬಿಸಿ ಸುದ್ದಿ

ಸಂವಿಧಾನ ದಿನಾಚರಣೆ ಕೃತಿಯಲ್ಲಿ ಅಂಬೇಡ್ಕರ್ ಅವಮಾನ ಖಂಡಿಸಿ ರಸ್ತೆ ತಡೆ ಚಳುವಳಿ

ಜೇವರ್ಗಿ: ಇದೇ ನವೆಂಬರ್ ೨೬ರಂದು ಸರ್ಕಾರದಿಂದ ಆಚರಿಸಲು ಉದ್ದೇಶಿಸಿರುವ ಸಂವಿಧಾನ ದಿನಾಚರಣೆ ಅಂಗವಾಗಿ ಶಿಕ್ಷಣ ಇಲಾಖೆಯಿಂದ ಹೊರ ತಂದಿರುವ ಕೃತಿಯಲ್ಲಿ ಅಂಬೇಡ್ಕರ್ ಅವರು ಒಬ್ಬರೇ ಸಂವಿಧಾನ ಬರೆದಿಲ್ಲವೆಂದು ಹೆಸರಿಸಿ ಅಂಬೇಡ್ಕರ್ ಅವರಿಗೆ ಅವಮಾನಿಸಲಾಗಿದೆ ಎಂದು ಖಂಡಿಸಿ ತಾಲ್ಲೂಕು ದಲಿತ ಸಮನ್ವಯ ಸಮಿತಿ ಕಾರ್ಯಕರ್ತರು ಪಟ್ಟಣದ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ರಸ್ತೆ ತಡೆ ಚಳುವಳಿ ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ದೇಶದಲ್ಲಿನ ಮಹಾನ್ ಗ್ರಂಥಗಳನ್ನು ಬರೆದವರು ದಲಿತರು ಮತ್ತು ಹಿಂದುಳಿದವರು. ಅದರಂತೆ ಜಗತ್ತೇ ಒಪ್ಪುವಂತಹ ಸಂವಿಧಾನವನ್ನು ಬರೆದವರು ಡಾ. ಬಿ.ಆರ್. ಅಂಬೇಡ್ಕರ್ ಅವರು. ಅದನ್ನು ಅರಗಿಸಿಕೊಳ್ಳಲಾಗದ ಕೆಲವು ಕೋಮುವಾದಿ ಮನಸ್ಸಿನವರು ರಾಜ್ಯದಲ್ಲಿನ ಶಿಕ್ಷಣ ಇಲಾಖೆ ಮೂಲಕ ಅಂಬೇಡ್ಕರ್ ಅವರ ಹೆಸರನ್ನು ವಿದ್ಯಾರ್ಥಿಗಳ ಮನಸ್ಸಿನಿಂದ ಮರೆಮಾಚಲು ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಎಂದು ಅಮೇರಿಕ ಮಾಜಿ ಅಧ್ಯಕ್ಷ ಬರಾಕ್ ಓಬಾಮ್ ಅವರು ಹೇಳಿದ್ದಾರೆ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರೂ ಹೇಳಿದ್ದಾರೆ. ಅಲ್ಲದೆ ವಿಶ್ವಸಂಸ್ಥೆಯೂ ಅಂಬೇಡ್ಕರ್ ಜನ್ಮದಿನವನ್ನು ವಿಶ್ವ ಜ್ಞಾನದ ದಿನವೆಂದು ಆಚರಿಸುತ್ತಿದೆ. ಇದೆಲ್ಲ ಗೊತ್ತಿದ್ದು, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಂಬೇಡ್ಕರ್ ಅವರು ಸಂವಿಧಾನ ಒಬ್ಬರೆ ಬರೆದಿಲ್ಲ ಎನ್ನುವ ಮೂಲಕ ಇಡೀ ಅಂಬೇಡ್ಕರ್ ಸಮುದಾಯವನ್ನೇ ಅವಮಾನಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಶಿಕ್ಷಣ ಇಲಾಖೆ ಕಾರ್ಯದರ್ಶಿ ಮತ್ತು ಆಯುಕ್ತರನ್ನು ಕೆಲಸದಿಂದ ತೆಗೆದುಹಾಕಬೇಕು, ಶಿಕ್ಷಣ ಇಲಾಖೆ ಸುರೇಶಕುಮಾರ್ ಅವರು ಸಚಿವ ಸ್ಥಾನಕ್ಕೆ ರಾಜಿನಾಮೇ ನೀಡಬೇಕು, ಸರ್ಕಾರ ಈಗ ಹೊರತಂದ ಕೃತಿಯನ್ನು ತಕ್ಷಣ ಹಿಂಪಡೆದು, ಅಂಬೇಡ್ಕರ್ ಅವರೇ ಸಂವಿಧಾನ ಬರೆದವರೆಂದು ಘೋಸಿಸಬೇಕು ಎಂದು ಒತ್ತಾಯಿಸಿದ ಅವರು ಒಂದು ವೇಳೆ ಬೇಡಿಕೆಗಳನ್ನು ಇಡೇರಿಸದೇ ಹೋದಲ್ಲಿ ಬಂದ್ ಕರೆ ನೀಡಲಾಗುವುದು ಎಂದು ಗ್ರೆಡ್-೨ ತಹಸಿಲ್ದಾರ್ ಡಾ. ರಮೇಶ್ ಕೆ ಹಾಲು ಅವರ ಮೂಲಕ ಮುಖ್ಯಮಂತ್ರಿಗಳಿಗೆ ಪ್ರತಿಭಟನೆಕಾರರು ಮನವಿ ಪತ್ರ ಸಲ್ಲಿಸಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಚಂದ್ರಶೇಖರ್ ಹರನಾಳ್, ಭೀಮರಾಯ್ ನಗನೂರ್, ಮಲ್ಲಣ್ಣ ಕೊಡಚಿ, ಶ್ರೀಮಂತ್ ಧನಕರ್, ಶಿವಶರಣಪ್ಪ ಮಾರಡಗಿ, ದವಲಪ್ಪ ಮದನ್, ಶಾಂತಪ್ಪ ಕಟ್ಟಿಮನಿ, ರವಿ ಕುರಳಗೇರಾ, ಶ್ರೀಹರಿ ಕರಕಿಹಳ್ಳಿ, ದೇವಿಂದ್ರ ಮುದಬಾಳ್, ಶರಣಬಸಪ್ಪ ಲಖಣಾಪೂರ್, ಬಸವರಾಜ್ ಹೆಗಡೆ, ಮಹೇಶ್ ಕೋಕಿಲೆ, ವಿಶ್ವರಾಧ್ಯ ಮಾಯಿ, ವಿಶ್ವರಾಧ್ಯ ಬಡಿಗೇರ್, ಭಾಗಣ್ಣ ಸಿದ್ನಾಳ್, ಸಿದ್ದು ಶರ್ಮಾ, ಸಿದ್ದಪ್ಪ ಆಲೂರ್, ಸಿದ್ರಾಮ್ ಕಟ್ಟಿ, ಮಲ್ಲಿಕಾರ್ಜುನ್ ಧನಕರ್, ಸಂಗಮೇಶ್ ಹರನೂರ್, ಧರ್ಮಣ್ಣ ಮಾವನೂರ್, ಭಾಗಣ್ಣ ಕಟ್ಟಿ, ದೇವಿಂದ್ರ ಅಟ್ಟದಮನಿ, ಭೀಮರಾಯ್ ಹರನಾಳ್, ಯಮನೇಶ್ ಅಂಕಲಗಿ ಮುಂತಾದವರು ಪಾಲ್ಗೊಂಡಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago